ಶಕ್ತಿ ಕೇಂದ್ರ ಸಂಸತ್ ಭವನಕ್ಕಿಲ್ಲ ಅಗತ್ಯ ಭದ್ರತೆ

ದೇಶದ ಪ್ರಮುಖ ಶಕ್ತಿ ಕೇಂದ್ರ ಸಂಸತ್ ಭವನಕ್ಕೆ ಅಗತ್ಯ ಭದ್ರತೆಯೇ ಇಲ್ಲ.....
ಸಂಸತ್ ಭವನ
ಸಂಸತ್ ಭವನ
ನವದೆಹಲಿ: ದೇಶದ ಪ್ರಮುಖ ಶಕ್ತಿ ಕೇಂದ್ರ ಸಂಸತ್ ಭವನಕ್ಕೆ ಅಗತ್ಯ ಭದ್ರತೆಯೇ ಇಲ್ಲವಂತೆ.  ಹೀಗಂತ ತಜ್ಞರ ಸಮಿತಿಯೊಂದು ಆಘಾತಕಾರಿ ಮಾಹಿತಿಯನ್ನು ಹೊರಹಾಕಿದೆ. 
ಸಂಸತ್ತಿನ ಪ್ರಮುಖ 12 ಗೇಟ್ ಗಳಲ್ಲಿ  ಕನಿಷ್ಟ ಒಂದು ಸಿಸಿಟಿವಿ ಕ್ಯಾಮೆರಾ ಕೆಲಸ ಮಾಡುತ್ತಿಲ್ಲ. ಇನ್ನೂ ಸಂಸತ್ ಭವನವನ್ನು ಕಾಯುವ ಸೈನಿಕರಿಗೆ ಅಗತ್ಯವಾದ 
ಬುಲೆಟ್ ಪ್ರೂಫ್ ಜಾಕೆಟ್ ಕೂಡ ಇಲ್ಲದಿರುವುದು ದುರಾದೃಷ್ಟಕರ. 
ಸಂಸತ್ ಭವನದ ಭದ್ರತೆ ಸಂಬಂಧ ಅಧ್ಯಯನ ನಡೆಸಿದ ಕೇಂದ್ರ ಗೃಹ ಇಲಾಖೆ ಮಾಜಿ ಕಾರ್ಯದರ್ಶಿ ಆರ್.ಕೆ ಸಿಂಗ್ ಹಾಗೂ ದೆಹಲಿ ಮಾಜಿ ಪೊಲೀಸ್ ಆಯುಕ್ತ ಸತ್ಪಾಲ್ ಸಿಂಗ್ ನೇತೃತ್ವದ ಸಮಿತಿ ಸ್ಪೀಕರ್ ಸುಮಿತ್ರಾ ಮಹಾಜನ್ ಅವರಿಗೆ ವರದಿ ನೀಡಿದೆ. 
ಸಂಸತ್ ಭವನಕ್ಕೆ ಸೂಕ್ತ ಭದ್ರತೆ ಒದಗಿಸಲಾಗಿದೆ. ಯಾವುದೇ ಲೋಪವಿಲ್ಲ, ಸಂಸದರಿಗೆ ಅಗತ್ಯ ರಕ್ಷಣೆ ನೀಡಲಾಗಿದೆ ಎಂದು ಸಂಸತ್ ವ್ಯವಹಾರಗಳ ಭದ್ರತಾ ಸಚಿವ ರಾಜೀವ್ ಪ್ರತಾಪ್ ರುಡಿ ಸಮರ್ಥಸಿಕೊಂಡಿದ್ದಾರೆ.  ಅಗತ್ಯ ಬಿದ್ದರೆ ಭದ್ರತೆಗೆ ಮತ್ತಷ್ಟು  ಕ್ರಮಕೈಗೊಳ್ಳುವ ಭರವಸೆ ನೀಡಿದ್ದಾರೆ. 
2001 ರ ಡಿಸೆಂಬರ್ 13ರಂದು ಶಸ್ತ್ರ ಸಜ್ಜಿತ ಉಗ್ರರು ಸಂಸತ್ ಭವನಕ್ಕೆ ನುಗ್ಗಿ ಮನ ಬಂದಂತೆ ಗುಂಡಿನ ದಾಳಿ ನಡೆಸಿದ್ರು.  ಈ ಘಟನೆಯಲ್ಲಿ 9 ಮಂದಿ ಸಾವನ್ನಪ್ಪಿದ್ದರು. ಒಂದು ವರ್ಷದ ನಂತರ ದಾಳಿಯ ಪ್ರಮುಖ ರೂವಾರಿ ಅಪ್ಜಲ್ ಗುರು ಸೇರಿದಂತೆ ನಾಲ್ವರನ್ನು ಬಂಧಿಸಲಾಗಿತ್ತು. ವಿಚಾರಣೆ ನಡೆಸಿದ ನ್ಯಾಯಾಲಯ ಅಪ್ಜಲ್ ಗುರುವಿಗೆ ಜೀವಾವಧಿ ಶಿಕ್ಷೆ ನೀಡಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com