ರಾಹುಲ್ ಗಾಂಧಿ ಹೇಳಿಕೆಗೆ ತಿರುಗೇಟು ನೀಡಿದ ನರೇಂದ್ರ ಮೋದಿ

ಭೂಮಸೂದೆ ಕಾಯ್ದೆ ವಿರೋಧಿಸಿ ಮೋದಿ ವಿರುದ್ಧ ತೀವ್ರ ವಾಗ್ಧಾಳಿ ಮುಂದುವರೆಸಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಹೇಳಿಕೆಗೆ ತಿರುಗೇಟು ನೀಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ನಮ್ಮ ಸರ್ಕಾರ ಯಾವಾಗಲೂ ಬಡವರಿಗಾಗಿ ಕೆಲಸ ಮಾಡಲಿದೆ...
ಪ್ರಧಾನಮಂತ್ರಿ ನರೇಂದ್ರ ಮೋದಿ
ಪ್ರಧಾನಮಂತ್ರಿ ನರೇಂದ್ರ ಮೋದಿ
Updated on

ನವದೆಹಲಿ: ಭೂಮಸೂದೆ ಕಾಯ್ದೆ ವಿರೋಧಿಸಿ ಮೋದಿ ವಿರುದ್ಧ ತೀವ್ರ ವಾಗ್ಧಾಳಿ ಮುಂದುವರೆಸಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಹೇಳಿಕೆಗೆ ತಿರುಗೇಟು ನೀಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ನಮ್ಮ ಸರ್ಕಾರ ಯಾವಾಗಲೂ ಬಡವರಿಗಾಗಿ ಕೆಲಸ ಮಾಡಲಿದೆ. ಭೂ ಮಸೂದೆ ಕಾಯ್ದೆ ತಿದ್ದುಪಡಿ ಕುರಿತಂತೆ ತಪ್ಪು ಮಾಹಿತಿಯನ್ನು ರವಾನಿಸಬೇಡಿ ಎಂದು ಹೇಳಿದ್ದಾರೆ.

ಈ ಕುರಿತಂತೆ ಇಂದು ನವದೆಹಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ನರೇಂದ್ರ ಮೋದಿ ಅವರು, ನೀವು ಏನೇ ಹೇಳಿದರೂ ಅದನ್ನು ತಲೆಎತ್ತಿ ಭರವಸೆ ಹಾಗೂ ವಿಶ್ವಾಸ ಮೂಡಿಸುವಂತೆ ಹೇಳಿ. ಸರ್ಕಾರ ಜನರಿಗೆ ಏನೇನು ಮಾಡುತ್ತಿದೆ ಎಂಬುದನ್ನು ಜನರಿಗೆ ಕೂಗಿ ಹೇಳಿ. ನಾನು ಈ ವರೆಗೂ ಯಾವುದೇ ನಿರ್ಧಾರ ಕೈಗೊಂಡಿದ್ದರೂ ಅದು ಬಡಜನರ ಅಭಿವೃದ್ಧಿ, ಶಿಕ್ಷಣ, ಸಹಾಯಕ್ಕಾಗಿ. ಅವರಿಗೆ ಸಹಾಯವಾಗುವ ಯೋಜನೆಗಳನ್ನು ಜಾರಿಗೆ ತರಲು ಚಿಂತಿನೆ ನಡೆಸುತ್ತಿದ್ದೇವೆ.

ಸರ್ಕಾರ ಎಂದಿಗೂ ರೈತರ ಪರವಾಗಿಯೇ ಇದೆ. ಅಕಾಲಿಕ ಮಳೆಯಿಂದಾಗಿ ಅಪಾರ ನಷ್ಟ ಹೊಂದಿದ ರೈತರಿಗೆ ಪರಿಹಾರ ನೀಡಿದೆವು. ಸರ್ಕಾರವನ್ನು ದೂಷಿಸುವುದು, ಸರ್ಕಾರದ ನಿಲುವುಗಳನ್ನು ತಪ್ಪಾಗಿ ಹೇಳುವುದು ಕೆಲವರಿಗೆ ಹುಟ್ಟಿನಿಂದ ಬರುತ್ತದೆ. ಬಿಜೆಪಿಯನ್ನು ತುಳಿಯಬೇಕೆನ್ನುವುದು ಕೆಲವರಿಗೆ ಹವ್ಯಾಸವಾಗಿಬಿಟ್ಟಿದೆ. ವಿಮರ್ಶೆ ಮಾಡುವ ಹಕ್ಕು ಅವರಿಗೆ ಇದೆ. ಆದರೆ, ವಿಮರ್ಶೆ ಮಾಡುವ ಜನರು ತಾವು ತಟಸ್ಥರೀತಿಯಲ್ಲಿದ್ದೇವೆ ಎಂದು ಹೇಳುವ ಹಕ್ಕು ಅವರಿಗಿಲ್ಲ ಎಂದು ಮೋದಿ ರಾಹುಲ್ ವಿರುದ್ಧ ಕಿಡಿಕಾರಿದ್ದಾರೆ.

 56 ದಿನಗಳ ರಜೆ ಮುಗಿಸಿ ದೆಹಲಿಗೆ ಆಗಮಿಸಿದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಸರ್ಕಾರದ ವಿವಾದಿತ ಭೂಮಸೂದೆ ಕಾಯ್ದೆ ವಿರೋಧಿಸಿ ಇಂದು ರಾಮಲೀಲಾ ಮೈದಾನದಲ್ಲಿ ಬೃಹತ್ ರ್ಯಾಲಿ ಪ್ರತಿಭಟನಾ ಕಾರ್ಯಕ್ರಮವನ್ನು ಆಯೋಜಿಸಿತ್ತು. ಕಾರ್ಯಕ್ರಮದಲ್ಲಿ ಮಾತನಾಡಿದ್ದ ರಾಹುಲ್ ಗಾಂಧಿ ಮೋದಿ ವಿರುದ್ಧ ತೀರ್ವ ವಾಗ್ದಾಳಿಗೆ ಮುಂದಾಗಿದ್ದರು. ಅಲ್ಲದೆ, ಭೂಮಸೂದೆ ಕಾಯ್ದೆಯಲ್ಲಿ ಆದ ತಿದ್ದುಪಡಿಯಿಂದಾಗಿ ರೈತರು ಕಂಗಾಲಾಗಿದ್ದಾರೆ. ರೈತರು ಇಂದು ರಾತ್ರಿ ಕಣ್ಣು ಮುಚ್ಚಿ ಮಲಗಿದರೆ ನಾಳೆ ಏಳುವ ಹೊತ್ತಿಗೆ ಅವರ ಭೂಮಿ ಏನಾಗುತ್ತದೆ ಎನ್ನುವ ಭಯದಲ್ಲಿದ್ದಾರೆ.

ಯಾವಾಗ ಏನಾಗುತ್ತದೆ ಎಂದು ಯಾರೂ ಹೇಳಲು ಸಾಧ್ಯವಾಗುತ್ತಿಲ್ಲ. ಮೋದಿ ಸರ್ಕಾರ ರೈತ ವಿರೋಧಿ ಸರ್ಕಾರ. ರೈತರಿಗಿರುವ ಶಕ್ತಿ ಪ್ರಧಾನಮಂತ್ರಿ ಅವರಿಗೆ ಅರ್ಥವಾಗುತ್ತಿಲ್ಲ. ಬಡವರಿಗಾಗಿ ಯುಪಿಎ ಸರ್ಕಾರ ಉತ್ತಮ ಯೋಜನೆಗಳನ್ನ ತಂದಿತ್ತು. ಆದರೆ ಎನ್ ಡಿಎ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಬಡವರ ಪರವಾಗಿ ಯಾವ ಯೋಜನೆಯನ್ನೂ ಜಾರಿಗೆ ತರಲಿಲ್ಲ. ಬದಲಿಗೆ ಬಡವರ ಭೂಮಿಯನ್ನೇ ಲಪಟಾಯಿಸುವ ಪ್ರಯತ್ನ ಮಾಡುತ್ತಿದೆ ಎಂದು ಹೇಳಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com