ನೇಪಾಳ ಸಂತ್ರಸ್ತರಿಗೆ ಗೋಮಾಂಸ ಆಹಾರ ಪೂರೈಸಿಲ್ಲ ಎಂದ ಪಾಕಿಸ್ತಾನ

ಭೀಕರ ಭೂಕಂಪದಿಂದ ತತ್ತರಿಸಿರುವ ನೇಪಾಳದ ಸಂತ್ರಸ್ತರಿಗೆ ಗೋಮಾಂಸ ಆಹಾರವನ್ನು ಪಾಕಿಸ್ತಾನ ನೀಡಿದೆ ಎಂಬ ಆರೋಪವನ್ನು ಪಾಕಿಸ್ತಾನ ಗುರುವಾರ ತಿರಸ್ಕರಿಸಿದೆ...
ಭೂಕಂಪ ಪೀಡಿತ ನೇಪಾಳಕ್ಕ ಆಹಾರ ಪೂರೈಕೆ ಮಾಡುತ್ತಿರುವ ಪಾಕಿಸ್ತಾನದ ಸೇನೆ (ಫೋಟೋ ಕೃಪೆ: ಎಎಫ್ ಪಿ)
ಭೂಕಂಪ ಪೀಡಿತ ನೇಪಾಳಕ್ಕ ಆಹಾರ ಪೂರೈಕೆ ಮಾಡುತ್ತಿರುವ ಪಾಕಿಸ್ತಾನದ ಸೇನೆ (ಫೋಟೋ ಕೃಪೆ: ಎಎಫ್ ಪಿ)

ಕಠ್ಮಂಡು: ಭೀಕರ ಭೂಕಂಪದಿಂದ ತತ್ತರಿಸಿರುವ ನೇಪಾಳದ ಸಂತ್ರಸ್ತರಿಗೆ ಗೋಮಾಂಸ ಆಹಾರವನ್ನು ಪಾಕಿಸ್ತಾನ ನೀಡಿದೆ ಎಂಬ ಆರೋಪವನ್ನು ಪಾಕಿಸ್ತಾನ ಗುರುವಾರ ತಿರಸ್ಕರಿಸಿದೆ.

ಜಗತ್ತಿನ ಏಕೈಕ ಹಿಂದೂ ರಾಷ್ಟ್ರ ಅಂತಲೇ ಕರೆಯಲ್ಪಡುವ ನೇಪಾಳದಲ್ಲಿ ಗೋಮಾಂಸ ನಿಷೇಧವಿದ್ದು, ಅಲ್ಲಿನ ಜನರು ಗೋಮಾಂಸವನ್ನು ತಿನ್ನುವುದಿಲ್ಲ. ಗೋವನ್ನು ಇಲ್ಲಿ ದೈವ ಸಂಕೇತವಾಗಿ ಕಾಣುತ್ತಾರೆ. ಪ್ರಬಲ ಭೂಕಂಪದಿಂದ ಮನೆ ಮಠ ಕಳೆದುಕೊಂಡು ನಿರಾಶ್ರಿತರಾಗಿರುವ ನೇಪಾಳಿಗರಿಗೆ ಪಾಕಿಸ್ತಾನ ನೆರವು ನೀಡುವ ನೆಪದಲ್ಲಿ ಗೋಮಾಂಸದ ಆಹಾರವನ್ನು ರವಾನೆ ಮಾಡಿದೆ. ಆದರೆ ಇದನ್ನು ಕಂಡ ನೇಪಾಳಿಗರು ಆ ಆಹಾರವನ್ನು ಮುಟ್ಟಿಲ್ಲ ಎಂದು ಇಂಡಿಯಾ ಟುಡೆ ವರದಿ ಮಾಡಿತ್ತು.

ಈ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ಪಾಕಿಸ್ತಾನ ವಿದೇಶಾಂಗ ವಕ್ತಾರೆ ತಸ್ನೀಮ್ ಅಸ್ಲಾಂ ಅವರು, ನೇಪಾಳಕ್ಕೆ ಗೋಮಾಂಸ ಆಹಾರದ ಪೊಟ್ಟಣಗಳನ್ನು ನೀಡಿಯೇ ಇಲ್ಲ. ನೇಪಾಳಕ್ಕೆ ಪೂರೈಸಿದ ಆಹಾರದಲ್ಲಿ ಗೋಮಾಂಸದ ಯಾವುದೇ ಅಂಶಗಳಿರಲಿಲ್ಲ. ಸಂತ್ರಸ್ಥರಿಗೆ ಆಹಾರ ನೀಡಿದಾಗ ಆಹಾರ ಚೆನ್ನಾಗಿದೆ ಎಂದು ಇನ್ನು ಸ್ವಲ್ಪ ನೀಡುವಂತೆ ಅಲ್ಲಿನ ಸಂತ್ರಸ್ಥರು ಕೇಳಿದ್ದರು ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com