ವಿವಾದಕ್ಕೆ ಸಿಲುಕಿದ 'ತೋಡೋ ನಹೀ ಜೋಡೋ' ಫೆವಿಕ್ವಿಕ್ ಜಾಹೀರಾತು

2015ರ ವಿಶ್ವಕಪ್ ಪಂದ್ಯಾವಳಿ ವೇಳೆಯಿಂದ ಪ್ರಸಾರವಾಗುತ್ತಿರುವ ಫೆವಿಕ್ವಿಕ್ ನ ಹೊಸ ಜಾಹಿರಾತು 'ತೋಡೋ ನಹೀ ಜೋಡೋ' ಇದೀಗ ಹೊಸ ವಿವಾದವೊಂದರಲ್ಲಿ ಸಿಲುಕಿದೆ...
ವಿವಾದಕ್ಕೆ ಸಿಲುಕಿದ 'ತೋಡೋ ನಹೀ ಜೋಡೋ' ಫೆವಿಕ್ವಿಕ್ ಜಾಹೀರಾತು
ವಿವಾದಕ್ಕೆ ಸಿಲುಕಿದ 'ತೋಡೋ ನಹೀ ಜೋಡೋ' ಫೆವಿಕ್ವಿಕ್ ಜಾಹೀರಾತು

ನವದೆಹಲಿ: 2015ರ ವಿಶ್ವಕಪ್ ಪಂದ್ಯಾವಳಿ ವೇಳೆಯಿಂದ ಪ್ರಸಾರವಾಗುತ್ತಿರುವ ಫೆವಿಕ್ವಿಕ್ ನ ಹೊಸ ಜಾಹಿರಾತು 'ತೋಡೋ ನಹೀ ಜೋಡೋ' ಇದೀಗ ಹೊಸ ವಿವಾದವೊಂದರಲ್ಲಿ ಸಿಲುಕಿದೆ.

ವಾಘಾ ಗಡಿ ಬಳಿ ಭಾರತ-ಪಾಕಿಸ್ತಾನ ದೇಶದ ಸೈನಿಕರು ಪರೇಡ್ ನಡೆಸುವ ವೇಳೆ ಪಾಕ್  ಸೈನಿಕನ ಬೂಟಿನ ತಳ ಕಿತ್ತುಹೋಗುತ್ತದೆ. ಇದನ್ನು ಕಂಡ ಭಾರತೀಯ ಸೈನಿಕ ಫೆವಿಕ್ವಿಕ್ ಹಚ್ಚಿ  ಸರಿಪಡಿಸುವ ಮೂಲಕ ಪಾಕ್ ಸೈನಿಕನಿಗೆ ಆಗುವಂತಹ ಮುಜುಗರವನ್ನು ದೂರಮಾಡುತ್ತಾನೆ.

ಈ ಜಾಹೀರಾತು ಇದೀಗ ವಿವಾದಕ್ಕೆ ಸಿಲುಕಿದ್ದು, ಉಜ್ಜಯಿನಿ ಸಂಸದ ಚಿಂತಾಮಣಿ  ಮಾಳವೀಯ, ಈ ಜಾಹೀರಾತಿಗೆ ವಿರೋಧ ವ್ಯಕ್ತಪಡಿಸುತ್ತಿದ್ದು, ಜಾಹೀರಾತಿನಲ್ಲಿ ಭಾರತೀಯ ಸೈನಿಕರಿಗೆ ಅಪಮಾನವಾಗಿದೆ. ಇದೊಂದು ದೇಶ ವಿರೋಧಿ ಜಾಹೀರಾತಾಗಿದ್ದು, ಜಾಹೀರಾತಿನ ನಿರ್ದೇಶಕರು ಹಾಗೂ ನಿರ್ದೇಶಕರನ್ನು ದೇಶದ್ರೋಹಿ ಕಾನೂನಿನಡಿಯಲ್ಲಿ ಶಿಕ್ಷೆಗೆ ಗುರುಯಾಗಿಸಬೇಕೆಂದು ಆಗ್ರಹಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com