
ಹೆನೆನ್: ಕಳೆದುಕೊಂಡ ಬಾಯ್ ಫ್ರೆಂಡ್ ನನ್ನು ಮರಳಿ ಒಲಿಸಿಕೊಳ್ಳುವ ಸಲುವಾಗಿ ತನ್ನ ಮುಖದ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಲು ಚೀನಾದ ಬಾಲೆಯೊಬ್ಬಳು ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಬಾರಿ ಸುದ್ದಿ ಮಾಡುತ್ತಿದ್ದಾಳೆ.
ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಳ್ಳುವುದು ಈಗೆಲ್ಲಾ ದೊಡ್ಡ ವಿಷಯವೇನಲ್ಲಾ ವಿಶ್ವ ಪ್ರಸಿದ್ಧ ಮೈಕೆಲ್ ಜಾಕ್ಸನ್ ಕೂಡ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿದ್ದರು ಎಂದು ಹೇಳಬಹುದು. ಆದರೆ, ಈ ಹುಡುಗಿ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿರುವುದಕ್ಕೆ ಆಕೆಯ ಬಾಯ್ ಫ್ರೆಂಡ್ ಕಾರಣವಂತೆ, ತನ್ನನ್ನು ಬಿಟ್ಟು ಹೋದ ಗೆಳಯನನ್ನು ಹಿಂಪಡೆಯುವ ಸಲುವಾಗಿ ಈಕೆ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿದ್ದಾಳಂತೆ.
ಮಧ್ಯಚೀನಾದ ಹೆನೆನ್ ನಗರದ ನಿವಾಸಿಯಾಗಿರುವ ಲೀ ಹೀ ಡ್ಯಾನಿ ಎಂಬ ಈ 15 ರ ಬಾಲೆ ತನ್ನ ಮುಖದ ಕಣ್ಣು, ಮೂಗು, ತುಟಿ, ಕೆನ್ನೆ ಹಾಗೂ ದೇಹದ ಇನ್ನಿತರೆ ಭಾಗಗಳಿಗೆ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿದ್ದಾಳೆ.
ಪ್ಲಾಸ್ಟಿಕ್ ಸರ್ಜರಿ ನಂತರ ಸುಂದರ ಪೋಟೋಗಳನ್ನು ವಿವಿಧ ಆಯಾಮಗಳಲ್ಲಿ ತೆಗೆದು ತನ್ನ ವೈಬೋ ಖಾತೆಯಲ್ಲಿ (ಚೀನಾ ಸಾಮಾಜಿಕ ಜಾಲತಾಣ) ಹಾಕಿದ್ದಾಳೆ. ಈ ಸುಂದರ ಚೆಲುವೆಯನ್ನು ಕಂಡ ಅಲ್ಲಿನ ವೈಬೋ ಖಾತೆಯ ಜನರು ಇವಳನ್ನು ಫಾಲೋ ಮಾಡಲು ಪ್ರಾರಂಭಿಸಿದ್ದಾರೆ. ಇದೀಗ ಈ ಬಾಲೆಗೆ ಕನಿಷ್ಟ ಎಂದರೂ 5ಲಕ್ಷಕ್ಕೂ ಹೆಚ್ಚು ಮಂದಿ ಫಾಲೋವರ್ ಗಳಿದ್ದಾರಂತೆ.
ಬಾಲೆಯ ಈ ನಿರ್ಧಾರಕ್ಕೆ ತೀವ್ರ ರೀತಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿರುವ ಕೆಲವು ಮಹಿಳೆಯರು ಬಾಲೆಗೆ ಬುದ್ದಿ ಮಾತು ಹೇಳುತ್ತಿದ್ದಾರಂತೆ. ಮತ್ತಷ್ಟು ಮಂದಿ ಇದು ಫೋಟೋಶಾಪ್ ನಿಂದ ಮಾಡಿದ ಫೋಟೋ ಗಳಾಗಿವೆ. ಫೋಟೋಗಳಲ್ಲಿ ನೈಜತೆ ಇಲ್ಲ.ರಿಯಲ್ ಬಾರ್ಬಿ ಎಂಬ ಹೆಸರು ಪಡೆಯುವ ಸಲುವಾಗಿ ತಾಂತ್ರಿಕವಾಗಿ ಫೋಟೋಗಳನ್ನು ತಯಾರು ಮಾಡಲಾಗುತ್ತಿದೆ. ಪ್ರಚಾರಕ್ಕಾಗಿ ಹುಡುಗಿ ಈ ರೀತಿಯ ಫೋಟೋಗಳನ್ನು ಹಾಕುತ್ತಿದ್ದಾಳೆ ಎನ್ನುತ್ತಿದ್ದಾರೆ.
ಮತ್ತಷ್ಟು ಜನರು ಆಕೆಯ ಕುರಿತಂತೆ ಒಳ್ಳೆಯ ಮಾತುಗಳನ್ನಾಡುತ್ತಿದ್ದು, ವ್ಯಕ್ತಿ ಉನ್ನತ ಮಟ್ಟಕ್ಕೇರಿದಾಗ ಅಲ್ಲಿ ಧನಾತ್ಮಕ ಹಾಗೂ ಋಣಾತ್ಮಕ ಪ್ರತಿಕ್ರಿಯೆಗಳು ಇದ್ದೇ ಇರುತ್ತವೆ. ಕೆಲವರಿಗೆ ತುಂಬಾ ಸೌಂದರ್ಯವಾಗಿರುವವರನ್ನು ಕಂಡರೆ ಅಸೂಯೆ ಭಾವ ಬರುತ್ತದೆ ಈ ಬಗ್ಗೆ ತಲೆ ಕೆಡಿಸಿಕೊಳ್ಳಬಾರದು ಎಂಬೆಲ್ಲಾ ಮಾತುಗಳನ್ನು ಆಡುತ್ತಿದ್ದಾರೆ.
ಒಟ್ಟಾರೆ ಗೆಳೆಯನನ್ನು ಹಿಂಪಡೆಯುವ ಸಲುವಾಗಿ ಬಾಲಕಿ ಮಾಡಿದ ಈ ಪ್ರಯತ್ನ ಇದೀಗ ಅಂತರ್ಜಾಲ ಲೋಕದಲ್ಲಿ ದೊಡ್ಡ ಸುದ್ದಿಯಾಗುತ್ತಿದೆ ಅಲ್ಲದೆ, ಅಂತಾರ್ಜಾಲ ಈ ಸುದ್ದಿ ವೈರಲ್ ಆಗಿದೆ.
Advertisement