ನೇಪಾಳಕ್ಕೆ ಸಹಾಯ ಹಸ್ತ ನೀಡಿದ ಭಾರತ: 'ಆಪರೇಷನ್ ಮೈತ್ರಿ' ಆರಂಭ

ಭೀಕರ ಭೂಕಂಪದಿಂದಾಗಿ ತತ್ತರಿಸಿರುವ ನೇಪಾಳಕ್ಕೆ ಪರಿಹಾರ ಕಾರ್ಯ ಕೈಗೊಂಡಿರುವ ಭಾರತೀಯ ಸೈನಿಕರು ಸಂತ್ರಸ್ಥರ ರಕ್ಷಣಾ ಕಾರ್ಯಾಚರಣೆಗೆ 'ಆಪರೇಷನ್ ಮೈತ್ರಿ' ಎಂದು ಹೆಸರಿಟ್ಟಿದೆ...
ನೇಪಾಳ ಸಂತ್ರಸ್ತರ ರಕ್ಷಣೆ ಮಾಡುತ್ತಿರುವ ಭಾರತೀಯ ಸೇನೆ
ನೇಪಾಳ ಸಂತ್ರಸ್ತರ ರಕ್ಷಣೆ ಮಾಡುತ್ತಿರುವ ಭಾರತೀಯ ಸೇನೆ

ನವದೆಹಲಿ: ಭೀಕರ ಭೂಕಂಪದಿಂದಾಗಿ ತತ್ತರಿಸಿರುವ ನೇಪಾಳಕ್ಕೆ ಪರಿಹಾರ ಕಾರ್ಯ ಕೈಗೊಂಡಿರುವ ಭಾರತೀಯ ಸೈನಿಕರು ಸಂತ್ರಸ್ಥರ ರಕ್ಷಣಾ ಕಾರ್ಯಾಚರಣೆಗೆ 'ಆಪರೇಷನ್ ಮೈತ್ರಿ' ಎಂದು ಹೆಸರಿಟ್ಟಿದೆ.  

ರಕ್ಷಣಾ ಕಾರ್ಯಾಚರಣೆಗಾಗಿ ನೆರವು ನೀಡುವಂತೆ ನೇಪಾಳ ಸರ್ಕಾರದಿಂದ ಮನವಿ ಬರುತ್ತಿದ್ದಂತೆಯೇ ಭಾರತೀಯ ವಾಯುಪಡೆಯ ಸಿ-130 ಜೆ ಸೂಪರ್ ಹರ್ಕ್ಯೂಲಸ್ ವಿಮಾನವು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಸಿಬ್ಬಂದಿಯೊಂದಿಗೆ ಆಹಾರ, ಔಷಧಿ ಹಾಗೂ ಇನ್ನಿತರೆ ಪರಿಹಾರ ಸಾಮಾಗ್ರಿಗಳೊಂದಿಗೆ ನೇಪಾಳಕ್ಕೆ ತಲುಪಿತ್ತು.

ರಕ್ಷಣೆ ಹಾಗೂ ಪರಿಹಾರ ಕಾರ್ಯಾಚರಣೆಗೆ ಭಾರತ ಸರ್ಕಾರ ಬೃಹತ್ ಪ್ರಮಾಣದ ಸಾಮಾಗ್ರಿಗಳನ್ನು ನೇಪಾಕ್ಕೆ ಕಳುಹಿಸಿದ್ದು, ಈಗಾಗಲೇ ತಜ್ಞರ ತಂಡವನ್ನು ನೇಪಾಳಕ್ಕೆ ಕಳುಹಿಸಿಕೊಡಲಾಗಿದೆ ಎಂದು ಹೇಳಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com