ನಕಲಿ ಪ್ರಮಾಣಪತ್ರ ವಿವಾದ: ಕಾನೂನು ಸಚಿವ ತೊಮರ್‌ರಿಂದ ವಿವರಣೆ ಕೇಳಿದ ಕೇಜ್ರಿವಾಲ್

ದೆಹಲಿ ಕಾನೂನು ಸಚಿವ ಜಿತೇಂದರ್ ಸಿಂಗ್ ತೊಮರ್ ಅವರ ವಿರುದ್ಧ ಎದ್ದಿರುವ ನಕಲಿ ಕಾನೂನು ಪದವಿ ಪತ್ರ ವಿವಾದಕ್ಕೆ ಸಂಬಂಧಿಸಿದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿವರಣೆ ಕೇಳಿದ್ದಾರೆ...
ಅರವಿಂದ್ ಕೇಜ್ರಿವಾಲ್
ಅರವಿಂದ್ ಕೇಜ್ರಿವಾಲ್

ನವದೆಹಲಿ: ದೆಹಲಿ ಕಾನೂನು ಸಚಿವ ಜಿತೇಂದರ್ ಸಿಂಗ್ ತೊಮರ್ ಅವರ ವಿರುದ್ಧ ಎದ್ದಿರುವ ನಕಲಿ ಕಾನೂನು ಪದವಿ ಪತ್ರ ವಿವಾದಕ್ಕೆ ಸಂಬಂಧಿಸಿದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿವರಣೆ ಕೇಳಿದ್ದಾರೆ.

ಇತ್ತೀಚೆಗಷ್ಟೆ ಆಮ್ ಆದ್ಮಿ ಪಕ್ಷದ ಹಿರಿಯ ಮುಖಂಡರಾದ ಯೋಗೇಂದ್ರ ಸಿಂಗ್ ಮತ್ತು ಪ್ರಶಾಂತ್ ಭೂಷಣ್ ಇಬ್ಬರಿಂದ ಪಕ್ಷದಲ್ಲಿ ಆತಂರಿಕ ಕಲಹ ಶುರುವಾಗಿತ್ತು. ಇದರಿಂದ ಚೇತರಿಸಿಕೊಳ್ಳುತ್ತಿರುವಾಗಲೇ ಆಮ್ ಆದ್ಮಿ ಪಕ್ಷದ ಸಂಸ್ಥಾಪಕ ಅರವಿಂದ್ ಕೇಜ್ರಿವಾಲ್ ಸಚಿವ ಸಂಪುಟದ ಸಚಿವ ಜಿತೇಂದರ್ ಸಿಂಗ್ ತೊಮರ್ ಮೇಲೆ ನಕಲಿ ಕಾನೂನು ಪದವಿ ಪ್ರಮಾಣ ಪತ್ರ ಸಲ್ಲಿಸಿದ್ದಾರೆಂದು ಪ್ರತಿಪಕ್ಷಗಳು ಆರೋಪ ಮಾಡಿದ್ದು, ಈ ಕುರಿತಂತೆ ಸ್ಪಷ್ಠಿಕರಣ ನೀಡುವಂತೆ ಕೇಜ್ರಿವಾಲ್ ತೊಮರ್ ಅವರಿಗೆ ಸೂಚಿಸಿದ್ದಾರೆ.

ದೆಹಲಿ ಕಾನೂನು ಸಚಿವ ಜಿತೇಂದರ್ ಸಿಂಗ್ ತೋಮರ್ ಅವರು ಕಾನೂನು ಪದವಿ ಮಾಡಿರುವ ಕುರಿತಂತೆ ಸಲ್ಲಿಸಿರುವ ಪ್ರಮಾಣ ಪತ್ರ ನಕಲಿ ಎಂದು ಇತ್ತೀಚೆಗಷ್ಟೇ ದೆಹಲಿ ಹೈಕೋರ್ಟ್ ಹೇಳಿತ್ತು. ಈ ಹಿನ್ನೆಲೆಯಲ್ಲಿ ಬಿಜೆಪಿ, ಕಾಂಗ್ರೆಸ್ ತೊಮರ್ ರಾಜಿನಾಮೆಗೆ ಆಗ್ರಹಿಸಿವೆ.

ಈ ಆರೋಪವನ್ನು ತಳ್ಳಿಹಾಕಿದ್ದ ಜಿತೇಂದರ್ ಸಿಂಗ್ ಅವರು ನಾನು ಇದೇ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದಿದ್ದು, ನ್ಯಾಯಾಲಯ ಸ್ಪಷ್ಟೀಕರಣಕ್ಕಾಗಿ ವಿಶ್ವವಿದ್ಯಾಲಯವನ್ನು ಕೇಳಿದೆ. ವಿಶ್ವವಿದ್ಯಾಲಯವು ವಿವರಸಲ್ಲಿಸಿದ ನಂತರ ಎಲ್ಲಾ ಸತ್ಯಾಂಶಗಳು ಹೊರಬರಲಿದೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com