ಖಾತರಿಗೆ ಇನ್ನು ಕೌಶಲ ಸೇರ್ಪಡೆ

ಪ್ರಧಾನಿ ನರೇಂದ್ರ ಮೋದಿ ಅವರ ಕೌಶಲ್ಯಾಭಿವೃದ್ಧಿ ನರೇಗಾ ವ್ಯಾಪ್ತಿಗೂ ಬರಲಿದೆ. ಈ ಮೂಲಕ ಉದ್ಯೋಗ ಖಾತರಿ ಯೋಜನೆಯನ್ನು...
ಕಾರ್ಮಿಕರು  (ಸಾಂದರ್ಭಿಕ ಚಿತ್ರ)
ಕಾರ್ಮಿಕರು (ಸಾಂದರ್ಭಿಕ ಚಿತ್ರ)

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಕೌಶಲ್ಯಾಭಿವೃದ್ಧಿ  ನರೇಗಾ ವ್ಯಾಪ್ತಿಗೂ ಬರಲಿದೆ. ಈ ಮೂಲಕ ಉದ್ಯೋಗ ಖಾತರಿ ಯೋಜನೆಯನ್ನು ಜೀವನಾವಶ್ಯಕತೆಗಳನ್ನು ಪೂರೈಸುವ ಉದ್ಯೋಗ (ಲೈವ್ಲಿಹುಡ್ಸ್ ಇನ್ ಫುಲ್ ಎಂಪ್ಲಾಯ್ ಮೆಂಟ್) ವನ್ನಾಗಿಸಲು ಕೇಂದ್ರ ನಿರ್ಧರಿಸಿದೆ. ಜುಲೈ ತಿಂಗಳ ಮಧ್ಯ ಭಾಗದಿಂದ ದೇಶಾದ್ಯಂತ ಅದನ್ನು ಜಾರಿಗೊಳಿಸಲು ಉದ್ದೇಶಿಸಿದೆ. ಯುಪಿಎ ಸರ್ಕಾರದ ಅವಧಿಯಲ್ಲಿ ಹಲವು ಅಧ್ವಾನಗಳ ಗೂಡಾಗಿತ್ತು ಖಾತರಿ ಯೋ ಜನೆ. ಅವುಗಳನ್ನುಸರಿಪಡಿಸುವ ವಾಗ್ದಾನವನ್ನು  ಪ್ರಧಾನಿ ಮೋದಿ ನೀಡಿದ್ದರು. ಅದರಂತೆ ಕೇಂದ್ರ ಸರ್ಕಾರ ನಡೆದುಕೊಳ್ಳುತ್ತಿದೆ. ರಾಜ್ಯಗಳಿಗೆ ಸೂಚನೆ: ಎಲ್ಲ ರಾಜ್ಯಗಳಿಗೂ ಈ ಕೂಡಲೇ ತಮ್ಮ ಕಾರ್ಯಕ್ರಮವನ್ನು ತಯಾರಿಸಿಕೊಳ್ಳಲೂ ಸೂಚನೆ ನೀಡಲಾಗಿದೆ. ದೀನದಯಾಳ್ ಉಪಾಧ್ಯಾಯ ಗ್ರಾಮೀಣ ಕೌಶಲ್ಯ ಯೋ ಜನೆ ಹಾಗೂ ರಾಷ್ಟ್ರೀಯ ಜೀವನಾಧಾರ ಮಿಷನ್‍ಗಳ ಜೊತೆಗೆ ಹೊಸ ಯೋ ಜನೆಯನ್ನು ಜಾರಿಗೆ ತಂದಿರುವುದಾಗಿ ಗ್ರಾಮೀಣಾಭಿವೃದ್ಧಿ ಖಾತೆ ಸಹಾಯಕ ಸಚಿವ ಸುದರ್ಶನ್ ಭಗತ್ ಲೋಕಸಭೆಗೆ ನೀಡಿದ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ. ಇದೇ ವೇಳೆ ಖಾತರಿ ಯೋ ಜನೆಯಡಿಯಲ್ಲಿ ರೈಲು ಹಳಿ ಜೋಡಣೆ, ಸೌರ ಶಕ್ತಿ ಯೋಜನೆಯನ್ನು ಜಾರಿಗೊಳಿಸುವುದಿಲ್ಲ ಎಂದು ಸರ್ಕಾರ ತಿಳಿಸಿದೆ.

ಯೋಜನೆಯಲ್ಲೇನಿದೆ?
ಉದ್ಯೋಗ ನೀಡುವುದು ಮಾತ್ರವಲ್ಲ ಕೆಲಸಗಾರರಲ್ಲಿ ಕೌಶಲ್ಯ ಅಭಿವೃದ್ಧಿಗೆ ಒತ್ತು.
ಇಂಥ ಕ್ರಮದ ಮೂಲಕ ಜನರಲ್ಲಿ ಸ್ವಾವಲಂಬನೆ ರೂಪಿಸಲು ಆದ್ಯತೆ
 ಸ್ವಯಂ ಉದ್ಯೋಗ ಪ್ರಾರಂಬಿsಸುವುದಾದರೂ ಈ ಕೌಶಲ್ಯ ತರಬೇತಿ ಉಪಯೋ ಗ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com