
ನವದೆಹಲಿ: ಬಜೆಟ್ ಅಧಿವೇಶನಕ್ಕೆ ಗೈರಾಗಿ 57 ದಿವಸಗಳ ಸುದೀರ್ಘ ಪ್ರವಾಸದಿಂದ ವಾಪಸಾಗಿರುವ ಎಐಸಿಸಿ ಉಪಾಧ್ಯಾಕ್ಷ ರಾಹುಲ್ ಗಾಂಧಿ ಇಂದು ಕೇದಾರನಾಥ ಯಾತ್ರೆ ಆರಂಭಿಸಿದ್ದಾರೆ.
ಉತ್ತಾರಖಂಡದ ಬೆಟ್ಟಸಾಲುಗಳಲ್ಲಿರುವ ಚಾರ್ ಧಾಮ್ ಗಳಲ್ಲಿ ಒಂದಾಗಿರುವ ಪ್ರಸಿದ್ಧ ಕೇದಾರನಾಥನಿಗೆ ಪೂಜೆ ಸಲ್ಲಿಸಲು ಕಾಂಗ್ರೆಸ್ ಯುವರಾಜ 18 ಕೀಮೀ ಕಾಲುನಡಿಗೆಯಲ್ಲಿ ತೆರಳಲಿದ್ದಾರೆ.
ಗುರುವಾರ ಬೆಳಗ್ಗೆ 11. 30ಕ್ಕೆ ರಾಹುಲ್ ಗಾಂಧಿ ಗೌರಿ ಕುಂಡದಿಂದ ಪಾದಯಾತ್ರೆ ಹೊರಡಲಿದ್ದಾರೆ.
ರಾತ್ರಿ ಕೇದಾರನಾಥದಲ್ಲೇ ತಂಗಲಿರುವ ರಾಹುಲ್ ಗಾಂಧಿ ಶುಕ್ರವಾರ ಬೆಳಗ್ಗೆ 9. 30 ಕ್ಕೆ ಕೇದಾರನಾಥನಿಗೆ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ರಾಹುಲ್ ಗಾಂಧಿಗೆ ಅನೇಕ ಕಾಂಗ್ರೆಸ್ ನಾಯಕರು ಸಾಥ್ ನೀಡಲಿದ್ದಾರೆ.
ಹಿಮಾಲಯ ಬೆಟ್ಟ ಸಾಲುಗಳಲ್ಲಿರುವ ಚಾರ್ ಧಾಮ್ ಗಳಲ್ಲಿ ಕೇದಾರನಾಥ ದೇಗುಲ ಸಮುದ್ರ ಮಟ್ಟದಿಂದ 11. 755 ಅಡಿ ಎತ್ತರದಲ್ಲಿದೆ. 2013 ರ ಜೂನ್ ನಲ್ಲಿ ಮೇಘಸ್ಫೋಟದಿಂದ ಕೇದಾರನಾಥ ದೇವಾಲಯ ತತ್ತರಿಸಿತ್ತು.
Advertisement