ಇನ್ನು ರೈಲ್ವೆ ಇ-ಟಿಕೆಟ್ ಜೊತೆಗೆ ಸರಕು ವಿಮೆ

ಇನ್ನು ಮುಂದೆ ರೈಲು ಪ್ರಯಾಣಿಕರು ತಮ್ಮ ಲಗೇಜುಗಳ ಸುರಕ್ಷತೆಯ ಬಗ್ಗೆ ಹೆಚ್ಚು ಚಿಂತಿಸಬೇಕಿಲ್ಲ. ಪ್ರಯಾಣ ವೇಳೆ ಲ್ಯಾಪ್‍ಟಾಪ್, ಮೊಬೈಲ್, ಚಿನ್ನ, ಮುಂತಾದ ಬೆಲೆಬಾಳುವ ವಸ್ತುಗಳನ್ನು ಕೊಂಡೊಯ್ಯಲು ಹಿಂದುಮುಂದು ನೋಡಬೇಕಿಲ್ಲ...
ಇನ್ನು ರೈಲ್ವೆ ಇ-ಟಿಕೆಟ್ ಜೊತೆಗೆ ಸರಕು ವಿಮೆ
ಇನ್ನು ರೈಲ್ವೆ ಇ-ಟಿಕೆಟ್ ಜೊತೆಗೆ ಸರಕು ವಿಮೆ

ನವದೆಹಲಿ: ಇನ್ನು ಮುಂದೆ ರೈಲು ಪ್ರಯಾಣಿಕರು ತಮ್ಮ ಲಗೇಜುಗಳ ಸುರಕ್ಷತೆಯ ಬಗ್ಗೆ ಹೆಚ್ಚು ಚಿಂತಿಸಬೇಕಿಲ್ಲ. ಪ್ರಯಾಣ ವೇಳೆ ಲ್ಯಾಪ್‍ಟಾಪ್, ಮೊಬೈಲ್, ಚಿನ್ನ, ಮುಂತಾದ ಬೆಲೆಬಾಳುವ ವಸ್ತುಗಳನ್ನು ಕೊಂಡೊಯ್ಯಲು ಹಿಂದುಮುಂದು ನೋಡಬೇಕಿಲ್ಲ.

ಭಾರತೀಯ ರೈಲ್ವೆ ಮತ್ತು ಪ್ರವಾಸೋದ್ಯಮ ಕಾರ್ಪೋರೇಷನ್ (ಐಆರ್‍ಸಿಟಿಸಿ) ಆನ್‍ಲೈನ್‍ನಲ್ಲಿ ಟಿಕೆಟ್ ಕಾಯ್ದಿರಿಸುವ ಪ್ರಯಾಣಿಕರಿಗೆ ಸರಕು ವಿಮೆ ಸೌಲಭ್ಯ ನೀಡುವ ಬಗ್ಗೆ ಚಿಂತನೆ ನಡೆಸಿದೆ.

ರೈಲ್ವೆ ವೆಬ್‍ಸೈಟ್‍ನಲ್ಲಿ ಪ್ರಯಾಣಿಕ ಇ-ಟಿಕೆಟ್ ಬುಕ್ ಮಾಡಿದಾಗ, ಆತ ಕೊಂಡೊಯ್ಯುವ ಸರಕುಗಳ ಮೇಲೆ ವಿಮೆ ಮಾಡಿಸುವ ಆಯ್ಕೆಯನ್ನೂ ಅದರಲ್ಲಿ ಕೊಡಲಾಗುತ್ತದೆ. ಒಮ್ಮೆ ಈ ಸೌಲಭ್ಯ ಪಡೆದ ನಂತರ ಆ ಪ್ರಯಾಣದಲ್ಲಿ ಲಗೇಜುಗಳು ಕಳುವಾದಲ್ಲಿ ಅಥವಾ ಕಳೆದು ಹೋದಲ್ಲಿ, ಅವುಗಳ ಮೇಲೆ ವಿಮೆ ಹಣ ಪಡೆಯಬಹುದಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com