ಹಳ್ಳಿಗಳ ಅಭಿವೃದ್ಧಿ ಹೇಗೆ ಎಂಬುದರ ಬಗ್ಗೆ ಚಿಂತಿಸಬೇಕಿದೆ: ಮೋದಿ
ನವದೆಹಲಿ: ಯಾವ ರೀತಿ ಹಳ್ಳಿಗಳನ್ನು ಅಭಿವೃದ್ಧಿಗೊಳಿಸಬಹುದು ಎಂಬುದರ ಬಗ್ಗೆ ಚಿಂತಿಸಬೇಕಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಹೇಳಿದ್ದಾರೆ.
ರಾಷ್ಟ್ರೀಯ ಪಂಚಾಯತ್ ರಾಜ್ ದಿನಾಚರಣೆ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ವಿಚಾರಸಂಕಿರಣದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಹಳ್ಳಿಗಳಿಂದ ಭಾರತ ಜೀವಿಸುತ್ತಿದೆ ಎಂದು ಮಹಾತ್ಮ ಗಾಂಧಿ ಹೇಳಿದ್ದರು. ಈಗ ನಾವು ಹಳ್ಳಿಗಳನ್ನು ಯಾವ ರೀತಿ ಅಭಿವೃದ್ಧಿ ಮಾಡಬಹುದು ಎಂಬುದರ ಬಗ್ಗೆ ಚಿಂತಿಸಬೇಕಿದೆ ಎಂದು ತಿಳಿಸಿದ್ದಾರೆ.
ಹಳ್ಳಿಗಳೆಂದರೆ ಗೌರವ ಹಾಗೂ ಅದಕ್ಕೆ ಆದಂತಹ ಸ್ಥಾನಮಾನ ನೀಡಬೇಕು. ನಮ್ಮ ಹಳ್ಳಿಗಳೆಂದರೆ ನಮಗೆ ಹೆಮ್ಮೆಯಾಗಬೇಕು ಎಂದ ಅವರು, ಹಳ್ಳಿ ಜನತೆಯ ಕನಸು ದೊಡ್ಡದಾಗಿರುತ್ತದೆ. ಅಂತಹವರ ಕನಸು ನನಸು ಮಾಡುವುದು ನಮ್ಮ ಜವಾಬ್ದಾರಿಯಾಗಿರುತ್ತದೆ.
ನಾವು ನಮ್ಮ ಹಳ್ಳಿಗಳ ಅಭಿವೃದ್ಧಿಯನ್ನು ಯಾವ ರೀತಿ ಮಾಡಬೇಕು ಎಂಬುದರ ಚಿಂತಿಸಿ, ಮುಂದಿನ ಐದು ವರ್ಷಗಳಲ್ಲಿ ಎಷ್ಟರ ಮಟ್ಟಿಗೆ ಹಳ್ಳಿಗಳನ್ನು ಅಭಿವೃದ್ಧಿ ಮಾಡುತ್ತೇವೆ ಎಂದು ಯೋಜನೆ ರೂಪಿಸಬೇಕು.
ಹಳ್ಳಿ ವಾಸಿಗಳಿಗೆ ಶಿಕ್ಷಣ ನೀಡಬೇಕು. ಪ್ರತಿಯೊಬ್ಬ ಹಳ್ಳಿ ನಾಗರಿಕ ವಿದ್ಯಾವಂತನಾಗಬೇಕು. ಹಳ್ಳಿಗಳ ಕಡೆ ಮಕ್ಕಳು ಶಾಲೆಗಳಿಗೆ ಹೆಚ್ಚಾಗಿ ಬರುವುದಿಲ್ಲ. ಇದನ್ನು ತಡೆಯಬೇಕು. ಪ್ರತಿಯೊಂದು ಮಗುವು ಶಿಕ್ಷಣ ಪಡೆಯಬೇಕು ಇದಕ್ಕೆ ನಾವೆಲ್ಲರೂ ದುಡಿಯಬೇಕು ಎಂದು ಮೋದಿ ಕಿವಿ ಮಾತು ಹೇಳಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ