ಧರ್ಮವೀರ್ ಗಾಂಧಿ
ದೇಶ
ಆಪ್‌ನಿಂದ ಧರ್ಮವೀರ್ ಗಾಂಧಿ ವಜಾ
ಯೋಗೇಂದ್ರ ಯಾದವ್ ಮತ್ತು ಪ್ರಶಾಂತ್ ಭೂಷಣ್ ಅವರನ್ನು ರಾಷ್ಟ್ರೀಯ ಕಾರ್ಯಕಾರಿಣಿ ಸಮಿತಿಯಿಂದ ಉಚ್ಛಾಟನೆ ಮಾಡಿದ್ದನ್ನು ಪ್ರಶ್ನಿಸಿದ್ದಕ್ಕಾಗಿ...
ನವದೆಹಲಿ: ಯೋಗೇಂದ್ರ ಯಾದವ್ ಮತ್ತು ಪ್ರಶಾಂತ್ ಭೂಷಣ್ ಅವರನ್ನು ರಾಷ್ಟ್ರೀಯ ಕಾರ್ಯಕಾರಿಣಿ ಸಮಿತಿಯಿಂದ ಉಚ್ಛಾಟನೆ ಮಾಡಿದ್ದನ್ನು ಪ್ರಶ್ನಿಸಿದ್ದಕ್ಕಾಗಿ ಧರ್ಮವೀರ್ ಗಾಂಧಿ ಅವರನ್ನು ಆಮ್ ಆದ್ಮಿ ಪಕ್ಷ ಮಂಗಳವಾರ ವಜಾ ಮಾಡಿದೆ.
ಭೂಷಣ್, ಯಾದವ್, ಆನಂದ್ ಕುಮಾರ್ ಮತ್ತು ಅಜಿತ್ ಝಾ ಅವರನ್ನು ಪಕ್ಷದಿಂದ ಉಚ್ಛಾಟಿಸಿದ ಬೆನ್ನಲ್ಲೇ ಆಪ್ ಧರ್ಮವೀರ್ ಗಾಂಧಿಗೆ ಕೋಕ್ ನೀಡಿದೆ.
ಭೂಷಣ್ ಮತ್ತು ಯಾದವ್ ಅವರನ್ನು ಉಚ್ಛಾಟಿಸಿದ್ದನ್ನು ಗಾಂಧಿ ಕಟುವಾಗಿ ವಿಮರ್ಶಿಸಿದ್ದರು. ಮಾರ್ಚ್ 28ರಂದು ನಡೆದ ಆಪ್‌ನ ನ್ಯಾಷನಲ್ ಕೌನ್ಸಿಲ್ ಸಭೆಯಿಂದಲೂ ಗಾಂಧಿ ಸಭಾತ್ಯಾಗ ಮಾಡಿ ಪ್ರತಿಭಟನೆಯ ಬಿಸಿ ಮುಟ್ಟಿಸಿದ್ದರು.
ಇದೀಗ ಗಾಂಧಿಯವರನ್ನು ಪಕ್ಷದಿಂದ ವಜಾಗೈದಿರುವುದನ್ನು ಸಮರ್ಥಿಸಿಕೊಂಡ ಆಪ್ ನಾಯಕ ಅಶುತೋಷ್, ಈ ನಿರ್ಧಾರ ಪಕ್ಷದ ಉನ್ನತ ಮಟ್ಟದ ನಿರ್ಧಾರವಾಗಿದ್ದು, ಇದನ್ನು ಎಲ್ಲರೂ ಗೌರವಿಸಬೇಕು ಎಂದಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ