ಹಿಂದಿ ದಿವಸ್ ಪ್ರಶಸ್ತಿಯಿಂದ ಇಂದಿರಾ, ರಾಜೀವ್ ಗಾಂಧಿ ಹೆಸರು ತೆಗೆದು ಹಾಕಿದ ಸರ್ಕಾರ

ಹಿಂದಿ ದಿವಸ್ ಆಚರಣೆಯ ಸಂದರ್ಭದಲ್ಲಿ ಕೇಂದ್ರ ಗೃಹ ಇಲಾಖೆ ನೀಡುವ ಪ್ರಶಸ್ತಿಗಳಲ್ಲಿ ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿಯವರ ಹೆಸರನ್ನು....
ಇಂದಿರಾ ಗಾಂಧಿ -ರಾಜೀವ್ ಗಾಂಧಿ
ಇಂದಿರಾ ಗಾಂಧಿ -ರಾಜೀವ್ ಗಾಂಧಿ

ನವದೆಹಲಿ: ಹಿಂದಿ ದಿವಸ್ ಆಚರಣೆಯ ಸಂದರ್ಭದಲ್ಲಿ ಕೇಂದ್ರ ಗೃಹ ಇಲಾಖೆ ನೀಡುವ ಪ್ರಶಸ್ತಿಗಳಲ್ಲಿ ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿಯವರ ಹೆಸರನ್ನು ಕೇಂದ್ರ ಸರ್ಕಾರ ತೆಗೆದು ಹಾಕಿದೆ.

ಮಾಧ್ಯಮ ವರದಿಗಳ ಪ್ರಕಾರ ಹಿಂದಿ ದಿವಸ್ ಪ್ರಶಸ್ತಿಗಳಲ್ಲಿ 'ಇಂದಿರಾ ಗಾಂಧಿ ರಾಜ್‌ಸಭಾ  ಪುರಸ್ಕಾರ್ ' ಮತ್ತು 'ರಾಜೀವ್ ಗಾಂಧಿ ರಾಷ್ಟ್ರೀಯ ಗ್ಯಾನ್- ವಿಗ್ಯಾನ್ ಮೌಲಿಕ್ ಪುಸ್ತಕ ಲೇಖನ್  ಪುರಸ್ಕಾರ್‌' ಎಂಬ ಪ್ರಶಸ್ತಿಗಳನ್ನು ನೀಡಲಾಗುತ್ತಿತ್ತು. ಆದರೆ ಇದೀಗ ಪ್ರಶಸ್ತಿಗಳ ಹೆಸರನ್ನು ರಾಜ್‌ಸಭಾ ಕೀರ್ತಿ ಪುರಸ್ಕಾರ್ ಮತ್ತು ರಾಜ್‌ಸಭಾ ಗೌರವ್ ಪುರಸ್ಕಾರ್ ಎಂದು ಬದಲಾಯಿಸಲಾಗಿದೆ.

ಪ್ರಶಸ್ತಿಗಳ ಹೆಸರು ಬದಲಾವಣೆ ಬಗ್ಗೆ ಗೃಹ ಸಚಿವಾಲಯ ಆದೇಶ ಹೊರಡಿಸಿದ್ದು, ಇದು  ಮಾರ್ಚ್ 25 ರಿಂದಲೇ ಜಾರಿಗೆ ಬಂದಿದೆ.

ಕಾಂಗ್ರೆಸ್ ನ ಹಿರಿಯ ನಾಯಕರ ಹೆಸರನ್ನು ಪ್ರಶಸ್ತಿಯಿಂದ ತೆಗೆದು ಹಾಕಿರುವುದರ ಬಗ್ಗೆ ಕಾಂಗ್ರೆಸ್ ಆಕ್ರೋಶ ವ್ಯಕ್ತ ಪಡಿಸಿದೆ. ನಾಯಕರ ಹೆಸರನ್ನು ಕೈ ಬಿಡುವ ಮೂಲಕ ಬಿಜೆಪಿ ನೇತೃತ್ವದ ಸರ್ಕಾರ ರಾಜಕೀಯ ಹಗೆ ಸಾಧಿಸುತ್ತಿದೆ ಎಂದು ಕಾಂಗ್ರೆಸ್ ದೂರಿದೆ.

ಆದಾಗ್ಯೂ, ನಾಯಕರ ಹೆಸರನ್ನು ಕೈ ಬಿಟ್ಟಿರುವುದು ರಾಜಕೀಯ ಪ್ರೇರಿತವಾಗಿಲ್ಲ, ಇದು ಆಡಳಿತ ಮಂಡಳಿಯ ತೀರ್ಮಾನವಾಗಿದೆ ಎಂದು ಗೃಹ ಇಲಾಖೆ ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com