ರೈತ ಗಜೇಂದ್ರ ಸಿಂಗ್ ಆತ್ಮಹತ್ಯೆಗೆ ಆಪ್ ಪ್ರಚೋದನೆಯೇ ಕಾರಣ: ದೆಹಲಿ ಪೊಲೀಸ್

ಜಂತರ್ ಮಂತರ್‌ನಲ್ಲಿ ಆಮ್ ಆದ್ಮಿ ಪಕ್ಷದ ಪ್ರತಿಭಟನಾ ರ್ಯಾಲಿ ವೇಳೆ ರೈತ ಗಜೇಂದ್ರ ಸಿಂಗ್ ಆತ್ಮಹತ್ಯೆ ಮಾಡಿಕೊಂಡಿರುವುದು ನಮ್ಮ ಕಾನೂನು....
ಆತ್ಮಹತ್ಯೆ ಮಾಡಿಕೊಳ್ಳುವ  ಮುನ್ನ ಗಜೇಂದ್ರ ಸಿಂಗ್ (ಕೃಪೆ : ಪಿ ಟಿ ಐ )
ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಗಜೇಂದ್ರ ಸಿಂಗ್ (ಕೃಪೆ : ಪಿ ಟಿ ಐ )

ನವದೆಹಲಿ: ಜಂತರ್ ಮಂತರ್‌ನಲ್ಲಿ ಆಮ್ ಆದ್ಮಿ ಪಕ್ಷದ ಪ್ರತಿಭಟನಾ ರ್ಯಾಲಿ ವೇಳೆ ರೈತ ಗಜೇಂದ್ರ ಸಿಂಗ್ ಆತ್ಮಹತ್ಯೆ ಮಾಡಿಕೊಂಡಿರುವುದು ನಮ್ಮ ಕಾನೂನು ವ್ಯಾಪ್ತಿಗೆ ಬರದೇ ಇರುವ ಕಾರಣ ಈ ಬಗ್ಗೆ ನಾವು ತನಿಖೆ ನಡೆಸಲು ಸಾಧ್ಯವಿಲ್ಲ ಎಂದು ದೆಹಲಿ ಪೊಲೀಸರು ನವದೆಹಲಿಯ ಜಿಲ್ಲಾ ಮೆಜಿಸ್ಟ್ರೇಟರ್‌ಗೆ ಪತ್ರ ಬರೆದಿದ್ದಾರೆ.

ರೈತ ಗಜೇಂದ್ರ ಸಿಂಗ್ ಆತ್ಮಹತ್ಯೆಗೆ ಆಮ್ ಆದ್ಮಿ ಪಕ್ಷವೇ ಕಾರಣ ಎಂದು ದೆಹಲಿ ಪೊಲೀಸರು ಆರೋಪಿಸಿದ್ದಾರೆ. ಆಪ್ ಕಾರ್ಯಕರ್ತರು ಮತ್ತು ನಾಯಕರು ಗಜೇಂದ್ರ ಸಿಂಗ್ ಅವರಿಗೆ ಆತ್ಮಹತ್ಯೆ ಮಾಡಲು ಪ್ರೇರೇಪಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಸಬೇಕಾಗಿದೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

ರ್ಯಾಲಿ ನಡೆಯುವ ಸ್ಥಳದಲ್ಲಿ ಅಂದು ಇನ್ಸ್‌ಪೆಕ್ಟರ್ ಎಸ್ ಎಸ್ ಯಾದವ್ ಅವರು ಡ್ಯೂಟಿಯಲ್ಲಿದ್ದರು. ಗಜೇಂದ್ರ ಅವರು ಮರ ಹತ್ತಿದಾಗಲೇ ನಾನು ಕಂಟ್ರೋಲ್ ರೂಂಗೆ ವೈರ್‌ಲೈಸ್ ನಲ್ಲಿ ಸಂದೇಶ ಕಳುಹಿಸಿ, ಆಪ್ ಕಾರ್ಯಕರ್ತರಲ್ಲಿ ಗಜೇಂದ್ರನನ್ನು ಮರದಿಂದ ಇಳಿಸುವಂತೆ ವಿನಂತಿ ಮಾಡಿದೆ.  ಆತನನ್ನು ಕೆಳಗಿಳಿಸುವಂತೆ ನಾವು ಆಪ್ ಕಾರ್ಯಕರ್ತರಲ್ಲಿ ಬಿನ್ನವಿಸಿದ್ದು ರಕ್ಷಣಾ ಕಾರ್ಯಚರಣೆಯ ವಾಹನಕ್ಕೆ ಜಾಗ ಬಿಡುವಂತೆ ಕೇಳಿಕೊಂಡೆವು. ಆದರೆ ಆಪ್ ಕಾರ್ಯಕರ್ತರು ಪೊಲೀಸರು ರ್ಯಾಲಿಯ ವಿರುದ್ಧವಾಗಿದ್ದಾರೆ ಎಂದು ಕೂಗುತ್ತಾ ನಮ್ಮನ್ನು ಮುಂದಕ್ಕೆ ಹೋಗಲು ಬಿಡಲಿಲ್ಲ ಎಂದು ಯಾದವ್ ಎಫ್‌ಐಆರ್‌ನಲ್ಲಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com