
ನವದೆಹಲಿ: ದೇಶದ ಭೂಸೇನೆಯಲ್ಲಿ ಗುರುತರ ಪಾತ್ರ ವಹಿಸುವ ಗೂರ್ಖಾ ರೆಜಿಮೆಂಟ್ ಸ್ಥಾಪನೆಯಾಗಿ 200 ವರ್ಷಗಳು ಪೂರ್ತಿಯಾಗಿವೆ.
ಈ ನಿಟ್ಟಿನಲ್ಲಿ ದೆಹಲಿಯಲ್ಲಿ ಶುಕ್ರವಾರ ಕಾರ್ಯಕ್ರಮ ಆಯೋಜಿಸಲಾಗಿತ್ತು. ಭಾರತ ಮತ್ತು ನೇಪಾಳದಿಂದ ಆಗಮಿಸಿದ ರೆಜಿಮೆಂಟಿನ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು. 1815ರ ಏ.24ರಂದು ಶಿಮ್ಲಾ ಬಳಿಯ ಮೌಲಾನಾ ಕೋಟೆ ಬಳಿ ಗೂರ್ಖಾ ಜನರಲ್ ಅಮರ್ ಸಿಂಗ್ ಥಾಪಾ ನೇತೃತ್ವದಲ್ಲಿ ನೂರಾರು ಸೈನಿಕರು ಬ್ರಿಟಿಷರ ವಿರುದ್ಧ ಹೋರಾಟ ನಡೆಸಿದ್ದರು. ಈ ದಿನವನ್ನು ಗೂರ್ಖಾ ರೆಜಿಮೆಂಟ್‍ನ ಸ್ಥಾಪನಾ ದಿನ ಎಂದು ಪರಿಗಣಿಸಲಾಗಿದೆ.
ಎರಡು ಪ್ರಪಂಚ ಮಹಾ ಯುದ್ಧ, ಭಾರತ-ಪಾಕಿಸ್ತಾನ ಯುದ್ಧ, ಪ್ರಮುಖ ಮಿಲಿಟರಿ ಕಾರ್ಯಾಚರಣೆಯಲ್ಲಿ ಅದು ಭಾಗವಹಿಸಿದೆ. ಹಾಲಿ ಭೂಸೇನಾ ಮುಖ್ಯಸ್ಥ ಜ.ದಲ್ಬೀರ್ ಸಿಂಗ್ ಸುಹಾಗ್ ಗೂರ್ಖಾ ಜನಾಂಗಕ್ಕೆ ಸೇರಿದವರು.
Advertisement