ಸ್ವಯಂಘೋಷಿತ ದೇವಮಾನ ಅಸಾರಾಂ ಬಾಪುಗೆ ರಾಜಸ್ಥಾನ ಪಠ್ಯ ಪುಸ್ತಕದಲ್ಲಿ ಜಾಗ!
ಜೋಧಪುರ: ಅತ್ಯಾಚಾರದ ಆರೋಪ ಎದುರಿಸುತ್ತಿರುವ, ಸ್ವಯಂಘೋಷಿತ ದೇವಮಾನ ಅಸಾರಾಂ ಬಾಪುನಿಗೆ ರಾಜಸ್ಥಾನದಲ್ಲಿ ಇನ್ನೂ ಸಂತನ ಸ್ಥಾನವಿದೆ. ಸ್ವಾಮಿ ವಿವೇಕಾನಂದ, ಗುರುನಾನಕ್, ರಾಮಕೃಷ್ಣ ಪರಮಹಂಸರಂಥ ಮಹಾತ್ಮರ ಸ್ಥಾನದಲ್ಲಿ ಅಸಾರಾಂಗೂ ಸ್ಥಾನ ನೀಡಲಾಗಿದೆ!
ಹೌದು, ರಾಜಸ್ಥಾನದ ಎಂಟನೇ ತರಗತಿಯ ನೈತಿಕ ಶಿಕ್ಷಣ ಹಾಗೂ ಜಿಕೆ ಪಠ್ಯ ಪುಸ್ತಕ ``ನಯಾ ಉಜಾಲಾ'' ಪಠ್ಯದಲ್ಲಿ ಅಸಾರಾಂಗೆ ಇಂಥದ್ದೊಂದು ವಿಶೇಷ ಗೌರವ ನೀಡಲಾಗಿದೆ. ಸಂತ ಕಬೀರ್, ಮೀರಾಬಾಯ್, ಮದರ್ ತೆರೇಸಾ ಮತ್ತು ಶಂಕರಾಚಾರ್ಯ ಅವರೂ ಇರುವ ಈ ಪಠ್ಯದಲ್ಲಿ ಯೋಗ ಗುರು ಬಾಬಾ ರಾಮ್ ದೇವ್ ಅವರಿಗೂ
ಸ್ಥಾನ ಕಲ್ಪಿಸಲಾಗಿದೆ.
ಈ ಪಠ್ಯಪುಸ್ತಕವನ್ನು ದೆಹಲಿ ಮೂಲದ ಗುರುಕುಲ್ ಎಜುಕೇಷನ್ ಬುಕ್ಸ್ ಸಂಸ್ಥೆ ಪ್ರಕಟಿಸಿತ್ತು. ಆದರೆ, ಈ ವಿಚಾರ ವಿವಾದಕ್ಕೆ ಗುರಿಯಾಗುತ್ತಿದ್ದಂತೆ ಶಿಕ್ಷಣ ಇಲಾಖೆ ಆ ಪುಸ್ತಕವನ್ನು ವಾಪಸ್ ಪಡೆಯಲು ನಿರ್ಧರಿಸಿದೆ. ಅತ್ಯಾಚಾರ ಆರೋಪ ಪ್ರಕರಣದಲ್ಲಿ ಅಸಾರಾಂ 2013ರಿಂದಲೂ ಜೈಲಿನಲ್ಲಿದ್ದಾರೆ. ಹದಿನಾರು ವರ್ಷದ ಬಾಲಕಿ ನೀಡಿದ ದೂರಿನಂತೆ ಅಸಾರಾಂ ಬಂಧಿಸಲಾಗಿತ್ತು
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ