
ನವದೆಹಲಿ: ನೇಪಾಳದಲ್ಲಿ ಪ್ರಬಲ ಭೂಕಂಪ ಉಂಟಾದ ಹಿನ್ನೆಲೆಯಲ್ಲಿ ಮೌಂಟ್ ಎವರೆಸ್ಟ್ ನಲ್ಲಿ ಭೂ ಕುಸಿತವಾಗಿದೆ. ಸಾವಿರಾರು ಪರ್ವತಾರೋಹಿಗಳು ಸಂಕಷ್ಟಕ್ಕೆ ಸಿಲುಕಿರುವುದಾಗಿ ತಿಳಿದುಬಂದಿದೆ.
ಹಿಮಾಲಯದ ಭೂ ಕುಸಿತದಿಂದಾಗಿ ದೊಡ್ಡ ದೊಡ್ಡ ಬಂಡೆಗಳು ಉರುಳುತ್ತಿರುವುದಾಗಿ ತಿಳಿದುಬಂದಿದ್ದು, ಪರ್ವತಾರೋಹಿಗಳ ರಕ್ಷಣೆಗೆ ಅಡ್ಡಿಯುಂಟಾಗುತ್ತಿದೆ ಎಂದು ಹೇಳಲಾಗುತ್ತಿದೆ.
1 ಸಾವಿರಕ್ಕೂ ಹೆಚ್ಚು ಮಂದಿ ಪರ್ವತಾರೋಹಿಗಳು ಸಂಕಷ್ಟದಲ್ಲಿ ಸಿಲುಕಿರುವುದಾಗಿ ತಿಳಿದುಬಂದಿದ್ದು, ಬಂಡೆಗಳು ಪರ್ವತಾರೋಹಿಗಳ ಬೀಳುತ್ತಿರುವ ಕಾರಣ ಸಂಕಷ್ಟದಲ್ಲೂ ಭಾರತೀಯ ವಾಯುಸೇನಾ ಪಡೆ ರಕ್ಷಣಾ ಕಾರ್ಯಾಚರಣೆ ನಡೆಸಲು ಹರಸಾಹಸ ಪಡುತ್ತಿದ್ದಾರೆ.
Advertisement