ಮೋಗಾ(ಪಂಜಾಬ್): ದೆಹಲಿಯ ನಿರ್ಭಯಾ ಅತ್ಯಾಚಾರ, ಕೊಲೆಯನ್ನು ನೆನಪಿಸುವಂತಾ ಮತ್ತೊಂದು ನೀಚ ಕೃತ್ಯ ಪಂಜಾಬ್ ನ ಮೋಗಾ ಪ್ರಾಂತ್ಯದಲ್ಲಿ ನಡೆದಿದೆ.
ಚಲಿಸುತ್ತಿದ್ದ ಬಸ್ ನಲ್ಲಿ ತಾಯಿ, ಮಗಳಿಗೆ ಲೈಂಗಿಕ ಕಿರುಕುಳ ನೀಡಿದ ಐವರು ದುಷ್ಕರ್ಮಿಗಳು ಬಳಿಕ ಇಬ್ಬರನ್ನು ಬಸ್ ನಿಂದ ಹೊರದಬ್ಬಿದ್ದಾರೆ. ಇದರಿಂದಾಗಿ 14 ವರ್ಷದ ಬಾಲಕಿ ಸ್ಥಳದಲ್ಲೇ ಮೃತಪಟ್ಟಿದ್ದು, ತಾಯಿಗೆ ಗಂಭೀರ ಗಾಯಗಳಾಗಿವೆ. ಈ ಅಮಾನವೀಯ ಘಟನೆ ಸಂಭವಿಸಿರುವುದು ಪಂಜಾಬ್ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್ ಅವರ ಒಡೆತನದ ಕಂಪನಿಗೆ ಸೇರಿದ ಬಸ್ ನಲ್ಲಿ ಎಂದು ಆತಂಕಕ್ಕೆ ಕಾರಣವಾಗಿದೆ.
ತಮ್ಮ ಹಳ್ಳಿಗೆ ತೆರಳುವ ಸಲುವಾಗಿ ಬಸ್ ಹತ್ತಿದ್ದ ತಾಯಿ, ಮಗಳ ಮೇಲೆ ಬಸ್ ನಲ್ಲಿದ್ದ ಐವರು ದುರುಳರು ಅಸಂಬದ್ಧವಾಗಿ ನಡೆದುಕೊಂಡಿದ್ದಾರೆ. ಈ ವೇಳೆ ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ. ಆದರೆ ಬಸ್ ನ ಬಾಗಿಲು ಕಿಟಕಿ ಕಂಟ್ರೋಲ್ ಚಾಲಕನ ಬಳಿಯಿದ್ದು, ಇದರಿಂದ ವಿಚಲಿತರಾದ ತಾಯಿ ಮಗಳು ಬಸ್ ನಲ್ಲೇ ಜೋರಾಗಿ ಚೀರಲಾರಂಭಿಸಿದರು. ಚೀರಾಟ ಕಂಡ ದುಷ್ಕರ್ಮಿಗಳು ತಾಯಿ ಮಗಳನ್ನು ಬಸ್ ನಿಂದ ಹೊರ ತಳ್ಳಿದ್ದಾರೆ. ಈ ವೇಳೆ ಬಾಲಕಿಯ ತಲೆಗೆ ಗಂಭೀರ ಪೆಟ್ಟು ಬಿದ್ದಿದ್ದು, ಆಕೆ ಸ್ಥಳದಲ್ಲೇ ಅಸುನೀಗಿದ್ದಾರೆ.
Advertisement