
ಕಠ್ಮಂಡು: ಭೀಕರ ಭೂಕಂಪದಿಂದ ತತ್ತರಿಸಿರುವ ನೇಪಾಳಕ್ಕೆ ಭಾರತ ಸೇರಿದಂತೆ ಹಲವು ರಾಷ್ಟ್ರಗಳು ನೆರವಿನ ಅಸ್ತ ಚಾಚಿವೆ. ಆದರೆ ಪಾಕಿಸ್ತಾನ ಮಾತ್ರ ನೇಪಾಳ ಸಂತ್ರಸ್ತರ ಜೊತೆಗೆ ಕೀಳು ಮಟ್ಟದ ಬುದ್ದಿಯನ್ನು ಪ್ರದರ್ಶಿಸಿದ್ದು, ಗೋಮಾಂಸ ಆಹಾರವನ್ನು ಕಳುಹಿಸಿಕೊಟ್ಟಿದೆ ಎಂದು ಇಂಡಿಯಾ ಟುಡೆ ವರದಿ ಮಾಡಿದೆ.
ಪ್ರಬಲ ಭೂಕಂಪದಿಂದ ಮನೆ ಮಠ ಕಳೆದುಕೊಂಡು ನಿರಾಶ್ರಿತರಾಗಿರುವ ನೇಪಾಳಿಗರಿಗೆ ಪಾಕಿಸ್ತಾನ ನೆರವಿನ ನೆಪದಲ್ಲಿ ಗೋಮಾಂಸದ ಆಹಾರವನ್ನು ರವಾನೆ ಮಾಡಿದೆ. ಜಗತ್ತಿನ ಏಕೈಕ ಹಿಂದೂ ರಾಷ್ಟ್ರ ಅಂತಲೇ ಕರೆಯಲ್ಪಡುವ ನೇಪಾಳದಲ್ಲಿ ಗೋಮಾಂಸವನ್ನು ತಿನ್ನುವುದಿಲ್ಲ ಬದಲಾಗಿ ಗೋವನ್ನು ಪೂಜಿಸುತ್ತಾರೆ.
ಭೂಕಂಪದಿಂದ ಆಹಾರ ಸಿಗದೇ ಹಸಿದಿದ್ದರೂ ಸಂತ್ರಸ್ಥರು ಪಾಕಿಸ್ತಾನದ ಆಹಾರವನ್ನು ಮುಟ್ಟಿಲ್ಲ. ಜೊತೆಗೆ ಪಾಕಿಸ್ತಾನದ ಹುಚ್ಚಾಟವನ್ನು ಅಲ್ಲಿನ ಪ್ರಧಾನಿಗೆ ಅಧಿಕಾರಿಗಳು ವರದಿ ಮಾಡಿದ್ದು ಪಾಕ್ ಕ್ರಮವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚಿಸಲು ಮುಂದಾಗಿದೆ.
ಇದೇ ವೇಳೆ ಭಾರತದಿಂದ ಸಂತ್ರಸ್ಥರ ನೆರವಿಗೆ ತೆರಳಿರುವ ವೈದ್ಯರು ಸಹ ಪಾಕಿಸ್ತಾನದ ಆಹಾರವನ್ನು ತಿರಸ್ಕರಿಸಿದ್ದಾರೆ.
Advertisement