ವೈವಾಹಿಕ ಅತ್ಯಾಚಾರ ಪರಿಕಲ್ಪನೆ ನಮ್ಮ ದೇಶದ್ದಲ್ಲ!

ಭಾರತೀಯ ಸಮಾಜದಲ್ಲಿ ವಿವಾಹವನ್ನು ಪವಿತ್ರವಾಗಿ ನೋಡಲಾಗುತ್ತದೆ. ಹಾಗಾಗಿ ವೈವಾಹಿಕ ಅತ್ಯಾಚಾರ ಎನ್ನುವ ಕಲ್ಪನೆಗೆ ಭಾರತದಲ್ಲಿ...
ವೈವಾಹಿಕ ಜೀವನ(ಸಾಂದರ್ಭಿಕ ಚಿತ್ರ)
ವೈವಾಹಿಕ ಜೀವನ(ಸಾಂದರ್ಭಿಕ ಚಿತ್ರ)

ನವದೆಹಲಿ: ಭಾರತೀಯ ಸಮಾಜದಲ್ಲಿ ವಿವಾಹವನ್ನು ಪವಿತ್ರವಾಗಿ ನೋಡಲಾಗುತ್ತದೆ. ಹಾಗಾಗಿ ವೈವಾಹಿಕ ಅತ್ಯಾಚಾರ ಎನ್ನುವ ಕಲ್ಪನೆಗೆ ಭಾರತದಲ್ಲಿ ಜಾಗವಿಲ್ಲ ಎಂದು ಸರ್ಕಾರ ಹೇಳಿದೆ.

ವೈವಾಹಿಕ ಅತ್ಯಾಚಾರ(ವಿವಾಹ ನಂತರ ಪತಿ ಪತ್ನಿ ಜತೆಗೆ ಬಲವಂತದ ಲೈಂಗಿಕ ಕ್ರಿಯೆ) ಪರಿಕಲ್ಪನೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪರಿಗಣಿಸಲ್ಪಟ್ಟಿದೆ. ಆದರೆ, ಶಿಕ್ಷಣಮಟ್ಟ ಅನಕ್ಷರತೆ, ಬಡತನ, ಸಾಮಾಜಿಕ ನಡವಳಿಕೆ, ಮೌಲ್ಯಗಳು, ಧಾರ್ಮಿಕ ನಂಬಿಕೆಗಳು ಹಾಗೂ ಮದುವೆಯನ್ನು ಪವಿತ್ರ ಭಾವನೆಯಿಂದ ನೋಡುವ ಸಮಾಜದ ಮನಸ್ಥಿತಿಯಿಂದಾಗಿ ಈ ಅತ್ಯಾಚಾರ ಪರಿಕಲ್ಪನೆ ಭಾರತಕ್ಕೆ ಸೂಕ್ತವಾದುದಲ್ಲ ಎಂದು ಕೇಂದ್ರ ಗೃಹ ಖಾತೆ ಸಹಾಯಕ ಸಚಿವ ಹರಿಭಾಯ್ ಪರಾಥಿಭಾಯ್ ಚೌಧರಿ ಹೇಳಿದ್ದಾರೆ. ಡಿಎಂಕೆ ರಾಜ್ಯಸಭಾ ಸದಸ್ಯೆ ಕನಿಮೋಳಿ ಅವರು ಕೇಳಿದ ಪ್ರಶ್ನೆಗೆ ಅವರು ಈ ರೀತಿ ಲಿಖಿತ ಉತ್ತರ ನೀಡಿದ್ದಾರೆ.

ವೈವಾಹಿಕ ಅತ್ಯಾಚಾರವನ್ನು ಕ್ರಿಮಿನಲ್ ಅಪರಾಧವಾಗಿ ಪರಿಗಣಿಸಲು ಮಹಿಳೆಯರ ಮೇಲಿನ ತಾರತಮ್ಯವನ್ನು ಹೋಗಲಾಡಿಸುವ ವಿಶ್ವಸಂಸ್ಥೆಯ ಸಮಿತಿ ಭಾರತಕ್ಕೆ ಶಿಫಾರಸ್ಸು ಮಾಡಿದೆ. ಹಾಗಾಗಿ ಅತ್ಯಾಚಾರ ವ್ಯಾಖ್ಯಾನದಿಂದ ವೈವಾಹಿಕ ಅತ್ಯಾಚಾರಕ್ಕೆ ನೀಡಲಾಗಿರುವ ವಿನಾಯ್ತಿಯನ್ನು ತೆಗೆದುಹಾಕಲು ಐಪಿಸಿಗೆ ತಿದ್ದುಪಡಿ ಮಾಡಲಿದೆಯೇ? ಎಂದು ಕನಿಮೋಳಿ ಪ್ರಶ್ನಿಸಿದರು. ವಿಶ್ವಸಂಸ್ಥೆಯ ಜನಸಂಖ್ಯಾ ನಿಧಿಯ ಪ್ರಕಾರ ಮದುವೆಯಾದ ಶೇ. 75ರಷ್ಟು ಮಹಿಳೆಯರು ವೈವಾಹಿಕ ಅತ್ಯಾಚಾರಕ್ಕೆ ಒಳಗಾಗುತ್ತಾರೆ. ಈ ವಿಚಾರಕ್ಕೆ ಸಂಬಂಧಿಸಿ ಸರ್ಕಾರ ಅಗತ್ಯ ಕ್ರಮ ಕೈಗೊಂಡಿದೆಯೇ ಎಂದೂ ಎಂದು ಕೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com