ಭೂಕಂಪನದ ಬಗ್ಗೆ ಎಚ್ಚರಿಸಿದ್ದ ಬೆಂಗಳೂರು ವಿಜ್ಞಾನಿಗಳು

ಇಂತಹುದೊಂದು ದೊಡ್ಡ `ಅಪಾಯ ಕಾದಿದೆ' ಎಂಬ ವಿಚಾರ ಮೊದಲೇ ಗೊತ್ತಿತ್ತೇ?...
ಭೂಕಂಪನ
ಭೂಕಂಪನ

ಬೆಂಗಳೂರು: ಇಂತಹುದೊಂದು ದೊಡ್ಡ `ಅಪಾಯ ಕಾದಿದೆ' ಎಂಬ ವಿಚಾರ ಮೊದಲೇ ಗೊತ್ತಿತ್ತೇ?

ಹೌದು. ಮಧ್ಯ ಹಿಮಾಲಯದ ಸುತ್ತಲಿನ ಭೂಪ್ರದೇಶದಲ್ಲಿ ಮಹಾ ಭೂಕಂಪವೊಂದು ಸಂಭವಿಸಲಿದೆ ಎಂದು 2 ತಿಂಗಳ ಹಿಂದೆಯೇ ಬೆಂಗಳೂರಿನ ವಿಜ್ಞಾನಿಗಳ ತಂಡವೊಂದು ಎಚ್ಚರಿಸಿತ್ತು.

ಕಳೆದ 700 ವರ್ಷಗಳಲ್ಲಿ ಮಧ್ಯಹಿಮಾಲಯದ ಭೂ ಒತ್ತಡವು ಸಕ್ರಿಯವಾಗಿಲ್ಲ. ದೀರ್ಘಾವಧಿ ಕಾಲ ಭೂಕಂಪನವು ಜಡವಾಗಿದ್ದರೆ, ಅಂತಹ ಪ್ರದೇಶದಲ್ಲಿ ಮಹಾನ್ ಕಂಪನ ಸಂಭವಿಸುತ್ತದೆ ಎಂದು ಮೂವರು ವಿಜ್ಞಾನಿಗಳು ತಿಳಿಸಿದ್ದರು.

ಜಿಯೋ ಫಿಸಿಕಲ್ ರಿಸರ್ಚ್- ಸಾಲಿಡ್ ಅರ್ಥ್ ಎಂಬ ಪತ್ರಿಕೆಯಲ್ಲಿ ಈ ಬಗೆಗಿನ ಲೇಖನ ಪ್ರಕಟವಾಗಿತ್ತು. ಬೆಂಗಳೂರಿನ ಜವಾಹರ್ ಲಾಲ್ ನೆಹರೂ ಸೆಂಟರ್ ಫಾರ್ ಅಡ್ವಾನ್ಸ್ಡ್ ಸೈಂಟಿಫಿಕ್ ರಿಸರ್ಚ್ ನ ವಿಜ್ಞಾನಿ  ಸಿ.ಪಿ. ರಾಜೇಂದ್ರನ್, ಕೋಲಾರ ಚಿನ್ನದ ಗಣಿಯ ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ರಾಕ್ ಮೆ ಕ್ಯಾನಿಕ್ಸ್ ನ ಬಿಜು ಜಾನ್ ಮತ್ತು ಬೆಂಗಳೂರಿನ ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಸೈನ್ಸ್ ನ  ವಿಜ್ಞಾನಿ ಕುಸಲ ರಾಜೇಂದ್ರನ್ ಅವರು ಜಂಟಿಯಾಗಿ ಈ ಲೇಖನವನ್ನು ಬರೆದಿದ್ದರು. ಜತೆಗೆ, ತಮ್ಮ ವಾದವನ್ನು ಪುಷ್ಟೀಕರಿಸಲು ಐತಿಹಾಸಿಕ ಪುರಾವೆಗಳನ್ನೂ ಅವರು ಒದಗಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com