ಪಾಕಿಸ್ತಾನದಲ್ಲಿ ಭಾರಿ ಮಳೆ: 44 ಸಾವು, 200 ಮಂದಿಗೆ ಗಾಯ

ಪಾಕಿಸ್ತಾನದ ವಿವಿಧೆಡೆಗಳಲ್ಲಿ ಸುರಿದ ಭಾರೀ ಮಳೆಯಿಂದಾಗಿ ಉಂಟಾದ ದಿಢೀರ್ ಪ್ರವಾಹದ ಪರಿಣಾಮ ಕನಿಷ್ಠ 44 ಮಂದಿ ಬಲಿಯಾಗಿಯಾಗಿದ್ದು, 200 ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ...
ಚಂಡಮಾರುತದಿಂದಾಗಿ ಗಾಯಗೊಂಡ ಮಗಳನ್ನು ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸುತ್ತಿರುವ ತಂದೆ (ಫೋಟೋ ಕೃಪೆ: ಎಎಫ್ ಪಿ)
ಚಂಡಮಾರುತದಿಂದಾಗಿ ಗಾಯಗೊಂಡ ಮಗಳನ್ನು ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸುತ್ತಿರುವ ತಂದೆ (ಫೋಟೋ ಕೃಪೆ: ಎಎಫ್ ಪಿ)

ಇಸ್ಲಾಮಾಬಾದ್: ಪಾಕಿಸ್ತಾನದ ವಿವಿಧೆಡೆಗಳಲ್ಲಿ ಸುರಿದ ಭಾರಿ ಮಳೆಯಿಂದಾಗಿ ಉಂಟಾದ ದಿಢೀರ್ ಪ್ರವಾಹದ ಪರಿಣಾಮ ಕನಿಷ್ಠ 44 ಮಂದಿ ಸಾವನ್ನಪ್ಪಿದ್ದಾರೆ ಮತ್ತು 200 ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಪಾಕಿಸ್ತಾನದಲ್ಲಿ ಸೈಕ್ಲೋನ್ ಪ್ರಾರಂಭವಾದ ಪರಿಣಾಮ ಖೈಬರ್, ಪಖ್ತುಂಖ್ವಾ, ಗಿಲ್ಗಿಟ್ -ಬಾಲಿಸ್ಚಾನ್ ವಾಯುವ್ಯ ಪ್ರಾಂತ್ಯದ ಪೇಷಾವರ, ನೌಶಿರ ಸೇರಿದಂತೆ ಬುಡಕಟ್ಟು ಪ್ರದೇಶಗಳಲ್ಲಿ ಭಾರಿ ಮಳೆ ಸುರಿದಿದ್ದು, ಪೇಷಾವರ ಒಂದರಲ್ಲೇ 9 ಮಂದಿ ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ.

ಭಾರಿ ಮಳೆಗೆ ಈಗಾಗಲೇ ಅಲ್ಲಿನ ಮರ, ಮೊಬೈಲ್ ಟವರ್ ಗಳು ನೆಲಕ್ಕುರುಳಿದ್ದು ರಸ್ತೆಗಳು ಸಂಪೂರ್ಣವಾಗಿ ಬಂದ್ ಆಗಿವೆ. ಅಲ್ಲದೆ ಅಲ್ಲಿನ ಮನೆಗಳ ಮೇಲ್ಛಾವಣಿಗಳು ಹಾಳಾಗಿದ್ದು, ಹಲವು ಮನೆಗಳ ಗೋಡೆಗಳು ಉರುಳಿವೆ ಎಂದು ಹೇಳಲಾಗುತ್ತಿದೆ.

ಪಾಕಿಸ್ತಾನದ ಪ್ರಧಾನಮಂತ್ರಿ ನವಾಜ್ ಶರೀಫ್ ಅವರು ಲಂಡನ್ ಪ್ರವಾಸದಲ್ಲಿದ್ದು, ಲಂಡನ್ ನಿಂದಲೇ ರಕ್ಷಣಾ ಕಾರ್ಯಾಚರಣೆ ಮಾಡುವಂತೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಮಂಡಳಿಗೆ ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ. ಪ್ರಧಾನಿ ಅವರ ಸೂಚನೆಯಂತೆ ರಕ್ಷಣಾ ಕಾರ್ಯಾಚರಣೆಗಾಗಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಮಂಡಳಿಯು 2 ತಂಡಗಳನ್ನು ನೇಮಿಸಿದ್ದು, ಪಾಕಿಸ್ತಾನದಲ್ಲಿ ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com