ನೇಪಾಳ ಭೂಕಂಪ: 80 ಗಂಟೆಗಳ ಬಳಿಕ, ಅವಶೇಷಗಳಡಿ ಜೀವಹಿಡಿದು ಕುಳಿತಿದ್ದ ವ್ಯಕ್ತಿಯ ರಕ್ಷಣೆ

ಭೀಕರ ಭೂಕಂಪದ ಬಳಿಕ ಬರೋಬ್ಬರಿ 80 ಗಂಟೆಗಳ ಕಾಲ ಅವಶೇಷಗಳಡಿ ಜೀವಹಿಡಿದು ಕೂತಿದ್ದ ವ್ಯಕ್ತಿಯೊಬ್ಬನನ್ನು ರಕ್ಷಣಾ ಸಿಬ್ಬಂದಿ ಬುಧವಾರ ರಕ್ಷಿಸಿದ್ದಾರೆ.
ರಿಶಿ ಖನಲ್ ನನ್ನು ರಕ್ಷಿಸುತ್ತಿರುವ ರಕ್ಷಣಾ ಸಿಬ್ಬಂದಿ
ರಿಶಿ ಖನಲ್ ನನ್ನು ರಕ್ಷಿಸುತ್ತಿರುವ ರಕ್ಷಣಾ ಸಿಬ್ಬಂದಿ

ಕಠ್ಮಂಡು: ಭೀಕರ ಭೂಕಂಪದ ಬಳಿಕ ಬರೋಬ್ಬರಿ 80 ಗಂಟೆಗಳ ಕಾಲ ಅವಶೇಷಗಳಡಿ ಜೀವಹಿಡಿದು ಕೂತಿದ್ದ ವ್ಯಕ್ತಿಯೊಬ್ಬನನ್ನು ರಕ್ಷಣಾ ಸಿಬ್ಬಂದಿ ಬುಧವಾರ ರಕ್ಷಿಸಿದ್ದಾರೆ.

ಭೂಕಂಪದಿಂದಾಗಿ ಕುಸಿದ ಕಟ್ಟಡವೊಂದರಲ್ಲಿ ವ್ಯಕ್ತಿಯೊಬ್ಬ ಸಿಕ್ಕಿಹಾಕಿಕೊಂಡ ಬಗ್ಗೆ ಮಾಹಿತಿ ಪಡೆದ ರಕ್ಷಣಾ ತಂಡ ಕಾರ್ಯಾಚರಣೆ ನಡೆಸಿ ರಿಶಿ ಖನಲ್ ಅವರನ್ನು ರಕ್ಷಿಸಿದೆ. ತೀವ್ರವಾಗಿ ಗಾಯಗೊಂಡಿರುವ ರಿಶಿ ಖನಲ್ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

'ನನ್ನ ಮೂತ್ರವನ್ನು ನಾನೆ ಕುಡಿದೆ' ಎಂದು ಅಪಾಯದಿಂದ ಪಾರಾಗಿರುವ ರಿಶಿ ಅವಶೇಷಗಳಡಿ ತಾನು ಅನುಭವಿಸಿದ ನರಕಯಾತನೆಯನ್ನು ಸುದ್ದಿ ಸಂಸ್ಥೆಯೊಂದಿಗೆ ಹೇಳಿಕೊಂಡಿದ್ದಾನೆ.

ಕಳೆದ ಮೂರು ದಿನಗಳಿಂದ ರಕ್ಷಣಾ ಸಿಬ್ಬಂದಿ ಸಹಾಯಕ್ಕಾಗಿ ಕಾಯುತ್ತಿದ್ದೆ. ನನ್ನ ಸುತ್ತ ಇದ್ದ ಮೃತದೇಹಗಳ ವಾಸನೆಯ ನಡುವೆಯೇ ಜೀವ ಹಿಡಿದುಕೊಂಡು ಬದುಕಿದೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com