ಭಾರತದ ಪ್ರಸಿದ್ಧ ಲೇಖಕ ಚೇತನ್‌ ಭಗತ್‌ ವಿರುದ್ಧ 1 ಕೋಟಿ ರು. ಮಾನನಷ್ಟ ಮೊಕದ್ದಮೆ

ಭಾರತದ ಪ್ರಸಿದ್ಧ ಲೇಖಕ ಚೇತನ್‌ ಭಗತ್‌ ವಿರುದ್ಧ ಒಂದು ಕೋಟಿ ರು.ಮಾನನಷ್ಟ ಮೊಕದ್ದಮೆಯನ್ನು ಬಿಹಾರದ ದುಮ್ರಾವೋ ಅರಸು ವಂಶಸ್ಥರೊಬ್ಬರು ಹೂಡಿದ್ದಾರೆ...
ಚೇತನ್‌ ಭಗತ್‌
ಚೇತನ್‌ ಭಗತ್‌

ನವದೆಹಲಿ: ಭಾರತದ ಪ್ರಸಿದ್ಧ ಲೇಖಕ ಚೇತನ್‌ ಭಗತ್‌ ವಿರುದ್ಧ ಒಂದು ಕೋಟಿ ರು. ಮಾನನಷ್ಟ ಮೊಕದ್ದಮೆಯನ್ನು ಬಿಹಾರದ ದುಮ್ರಾವೋ ಅರಸು ವಂಶಸ್ಥರೊಬ್ಬರು ಹೂಡಿದ್ದಾರೆ.

ಚೇತನ್‌ ಭಗತ್‌ ಅವರು ತಮ್ಮ ಹೊಸ ಕಾದಂಬರಿ "ಹಾಫ್ ಗರ್ಲ್ ಫ್ರೆಂಡ್‌' ನಲ್ಲಿ ದುಮ್ರಾವೋ ಅರಸು ಮನೆತನವನ್ನು ಕೆಟ್ಟದಾಗಿ ಚಿತ್ರಿಸಿರುವುದಾಗಿ ದುಮ್ರಾವೋ ರಾಜಮನೆತನದ ಅರಸನಾಗಿದ್ದ ಮಹಾರಾಜಾ ಬಹದ್ದೂರ್‌ ಕಮಲ್‌ ಸಿಂಗ್‌ ಅವರ ಹಿರಿಯ ಪುತ್ರ ಚಂದ್ರ ವಿಜಯ್‌ ಸಿಂಗ್‌ ಅವರು ಚೇತನ ಭಗತ್‌ ವಿರುದ್ಧ ಮಾನನಷ್ಟ ದಾವೆಯನ್ನು ಹೂಡಿ 1 ಕೋಟಿ ರೂ. ಪರಿಹಾರವನ್ನು ಕೇಳಲಿದ್ದಾರೆ ಎಂಬುದಾಗಿ ಖಾಸಗಿ ಪತ್ರಿಕೆಯೊಂದು ವರದಿ ಮಾಡಿದೆ.

ದುಮ್ರಾವೋ ರಾಜ ಮನೆತನದವರನ್ನು ಕುಡುಕರು ಮತ್ತು ಗ್ಯಾಂಬ್ಲಿರ್ ಗಳೆಂದು ಚಿತ್ರೀಕರಿಸಿರುವುದು ಸಂಪೂರ್ಣ ರಾಜ ಕುಟುಂಬಕ್ಕೆ ಅವಮಾನಕಾರಿಯಾಗಿದೆ ಎಂದು ಚಂದ್ರ ವಿಜಯ್‌ ಸಿಂಗ್‌ ಆರೋಪಿಸಿದ್ದಾರೆ.

ದೂರಿನನ್ವಯ ಮೇ 1ರಂದು ತನ್ನ ಮುಂದೆ ಹಾಜರಾಗುವಂತೆ ದೆಹಲಿ ಹೈಕೋರ್ಟ್‌ ಲೇಖಕ ಚೇತನ್‌ ಭಗತ್‌ ಹಾಗೂ "ಹಾಫ್ ಗರ್ಲ್ ಫ್ರೆಂಡ್‌' ಕಾದಂಬರಿ ಪ್ರಕಾಶನ ಸಂಸ್ಥೆ ರೂಪಾ ಪಬ್ಲಿಕೇಶನ್ಸ್‌ಗೆ ಸಮನ್ಸ್‌ ಜಾರಿ ಮಾಡಿದೆ.

ದೂರಿನ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿದ ಚಂದ್ರ ವಿಜಯ್‌ ಸಿಂಗ್‌ ಅವರ ಪುತ್ರ ಶಿವಾಂಗ್‌ ವಿಜಯ್‌ ಸಿಂಗ್‌, ಚೇತನ್‌ ಭಗತ್‌ರಿಗೆ ಅವರ ಹಾಫ್ ಗರ್ಲ್ ಫ್ರೆಂಡ್‌ ಕಾದಂಬರಿಯಲ್ಲಿನ ತಪ್ಪನ್ನು ಸರಿಪಡಿಸುವಂತೆ ಹಲವು ಬಾರಿ ಕೇಳಿದರು ಪ್ರಯೋಜನವಾಗಲಿಲ್ಲ. ನಮ್ಮ ಮಾತಿಗೆ ಬೆಲೆ ಕೊಡಲಿಲ್ಲ. ಹೀಗಾಗಿ ಅವರ ವಿರುದ್ಧ ಮಾನನಷ್ಟ ದಾವೆ ಹೂಡುವುದಲ್ಲದೇ ನಮಗೆ ಬೇರೆ ದಾರಿ ಇರಲಿಲ್ಲಿ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com