ಕಾಶ್ಮೀರದಲ್ಲಿ ಪಾಕ್ ಸೇನೆಯ 'ಜಿಹಾದ್'ಗೆ ನಮ್ಮ ಬೆಂಬಲವಿದೆ: ಉಗ್ರ ಹಫೀಜ್ ಸಯೀದ್

ಜಮ್ಮು ಮತ್ತು ಕಾಶ್ಮೀರದಲ್ಲಿನ ಜನರಿಗೆ ಪಾಕಿಸ್ತಾನ ಸೇನೆ ನೀಡುತ್ತಿರುವ ಬೆಂಬಲಕ್ಕೆ ತಮ್ಮ ಸಂಘಟನೆ ನೆರವು ನೀಡುತ್ತಿದೆ ಎಂದು ನಿಷೇಧಿತ ಉಗ್ರಗಾಮಿ...
ಹಫೀಜ್ ಸಯೀದ್
ಹಫೀಜ್ ಸಯೀದ್
Updated on: 

ಇಸ್ಲಾಮಾಬಾದ್: ಜಮ್ಮು ಮತ್ತು ಕಾಶ್ಮೀರದಲ್ಲಿನ ಜನರಿಗೆ ಪಾಕಿಸ್ತಾನ ಸೇನೆ ನೀಡುತ್ತಿರುವ ಬೆಂಬಲಕ್ಕೆ ತಮ್ಮ ಸಂಘಟನೆ ನೆರವು ನೀಡುತ್ತಿದೆ ಎಂದು ನಿಷೇಧಿತ ಉಗ್ರಗಾಮಿ ಸಂಘಟನೆ ಜಮಾತ್ ಉದ್ ದಾವಾದ(ಜೆಯುಡಿ) ಮುಖ್ಯಸ್ಥ ಹಫೀಜ್ ಸಯೀದ್ ಒಪ್ಪಿಕೊಂಡಿದ್ದಾನೆ.

ಚಾನೆಲ್ 24 ನಡೆಸಿದ ಸಂದರ್ಶನದಲ್ಲಿ ಮಾತನಾಡಿದ ಸಯೀದ್, ಕಾಶ್ಮೀರದ ಲಕ್ಷಾಂತರ ಜನರು ಸ್ವಾತಂತ್ರ್ಯದ ಬೇಡಿಕೆಯನ್ನು ಇಟ್ಟಿದ್ದಾರೆ. ಆದರೆ ಅವರನ್ನು ಭಾರತ ಗುಂಡಿನ ದಾಳಿಯ ಮೂಲಕ ಹತ್ತಿಕ್ಕುತ್ತಿದೆ. ನಾವೂ ಕೂಡ ಅದಕ್ಕೆ ತಕ್ಕ ಪ್ರತ್ಯುತ್ತರ ನೀಡುತ್ತೇವೆ ಎಂದು ಸಯೀದ್ ಹೇಳಿದ್ದಾನೆ.

ಕಾಶ್ಮೀರದ ಜನರ ಸ್ವಾತಂತ್ರ್ಯಕ್ಕಾಗಿ ನಾವು ಪಾಕಿಸ್ತಾನ, ಪಾಕಿಸ್ತಾನ ಸರ್ಕಾರ ಹಾಗೂ ಪಾಕಿಸ್ತಾನದ ಮಿಲಿಟರಿಗೆ ಸಹಾಯ ಮಾಡುತ್ತೇವೆ. ನಾವು ಇದನ್ನು ಜಿಹಾದ್ ಎಂದು ಕರೆಯುತ್ತೇವೆ. ಕಾಶ್ಮೀರದ ಜನರಿಗೆ ಅವರ ಹಕ್ಕುಗಳು ದೊರೆಯಬೇಕೆನ್ನುವ ಪಾಕ್ ಧೋರಣೆಯನ್ನು ಮುಂದುವರಿಸಿಕೊಂಡು ಹೋಗುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com