
ಮುಂಬೈ: ಶಿವಸೇನೆಯ ಪ್ರಕಾಶ್ ಸಾವಂತ್ ನಿಧನದಿಂದ ತೆರವಾಗಿದ್ದ ಮಹಾರಾಷ್ಟ್ರದ ಬಾಂದ್ರಾ(ಪೂರ್ವ) ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ ಶಿವಸೇನೆಯ ಅಭ್ಯರ್ಥಿ ತೃಪ್ತಿ ಸಾವಂತ್ ಗೆಲುವು ಸಾಧಿಸಿದ್ದಾರೆ.
ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಕಾಂಗ್ರೆಸ್ ಮುಖಂಡ ನಾರಾಯಣ ರಾಣೆ ಅವರನ್ನು ತೃಪ್ತಿ ಸಾವಂತ್ ಅವರು 19,000 ಮತಗಳ ಅಂತರದಿಂದ ಮಣಿಸಿ ಗೆಲುವಿನ ನಗೆ ಬೀರಿದ್ದಾರೆ.
ಶಿವಸೇನೆಯ ಪ್ರಕಾಶ್ ಸಾವಂತ್ ಅವರ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ಉಪ ಚುನಾವಣೆ ನಡೆಸಲಾಗಿತ್ತು. ಪ್ರಕಾಶ್ ಸಾವಂತ್ ಅವರ ಪತ್ನಿ ತೃಪ್ತಿ ಅವರನ್ನು ಶಿವಸೇನೆ ಉಪ ಚುನಾವಣೆಯಲ್ಲಿ ಕಣಕ್ಕಿಳಿಸಿತ್ತು.
Advertisement