2ಜಿ ಸ್ಪೆಕ್ಟ್ರಂ ಹಗರಣ: ಅಂತಿಮ ವಿಚಾರಣೆ ಇಂದಿನಿಂದ

2ಜಿ ತರಂಗಾಂತರ ಹಂಚಿಕೆ ಹಗರಣದ ಅಂತಿಮ ವಿಚಾರಣೆ ಬುಧವಾರ ನಡೆಯಲಿದೆ. ಹಗರಣದ ಪ್ರಮುಖ ಆರೋಪಿಗಳಾಗಿರುವ ಮಾಜಿ ದೂರಸಂಪರ್ಕ ಖಾತೆ ಸಚಿವ ಎ.ರಾಜ, ಡಿಎಂಕೆ ಸಂಸದೆ ಕನಿಮೊಳಿ ಹಾಗೂ ಕೆಲ ಕಾರ್ಪೊರೇಟ್ ಅಧಿಕಾರಿಗಳು ಸ್ಪೆಷಲ್ ಕೋರ್ಟ್ ಮುಂದೆ ಹಾಜರಾಗುವ ಸಾಧ್ಯತೆಗಳಿವೆ...
2ಜಿ ಸ್ಪೆಕ್ಟ್ರಂ ಹಗರಣ: ಅಂತಿಮ ವಿಚಾರಣೆ ಇಂದಿನಿಂದ
2ಜಿ ಸ್ಪೆಕ್ಟ್ರಂ ಹಗರಣ: ಅಂತಿಮ ವಿಚಾರಣೆ ಇಂದಿನಿಂದ

ನವದೆಹಲಿ: 2ಜಿ ತರಂಗಾಂತರ ಹಂಚಿಕೆ ಹಗರಣದ ಅಂತಿಮ ವಿಚಾರಣೆ ಬುಧವಾರ ನಡೆಯಲಿದೆ. ಹಗರಣದ ಪ್ರಮುಖ ಆರೋಪಿಗಳಾಗಿರುವ ಮಾಜಿ ದೂರಸಂಪರ್ಕ ಖಾತೆ ಸಚಿವ ಎ.ರಾಜ, ಡಿಎಂಕೆ ಸಂಸದೆ ಕನಿಮೊಳಿ ಹಾಗೂ ಕೆಲ ಕಾರ್ಪೊರೇಟ್ ಅಧಿಕಾರಿಗಳು ಸ್ಪೆಷಲ್ ಕೋರ್ಟ್ ಮುಂದೆ ಹಾಜರಾಗುವ ಸಾಧ್ಯತೆಗಳಿವೆ.

2ಜಿ ಹಗರಣದ ಎಲ್ಲ ಕೇಸ್‍ಗಳ ವಿಚಾರಣೆ ನಡೆಸುತ್ತಿರುವ ಸ್ಪೆಷಲ್ ಸಿಬಿಐ ನ್ಯಾಯಾಧೀಶ ಒ.ಪಿ. ಸಹನಿ ಸಾಕ್ಷಿಗಳ ಹೇಳಿಕೆಯನ್ನು ದಾಖಲಿಸಿದ ಬಳಿಕ ಏ.15ಕ್ಕೆ ಅಂತಿಮ ವಿಚಾರಣೆ ನಡೆಸುವುದಾಗಿ ತಿಳಿಸಿದ್ದರು. 2ಜಿ ತರಂಗಾಂತರ ಹಂಚಿಕೆ ಹಗರಣದ ವಿಚಾರಣೆಯನ್ನು 2011ರ ನ.11ಕ್ಕೆ ಆರಂಭಿಸಲಾಗಿತ್ತು.

122 ಪರವಾನಿಗೆ ನೀಡುವ ವೇಳೆ ಸುಮಾರು ರು.30,984 ಕೋಟಿ ನಷ್ಟವಾಗಿದೆ ಎಂದು ಸಿಬಿಐ ಚಾರ್ಜ್‍ಶೀಟ್‍ನಲ್ಲಿ ಉಲ್ಲೇಖಿಸಿದೆ. ಸಿಬಿಐ ಇಲ್ಲಿಯವೆರೆಗೆ ಸುಮಾರು 154 ಸಾಕ್ಷಿಗಳ ವಿಚಾರಣೆ ನಡೆಸಿದೆ. ಆರೋಪಿಗಳ ಪರ ಸುಮಾರು 29 ಮಂದಿಯನ್ನು ವಿಚಾರಣೆಗೊಳಪಡಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com