ಇಂದಿರಾಗಾಂಧಿ, ರಾಜೀವ್ ಅಂಚೆ ಚೀಟಿ ರದ್ದು?

ಕಾಂಗ್ರೆಸ್ ಹಿರಿಯ ನಾಯಕರು ಮತ್ತು ಮಾಜಿ ಪ್ರಧಾನಿಗಳಾದ ಇಂದಿರಾಗಾಂಧಿ ಮತ್ತು ರಾಜೀವ್ ಗಾಂಧಿಯವ ಸ್ಮರಣಾರ್ಥಚಾಲ್ತಿಯಲ್ಲಿರುವ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಕಾಂಗ್ರೆಸ್ ಹಿರಿಯ ನಾಯಕರು ಮತ್ತು ಮಾಜಿ ಪ್ರಧಾನಿಗಳಾದ ಇಂದಿರಾಗಾಂಧಿ ಮತ್ತು ರಾಜೀವ್ ಗಾಂಧಿಯವ ಸ್ಮರಣಾರ್ಥಚಾಲ್ತಿಯಲ್ಲಿರುವ ಅಂಚೆ ಚೀಟಿಗಳನ್ನು ಕೇಂದ್ರ ಸರ್ಕಾರ ರದ್ದುಮಾಡಲು ಮುಂದಾಗಿದ್ದು, ಬಿಜೆಪಿ ಸರ್ಕಾರದ ಈ ನಿರ್ಧಾರ ಹೊಸ ರಾಜಕೀಯ ವಿವಾದಕ್ಕೆ ಎಡೆಮಾಡುವ ಸಾಧ್ಯತೆ ಇದೆ.

ಕಾಂಗ್ರೆಸ್‍ನ ಉನ್ನತ ನಾಯಕರ ಅಂಚೆ ಚೀಟಿ ರದ್ದು ಮಾಡುವುದರೊಂದಿಗೆ ಹೊಸದಾಗಿ ಆರ್‍ಎಸ್‍ಎಸ್ ಮತ್ತಿತರ ಸಂಘ-ಪರಿವಾರದ ಹಿರಿಯ ನಾಯಕರ ಅಂಚೆ ಚೀಟಿಗಳನ್ನು ಬಿಡುಗಡೆ ಮಾಡಲು ನಿರ್ಧರಿಸಿದ್ದು,ಇದು ಬೆಂಕಿಗೆ ತುಪ್ಪ ಸುರಿಯುವ ಯತ್ನವೆಂದೇ ಹೇಳಲಾಗುತ್ತಿದೆ. ಸರ್ಕಾರ ಹೊಸದಾಗಿ ಬಿಡುಗಡೆ ಮಾಡಲು ಉದ್ದೇಶಿಸಿರುವ 22ಅಂಚೆಚೀಟಿಗಳಲ್ಲಿ ಕಾಣಿಸಿಕೊಳ್ಳಲಿರುವ ದೇಶದ ಮಹಾನ್ ವ್ಯಕ್ತಿಗಳ ಪಟ್ಟಿಯಲ್ಲಿ ಪ್ರಮುಖವಾಗಿ ಆರ್‍ಎಸ್‍ಎಸ್ ಮತ್ತು ಭಾರತೀಯ ಜನಸಂಘದ ನಾಯಕರಾದ ಶ್ಯಾಮ್ ಪ್ರಸಾದ್ ಮುಖರ್ಜಿ, ದೀನ್ದಯಾಳ್ ಉಪಾಧ್ಯಾಯ, ಮರಾಠ ದೊರೆ ಛತ್ರಪತಿ ಶಿವಾಜಿ ಅವರ ಹೆಸರಿದೆ ಎಂದು ಉತ್ತರಭಾರತದ ಖಾಸಗಿ ವಾಹಿನಿ ವರದಿ ಮಾಡಿದೆ.

ಅಲ್ಲದೆ, ದೇಶದ ಮೊದಲ ಗೃಹ ಸಚಿವ ಸರ್ದಾರ್ ವಲ್ಲಭ ಭಾಯಿ ಪಟೇಲ್, ಸಿತಾರ್ ವಾದಕ ಪಂ. ರವಿಶಂಕರ್, ಶಹನಾಯ್ ವಾದಕ ಬಿಸ್ಮಿಲ್ಲಾ ಖಾನ್, ಮೌಲಾನಾ ಅಬ್ದುಲ್ ಆಜಾದ್, ಬಾಬು ರಾಜೇಂದ್ರ ಪ್ರಸಾದ್, ಡಾ. ರಾಮಮನೋಹರ ಲೋಹಿಯಾ, ಜಯಪ್ರಕಾಶ್ ನಾರಾಯಣ್, ಭಗತ್‍ಸಿಂಗ್, ಬಾಲಗಂಗಾಧರ್‍ತಿಲಕ್, ಸ್ವಾಮಿ ವಿವೇಕಾನಂದ, ಸುಬ್ರಹ್ಮಣ್ಯ ಭಾರತಿ ಮತ್ತು ಭೀಮಸೇನ್ ಜೋಷಿ ಅವರ ಹೆಸರಲ್ಲೂ ಹೊಸ ಅಂಚೆ ಚೀಟಿ ಬಿಡುಗಡೆ ಮಾಡಲು ಸರ್ಕಾರ ನಿರ್ಧರಿಸಿದೆ. ಶುಕ್ರವಾರ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ನೇತೃತ್ವದಲ್ಲಿ ನಡೆದ ಅಂಚೆಚೀಟಿ ಸಲಹಾಸಮಿತಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com