
ನವದೆಹಲಿ: ಆಮ್ ಆದ್ಮಿ ಪಕ್ಷದ ಶೋಕಾಸ್ ನೋಟಿಸ್‌ಗೆ ಖಡಕ್ಕಾಗಿ ಉತ್ತರಿಸಿದ ಪ್ರಶಾಂತ್ ಭೂಷಣ್ ತನ್ನ ವಿರುದ್ಧ ಮಾಡಲಾಗಿರುವ ಆರೋಪವನ್ನು ನಿರಾಕರಿಸಿದ್ದಾರೆ. ಅದೇ ವೇಳೆ ರಾಷ್ಟ್ರೀಯ ಶಿಸ್ತು ಸಮಿತಿಯ ಸಂವಿಧಾನದ ಬಗ್ಗೆ ಪ್ರಶಾಂತ್ ಭೂಷಣ್ ಪ್ರಶ್ನಿಸಿದ್ದಾರೆ.
ರಾಷ್ಟ್ರೀಯ ಶಿಸ್ತು ಸಮಿತಿ ಪುನಾರಚನೆಯನ್ನು ಉದ್ದೇಶಿಸಿ ಪ್ರತಿಕ್ರಿಯಿಸಿದ ಭೂಷಣ್, ಆಶಿಶ್ ಖೇತನ್ ಮತ್ತು ದಿನೇಶ್ ವಘೇಲಾ ಅವರೊಂದಿಗೆ ನನಗೆ ನೋಟಿಸ್ ಕಳುಹಿಸಿರುವುದು ಹಾಸ್ಯಾಸ್ಪದ. ಈ ಸಮಿತಿಯಲ್ಲಿನ ಸಂವಿಧಾನದ ಬಗ್ಗೆ ನನಗೆ ಗೊತ್ತಿಲ್ಲ, ಇದನ್ನು ಹೇಗೆ ರೂಪಿಸಿದರು ಎಂಬುದರ ಬಗ್ಗೆಯೂ ನನಗೆ ತಿಳಿದಿಲ್ಲ ಎಂದಿದ್ದಾರೆ.
ಅದೇ ವೇಳೆ ಆಪ್ ನಾಯಕ ಆಶಿಶ್ ಖೇತನ್ ಅವರು 2ಜಿ ಹಗರಣದ ಆರೋಪ ಹೊತ್ತಿರುವ ಸಂಸ್ಥೆಯೊಂದರ ಪರವಾಗಿ 2011ರಲ್ಲಿ ಹಣಕ್ಕಾಗಿ ಸುದ್ದಿ ಬರೆದಿದ್ದಾರೆ .ಈ ಕೆಲಸ ಮಾಡಿದ್ದಕ್ಕಾಗಿಯೇ ಖೇತನ್ ಅವರನ್ನು ದೆಹಲಿ ಡೈಲಾಗ್ ಕಮಿಷನ್‌ನ ಅಧ್ಯಕ್ಷನಾಗಿ ಮತ್ತು ಎನ್‌ಡಿಸಿ ಸದಸ್ಯನಾಗಿ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.
ಏತನ್ಮಧ್ಯೆ, ಆಪ್ ಕಾರ್ಯದರ್ಶಿ ಮತ್ತು ಎನ್‌ಡಿಸಿ ಸದಸ್ಯ ಪಂಕಜ್ ಗುಪ್ತಾ ಅವರು ರು. 2 ಕೋಟಿ ದೇಣಿಗೆ ಸ್ವೀಕರಿಸಿದ್ದಾರೆ ಎಂಬುದಾಗಿಯೂ ಪ್ರಶಾಂತ್ ಭೂಷಣ್ ಆರೋಪಿಸಿದ್ದಾರೆ.
Advertisement