ಮೇಕೆದಾಟು
ದೇಶ
ಮೇಕೆದಾಟು ಯೋಜನೆ: ಲೋಕಸಭೆಯಲ್ಲಿ ವಾಕ್ಸಮರ
ಕರ್ನಾಟಕದ ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ಗುರುವಾರ ಲೋಕಸಭೆ ಕಲಾಪದಲ್ಲಿ ತಮಿಳುನಾಡು ಸಂಸದರು ತೀವ್ರ ವಿರೋಧ....
ನವದೆಹಲಿ: ಕರ್ನಾಟಕದ ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ಗುರುವಾರ ಲೋಕಸಭೆ ಕಲಾಪದಲ್ಲಿ ತಮಿಳುನಾಡು ಸಂಸದರು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಇದಕ್ಕೆ ಕರ್ನಾಟಕದ ಸಂಸದರು ತಕ್ಕ ತಿರುಗೇಟು ನೀಡಿದ್ದಾರೆ.
ಎಐಎಡಿಎಂಕೆಯ ವೇಣುಗೋಪಾಲ್ ನೇತೃತ್ವದಲ್ಲಿ ಕರ್ನಾಟಕದ ಮೇಕೆದಾಟು ಯೋಜನೆಗೆ ತಮಿಳುನಾಡು ಸಂಸದರು ಆಕ್ಷೇಪ ವ್ಯಕ್ತಪಡಿಸಿದಾಗ, ಕರ್ನಾಟಕದ ಸಂಸದರಾದ ಅನಂತ ಕುಮಾರ್, ಶೋಭಾ ಕರಂದ್ಲಾಜೆ, ಮುದ್ದೇಹನುಮೇಗೌಡ, ಬಿಎನ್ ಚಂದ್ರಪ್ಪ, ಡಿಕೆ ಸುರೇಶ್ ಪ್ರತ್ಯುತ್ತರ ನೀಡಿದರು.
ಈ ಸಂದರ್ಭದಲ್ಲಿ ಕಲಾಪದಲ್ಲಿ ಕೋಲಾಹಲ ಉಂಟಾಯಿತು. ಕರ್ನಾಟಕದ ಮೇಕೆದಾಟು ಯೋಜನೆಗೆ ತಮಿಳುನಾಡು ಸಂಸದರು ವಿರೋಧ ವ್ಯಕ್ತಪಡಿಸುವುದು ಸರಿಯಲ್ಲ ಎಂದು ಕರ್ನಾಟಕದ ಸಂಸದರು ಬಲವಾಗಿ ಪ್ರತಿಪಾದಿಸಿದರು.


