ಹರಿಯಾಣ ಸರ್ಕಾರದಿಂದ ಶಾಸಕರಿಗೆ ಲ್ಯಾಪ್ ಟಾಪ್, ಮನೆ ಸಾಲ ಗಿಫ್ಟ್, ರೈತರಿಗಿಲ್ಲ ನೆರವು

ಆತ್ಮಹತ್ಯೆಗೆ ಶರಣಾಗುವ ರೈತರು ಹೇಡಿಗಳು, ಕ್ರಿಮಿನಲ್‌ಗಳು. ಹೀಗಾಗಿ ಅವರಿಗೆ ಆರ್ಥಿಕ ನೆರವು ನೀಡುವುದಿಲ್ಲ ಎಂದಿರುವ ಹರಿಯಾಣದ ಬಿಜೆಪಿ ಸರ್ಕಾರ...
ಶಾಸಕರಿಗೆ ಲ್ಯಾಪ್‌ಟಾಪ್ ವಿತರಿಸುತ್ತಿರುವ ಖಟ್ಟರ್
ಶಾಸಕರಿಗೆ ಲ್ಯಾಪ್‌ಟಾಪ್ ವಿತರಿಸುತ್ತಿರುವ ಖಟ್ಟರ್

ಚಂಡೀಗಢ: ಆತ್ಮಹತ್ಯೆಗೆ ಶರಣಾಗುವ ರೈತರು ಹೇಡಿಗಳು, ಕ್ರಿಮಿನಲ್‌ಗಳು. ಹೀಗಾಗಿ ಅವರಿಗೆ ಆರ್ಥಿಕ ನೆರವು ನೀಡುವುದಿಲ್ಲ ಎಂದಿರುವ ಹರಿಯಾಣದ ಬಿಜೆಪಿ ಸರ್ಕಾರ, ತನ್ನ ಎಲ್ಲಾ ಶಾಸಕರಿಗೆ ಲ್ಯಾಪ್‌ಟಾಪ್ ಹಾಗೂ ಕಾರು, ಮನೆಗಳ ಮೇಲಿನ ಸಾಲದ ಮೊತ್ತವನ್ನು ಡಬ್ಬಲ್ ಮಾಡಿದೆ.

ಮುಖ್ಯಮಂತ್ರಿ ಮನೋಹರ್‌ಲಾಲ್ ಖಟ್ಟರ್ ಅವರು ಇಂದು ಹರಿಯಾಣದ 90 ಶಾಸಕರಿಗೆ ಲ್ಯಾಪ್‌ಟಾಪ್ ವಿತರಣೆ ಮಾಡಿದರು. ಅಲ್ಲದೆ ಕಾರು ಹಾಗೂ ಮನೆ ಸಾಲದ ಮೊತ್ತವನ್ನು 20 ರಿಂದ 60 ಲಕ್ಷಕ್ಕೆ ಏರಿಸುವ ಮೂಲಕ ಶಾಸಕರಿಗೆ ಭರ್ಜರಿ ಗಿಫ್ಟ್ ನೀಡಿದ್ದಾರೆ.

ಕಳೆದ ನಾಲ್ಕು ತಿಂಗಳಲ್ಲಿ ಹರಿಯಾಣದಲ್ಲಿ ಒಂದು ಡಜನ್ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಕಾಲಿಕ ಮಳೆಯಿಂದ ಸಂಕಷ್ಟದಲ್ಲಿರುವ ರಾಜ್ಯದ ರೈತರಿಗೆ ಹರಿಯಾಣ ಸರ್ಕಾರ ಇನ್ನೂ ಯಾವುದೇ ಪರಿಹಾರ ನೀಡಿಲ್ಲ.

ಆತ್ಮಹತ್ಯೆಗೆ ಶರಣಾಗುವ ರೈತರಿಗೆ ಯಾವುದೇ ಪರಿಹಾರ ನೀಡುವುದಿಲ್ಲ ಎಂದಿರುವ ಹರಿಯಾಣ ಕೃಷಿ ಸಚಿವ ಓಂ ಪ್ರಕಾಶ್ ಧಂಕರ್, ಆತ್ಮಹತ್ಯೆ ಮಾಡಿಕೊಳ್ಳುವ ರೈತರು ಹೇಡಿಗಳು ಮತ್ತು ಕ್ರಿಮಿನಲ್‌ಗಳು ಎಂದು ಹೇಳಿಕೆ ನೀಡಿದ್ದು, ತೀವ್ರ ವಿವಾದಕ್ಕೆ ಕಾರಣವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com