ಯಾಮಿನಿ ಮೆದುಳಲ್ಲಿ ಸಯಾಮಿ ಭ್ರೂಣದ ಮಸ್ತ್ ಕತೆ!

ಎಂಥೆಂಥ ಅವಳಿಜವಳಿಗಳನ್ನು ನೀವು ಕಂಡಿದ್ದೀರಿ. ಸಯಾಮಿ ಅವಳಿಗಳು, ತದ್ರೂಪಿ ಅವಳಿಗಳು ಹೀಗೆ ಹಲವು ರೀತಿಯ ಅವಳಿಗಳು ಸರ್ವೇಸಾಮಾನ್ಯ. ಆದರೆ ಅವಳಿ ಜೀವಿಯೊಂದು ಮೆದುಳಿನಲ್ಲಿ ಇಪ್ಪತ್ತಾರು ವರ್ಷ ಬಚ್ಚಿಟ್ಟುಕೊಂಡದ್ದು ಕೇಳಿದ್ದೀರಾ?...
ಭಾರತೀಯ ಮೂಲದ ಕಂಪ್ಯೂಟರ್ ಸೈನ್ಸ್ ಪಿಎಚ್‍ಡಿ ವಿದ್ಯಾರ್ಥಿನಿ ಯಾಮಿನಿ ಕರಣಂ
ಭಾರತೀಯ ಮೂಲದ ಕಂಪ್ಯೂಟರ್ ಸೈನ್ಸ್ ಪಿಎಚ್‍ಡಿ ವಿದ್ಯಾರ್ಥಿನಿ ಯಾಮಿನಿ ಕರಣಂ

ವಾಷಿಂಗ್ಟನ್: ಎಂಥೆಂಥ ಅವಳಿಜವಳಿಗಳನ್ನು ನೀವು ಕಂಡಿದ್ದೀರಿ. ಸಯಾಮಿ ಅವಳಿಗಳು, ತದ್ರೂಪಿ ಅವಳಿಗಳು ಹೀಗೆ ಹಲವು ರೀತಿಯ ಅವಳಿಗಳು ಸರ್ವೇಸಾಮಾನ್ಯ. ಆದರೆ ಅವಳಿ ಜೀವಿಯೊಂದು ಮೆದುಳಿನಲ್ಲಿ ಇಪ್ಪತ್ತಾರು ವರ್ಷ ಬಚ್ಚಿಟ್ಟುಕೊಂಡದ್ದು ಕೇಳಿದ್ದೀರಾ? ಅಂಥ ಜೀವವೈಚಿತ್ರ್ಯವೊಂದು ಲಾಸ್ ಏಂಜಲಿಸ್‍ನಲ್ಲಿ ನಡೆದಿದೆ.

ಅಚ್ಚರಿಯ ಮೂಲ ಭಾರತ:
ಯಾಮಿನಿ ಕರಣಂ 26 ವರ್ಷದ ಯುವತಿ. ಹೈದರಾಬಾದ್ ಮೂಲದ ಕಂಪ್ಯೂಟರ್ ಸೈನ್ಸ್ ಪಿಎಚ್‍ಡಿ ವಿದ್ಯಾರ್ಥಿನಿ. ಕಳೆದ ಸೆಪ್ಟೆಂಬರ್‍ನಲ್ಲಿ ಯಾಮಿನಿ ತಲೆಯಲ್ಲಿ ಸಮಸ್ಯೆ ಕಾಣಿಸಿಕೊಂಡಿದೆ. ಏಕಾಗ್ರತೆ ಬರುತ್ತಿಲ್ಲ. ಓದಿದ್ದು ಅರ್ಥವೇ ಆಗುತ್ತಿಲ್ಲ. ಇತರರು ಮಾತನಾಡಿದ್ದನ್ನು ಅರ್ಥ ಮಾಡಿಕೊಳ್ಳಲು ಕಷ್ಟವಾಗುತ್ತಿದೆ. ತಲೆಯಲ್ಲಿ ಅದೇನೋ ಗದ್ದಲ ಎಂದೆಲ್ಲ ಅನಿಸಿ ನರವಿಜ್ಞಾನ ತಜ್ಞರನ್ನು ಸಂಪರ್ಕಿಸಿದೆರೆ. ಸಮಸ್ಯೆಗೆ ಪರಿಹಾರ ಹುಡುಕುವಲ್ಲಿ ನರವಿಜ್ಞಾನಿ ಮತ್ತು ವೈದ್ಯರು ಸೋತರು.

ಇದು ಕ್ಯಾನ್ಸರ್ ಗಡ್ಡೆ ಅಲ್ಲ

ಮೇಲ್ನೋಟಕ್ಕೆ ದುರ್ಮಾಂಸ ಅಥವಾ ಕ್ಯಾನ್ಸರ್ ಗಡ್ಡೆಯಂತೆ ಕಂಡರೂ ಇದು ಭ್ರೂಣ ಎಂದು ದೃಢಪಟ್ಟಿದೆ. ಟೆರಾಟೋಮಾ ಎಂದು ಕರೆಯಲ್ಪಡುವ ಈ ಅವಳಿ ಭ್ರೂಣಕ್ಕೆ ಕೂದಲು, ಹಲ್ಲು ಹಾಗೂ ಮೂಳೆಗಳಿರುವುದು ಕಂಡುಬಂದಿದೆ. 8 ಸಾವಿರ ಮೆದುಳು ಶಸ್ತ್ರಚಿಕಿತ್ಸೆ ಮಾಡಿರುವ ಶಾಹಿನಿಯನ್‍ಗೆ ವೃತ್ತಿಜೀವನದ 2ನೇ ದೊಡ್ಡ ಅಚ್ಚರಿ!

26 ವರ್ಷದ ಭ್ರೂಣ
ಈ ಥರದ ಸಮಸ್ಯೆಗೆ ಪರಿಹಾರ ನೀಡಬಲ್ಲ ವೈದ್ಯರನ್ನು ಯಾಮಿನಿಯೇ ಹುಡುಕಿದ್ದಾರೆ. ರಾಯ್ರ್ ಶಾಹಿನಿಯನ್ ಎಂಬ ವೈದ್ಯೆ ಡಿಜಿಟಲ್ ಫೈಬರ್ ಆಪ್ಟಿಕ್ ತಂತ್ರಜ್ಞಾನದ ಮೂಲಕ ಮೆದುಳಿನ ಸರ್ಜರಿ ನಡೆಸಿದ್ದಾರೆ. ಟ್ಯೂಮರ್ ಇರಬಹುದೆಂದು ಶಂಕಿಸಿದ್ದ ವೈದ್ಯೆಗೆ ತಲೆಯಲ್ಲಿ ಇಪ್ಪತ್ತಾರು ವರ್ಷದಿಂದ ಉಳಿದುಕೊಂಡಿದ್ದ ಯಾಮಿನಿಯ ಅವಳಿ ಭ್ರೂಣ ಕಂಡು ಬೆಚ್ಚಿಬೀಳುವಂತಾಗಿದೆ.

ಶಾಹಿನಿಯನ್ ಆವಿಶಷ್ಕಾರ
ಲಾಸ್ ಏಂಜಲೀಸ್‍ನ ಸ್ಕಲ್ ಬೇಸ್ ಇನ್‍ಸ್ಟಿಟ್ಯೂಟ್‍ನ ಈ ವೈದ್ಯೆ ಮೆದುಳು ಶಸ್ತ್ರಚಿಕಿತ್ಸೆಯನ್ನು ತುಂಬ ಸರಳೀಕರಿಸಿದ್ದಾರೆ. ತಲೆ ಬುರುಡೆಯ ಕವಚ ತೆರೆದು ಶಸ್ತ್ರಚಿಕಿತ್ಸೆ ನಡೆಸುವ ಬದಲು, ಕೇವಲ ಅರ್ಧ ಇಂಚಿನಷ್ಟು ತಲೆಯನ್ನು  ಕೊರೆದು, ಎಂಡೋಸ್ಕೋಪಿ ಮಾಡುವ ಮೂಲಕ ಮೆದುಳಿನ ತುತ್ತತುದಿಯನ್ನೂ ತಲುಪಿ ಫೈಬರ್ ಆಪ್ಟಿಕ್ ತಂತ್ರಜ್ಞಾನದ ಮೂಲಕ ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಕೀ ಹೋಲ್ ಸರ್ಜರಿ ಎಂದು ಕರೆಯಲಾಗುವ ಈ ಸರ್ಜರಿ ಇದೀಗ ಇದೀಗ ಶಾಹಿನಿಯನ್ ಟೆಕ್ನಿಕ್ ಅಂತಲೇ ಇದು ಖ್ಯಾತವಾಗಿದೆ.

ಗಟ್ಟಿಗಿತ್ತಿ ಯಾಮಿನಿ
ಶಸ್ತ್ರಚಿಕಿತ್ಸೆಗೊಳಗಾದ ಯಾಮಿನಿಗೆ ತಲೆಯೊಳಗೆ ಹೀಗೊಂದು ಭ್ರೂಣವಿರುವುದು ಗೊತ್ತಾಗಿದ್ದು, ಪ್ರಜ್ಞೆ ಬಂದಮೇಲೆಯೇ! ನನ್ನ ತಲೆಯೊಳಗೆ ಬಚ್ಚಿಟ್ಟುಕೊಂಡು ನನ್ನ ಅವಳಿ ತಂಗಿ ಇಷ್ಟು ದಿನದಿಂದ ಹಿಂಸೆ ಕೊಡ್ತಾ ಇದ್ದಳು ನೋಡಿ ಎಂದು ಆಸ್ಪತ್ರೆಯವರೊಂದಿಗೆ ಯಾಮಿನಿ ಜೋಕ್ ಮಾಡಿದ್ದಾರೆ. ಇನ್ನು ಮೂರುವಾರಗಳಲ್ಲಿ ಅವರು ಪೂರ್ಣ ಗುಣಮುಖರಾಗಲಿದ್ದಾರೆಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com