ಭೂ ಸ್ವಾಧೀನ ಮಸೂದೆ: ಯುಪಿಎ ಸರ್ಕಾರವಧಿಯ ಮಸೂದೆ ಜಾರಿಗೆ ಕೇಂದ್ರ ಚಿಂತನೆ?

ಭೂ ಸ್ವಾಧೀನ ಮಸೂದೆಗೆ ದೇಶಾದ್ಯಂತ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರ ತಿದ್ದುಪಡಿ ಮಸೂದೆ ವಾಪಸ್ ಪಡೆದು...
ವೆಂಕಯ್ಯ ನಾಯ್ಡು ಮತ್ತು ಮೋದಿ
ವೆಂಕಯ್ಯ ನಾಯ್ಡು ಮತ್ತು ಮೋದಿ

ನವದೆಹಲಿ: ಭೂ ಸ್ವಾಧೀನ ಮಸೂದೆಗೆ ದೇಶಾದ್ಯಂತ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರ ತಿದ್ದುಪಡಿ ಮಸೂದೆ ವಾಪಸ್ ಪಡೆದು 2013ರ ಯುಪಿಎ ಭೂ ತಿದ್ದುಪಡಿ ಮಸೂದೆ ಒಪ್ಪಿಕೊಳ್ಳಲು ಚಿಂತನೆ ನಡೆಸುತ್ತಿದೆ ಎಂದು ಸಂಸತ್ ನ ಉನ್ನತ ಮೂಲಗಳು ತಿಳಿಸಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.

2013ರಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಭೂ ಮಸೂದೆ ಕಾಯ್ದೆಗೆ ಕಳೆದ ವರ್ಷ ಪ್ರಧಾನಿ ನರೇಂದ್ರ ಮೋದಿ ಭೂ ಮಸೂದೆ ಕಾಯ್ದೆಯಲ್ಲಿ ಪ್ರಮುಖ ಬದಲಾವಣೆ ಮಾಡಿತ್ತು. ಆದರೆ ಪ್ರತಿಪಕ್ಷಗಳು ಈ ಹೊಸ ಪ್ರಸ್ತಾಪದ ಭೂ ಮಸೂದೆ ಕಾಯ್ದೆ ಜಾರಿಗೆ ವಿರೋಧ ವ್ಯಕ್ತಪಡಿಸಿ ಇದು ರೈತ ವಿರೋಧಿ ಮಸೂದೆ ಎಂದು ವಾಗ್ದಾಳಿ ನಡೆಸಿದ್ದವು.

ಆದರೆ ಭೂಸ್ವಾಧೀನ ತಿದ್ದುಪಡಿ ಮಸೂದೆ ಜಾರಿಗೆ ಸರ್ಕಾರಕ್ಕೆ ರಾಜ್ಯಸಭೆಯಲ್ಲಿ ಭಾರೀ ಹಿನ್ನಡೆ ಉಂಟಾಗಿತ್ತು. ಅಲ್ಲದೇ ಮಸೂದೆ ಜಾರಿಗೆ ಬೆಂಬಲ ನೀಡಬೇಕೆಂಬ ಪ್ರಧಾನಿ ಮೋದಿ ಮನವಿಗೂ ಪ್ರತಿಪಕ್ಷಗಳು ಸ್ಪಂದಿಸಿಲ್ಲವಾಗಿತ್ತು. ಆ ನಿಟ್ಟಿನಲ್ಲಿ ಇದೀಗ ಉಲ್ಟಾ ಹೊಡೆದಿರುವ ಕೇಂದ್ರ ಸರ್ಕಾರ 2013ರ ಮಸೂದೆಯನ್ನು ಹಾಗೆಯೇ ಉಳಿಸಿಕೊಳ್ಳಲು ಚಿಂತನೆ ನಡೆಸಿದೆ ಎಂದು ವರದಿ ವಿವರಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com