ಪೋರ್‌ಬಂದರಿನಲ್ಲಿ ಪಾಕ್ ದೋಣಿ ವಶ: 8 ಮಂದಿ ಬಂಧನ

ಪೋರ್‌ಬಂದರಿನ ಕರಾವಳಿ ತೀರದಲ್ಲಿ ಅನುಮಾನಾಸ್ಪದವಾಗಿ ಚಲಿಸುತ್ತಿದ್ದ ಪಾಕಿಸ್ತಾನಕ್ಕೆ ಸೇರಿದ ದೋಣಿಯನ್ನು ಭಾರತೀಯ ನೌಕಾ ಪಡೆ...
ಭಾರತೀಯ ನೌಕಾ ಪಡೆ ಅಧಿಕಾರಿಗಳ ಸುದ್ದಿಗೋಷ್ಠಿ
ಭಾರತೀಯ ನೌಕಾ ಪಡೆ ಅಧಿಕಾರಿಗಳ ಸುದ್ದಿಗೋಷ್ಠಿ

ಅಹಮದಾಬಾದ್ : ಪೋರ್‌ಬಂದರಿನ ಕರಾವಳಿ ತೀರದಲ್ಲಿ ಅನುಮಾನಾಸ್ಪದವಾಗಿ ಚಲಿಸುತ್ತಿದ್ದ ಪಾಕಿಸ್ತಾನಕ್ಕೆ ಸೇರಿದ ದೋಣಿಯನ್ನು ಭಾರತೀಯ ನೌಕಾ ಪಡೆ ಹಾಗೂ ಕರಾವಳಿ ಪಡೆ ವಶಕ್ಕೆ ಪಡೆದುಕೊಂಡಿದ್ದು, 8 ಮಂದಿಯನ್ನು ಬಂಧಿಸಿದ್ದಾರೆ.

ಪಾಕಿಸ್ತಾನಕ್ಕೆ ಸೇರಿದ ಈ ದೋಣಿಯಲ್ಲಿ ಸಾಗಿಸುತ್ತಿದ್ದ 140 ಕೆಜಿ  ಹೆರಾಯಿನ್ ವಶಪಡಿಸಿಕೊಡಿರುವ ನೌಕಾಪಡೆ ಮೊಬೈಲ್ ಫೋನ್ ಸೇರಿದಂತೆ ಹಲವು ವಸ್ತುಗಳನ್ನು ಜಪ್ತಿ ಮಾಡಿದೆ.

ಬಂಧಿತ 8 ಮಂದಿ ಪಾಕಿಸ್ತಾನಕ್ಕೆ ಸೇರಿದ ನಾವಿಕರಾಗಿದ್ದಾರೆ ಎಂದು ವಿಚಾರಣೆ ನಡೆಸಿದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 26 /11 ಮುಂಬಯಿ ದಾಳಿ ಮಾದರಿಯಲ್ಲೇ ಮತ್ತೊಂದು ವಿಧ್ವಂಸಕ ಕೃತ್ಯ ನಡೆಸಲು ಶಸ್ತ್ರಾಸ್ತ್ರಗಳನ್ನು ಸಮುದ್ರದ ಮೂಲಕ ಪಾಕ್ ಉಗ್ರರು ಸಾಗಿಸುತ್ತಿದ್ದಾರೆಂದು ಇಂಟೆಲಿಜೆನ್ಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಡಿಸೆಂಬರ್ 31 2014 ರಂದು  ಗುಜರಾತಿನ ಪೋರ್‌ಬಂದರಿನ ಕರಾವಳಿಯಲ್ಲಿ  ಶಸ್ತ್ರಾಸ್ತ್ರಗಳನ್ನು ಸಾಗಿಸುತ್ತಿದ್ದ ಪಾಕಿಸ್ತಾನಕ್ಕೆ ಸೇರಿದ ಮೀನುಗಾರಿಕಾ ದೋಣಿಯನ್ನು ಭಾರತೀಯ ನೌಕಾಪಡೆ ಸ್ಫೋಟಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com