
ಕಠ್ಮಂಡು: ನೇಪಾಳದಲ್ಲಿ ಸಂಭವಿಸಿದ ಭೀಕರ ಭೂಕಂಪದಲ್ಲಿ ಸಾವಿರಾರು ಮಂದಿ ಜೀವ, ಬದುಕು ಕಳೆದು ಕೊಂಡಿದ್ದಾರೆ. ಇದರ ಜೊತೆಗೆ ಸಾವನ್ನು ಕೆಲವರು ಗೆದ್ದು ಬಂದಿದ್ದಾರೆ. ಇನ್ನೂ ರಕ್ಷಣಾ ಕಾರ್ಯ ಭರದಿಂದ ಸಾಗಿದೆ
ಇದರ ನಡುವೆಯೇ ನಾಲ್ಕು ತಿಂಗಳ ಮಗುವೊಂದು ಪವಾಡ ಸದೃಶ ರೀತಿಯಲ್ಲಿ ಜೀವಂತವಾಗಿ ಬದುಕುಳಿದಿದೆ. ಘಟನೆ ನಡೆದು 22 ಗಂಟೆಗಳ ನಂತರ ಅವಶೇಷಗಳಡಿ ಸಿಲುಕಿದ್ದ ಮಗುವನ್ನು ರಕ್ಷಣಾ ಸಿಬ್ಬಂದಿ ರಕ್ಷಿಸಿದೆ.
ಕಠ್ಮಂಡುವಿನ ಭಕ್ತಪುರದಲ್ಲಿ ವಾಸವಿದ್ದ ದಂಪತಿ ಮಗುವನ್ನು ಕಳೆದುಕೊಂಡಿದ್ದರು. ಅವರಿಗೆ ತಮ್ಮ ಬದುಕಿದೆ ಎಂಬ ದೃಢವಾದ ನಂಬಿಕೆಯಿಂದ ಮಗುವನ್ನು ಹುಡುಕಿಕೊಡುವಂತೆ ರಕ್ಷಣಾ ಪಡೆ ಬಳಿ ಮನವಿ ಮಾಡಿಕೊಂಡಿದ್ದರು. ಆದರೆ ರಕ್ಷಣಾ ಸಿಬ್ಬಂದಿ ಮಗು ಸಾವನ್ನಪ್ಪಿರಬಹುದೆಂದು ಶಂಕಿಸಿದ್ದರು. ಅವಶೇಷಗಳಡಿಯಿಂದ ಮಗುವಿನ ಅಳು ಕೇಳಿಸಿಕೊಂಡ ತಂದೆ ಮಗು ಬದುಕಿದೆಯೆಂದು ಅದನ್ನು ರಕ್ಷಿಸಿಕೊಡಬೇಕೆಂದು ಮತ್ತೆ ಸೈನಿಕರ ಬಳಿ ಅಂಗಲಾಚಿದ. ಕಾರ್ಯಾಚರಣೆ ನಡೆಸಿದ ಸಿಬ್ಬಂದಿ 4 ತಿಂಗಳ ಕಂದಮ್ಮನನ್ನು ರಕ್ಷಿಸಿದ್ದಾರೆ.
ಮಗುವನ್ನು ಹೊರತೆಗೆದು ಪರೀಕ್ಷಿಸಲಾಗಿದೆ. ಮಗು ಆರೋಗ್ಯವಾಗಿದ್ದು , ಸಣ್ಣ ಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
Advertisement