ಸ್ವಚ್ಛ ಭಾರತ, ಭೇಟಿ ಬಚಾವೋ ಆಂಧೋಲನಕ್ಕೆ ಭಿಕ್ಷುಕರಿಂದ ಪ್ರಚಾರ!

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಸ್ವಚ್ಛ ಭಾರತ ಅಭಿಯಾನ ಹಾಗೂ ಭೇಟಿ ಬಚಾವೋ ಅಭಿಯಾನವನ್ನು ವಿನೂತನವಾಗಿ ಪ್ರಚಾರ ಮಾಡಲು ನಿರ್ಧರಿಸಿದೆ.
ಭಿಕ್ಷಾಟನೆ ಮಾಡುವವರಿಂದ ಸ್ವಚ್ಛ ಭಾರತ, ಭೇಟಿ ಬಚಾವೋ ಆಂಧೋಲನದ ಪ್ರಚಾರ
ಭಿಕ್ಷಾಟನೆ ಮಾಡುವವರಿಂದ ಸ್ವಚ್ಛ ಭಾರತ, ಭೇಟಿ ಬಚಾವೋ ಆಂಧೋಲನದ ಪ್ರಚಾರ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಸ್ವಚ್ಛ ಭಾರತ ಅಭಿಯಾನ ಹಾಗೂ ಭೇಟಿ ಬಚಾವೋ ಅಭಿಯಾನವನ್ನು ವಿನೂತನವಾಗಿ ಪ್ರಚಾರ ಮಾಡಲು ನಿರ್ಧರಿಸಿದೆ.

ಭಿಕ್ಷುಕರಿಗೆ ಕೆಸಲ ನೀಡಲು ಮುಂದಾಗಿರುವ ಮೋದಿ ಸರ್ಕಾರ, ಭಿಕ್ಷುಕರಿಂದಲೇ ಸ್ವಚ್ಛ ಭಾರತ ಹಾಗೂ ಭೇಟಿ ಬಚಾವೋ ಯೋಜನೆಯನ್ನು ಪ್ರಚಾರ ಮಾಡಿಸಲು ಚಿಂತನೆ ನಡೆಸಿದೆ. ಆಂಗ್ಲ ಮಾಧ್ಯಮವೊಂದರ ವರದಿ ಪ್ರಕಾರ, ಭಿಕ್ಷಾಟನೆ ಮಾಡುವ ಸುಮಾರು 3000 ಮಹಿಳಾ ಹಾಗೂ ಪುರುಷರಿಗೆ ಯೋಜನೆಯ ಪ್ರಚಾರಕ್ಕಾಗಿ ತರಬೇತಿ ಕೇಂದ್ರ ಸರ್ಕಾರ ಕಾರ್ಯಕ್ರಮ ರೂಪಿಸಿದೆ.

ಈ ಕಲ್ಪನೆ ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯದ ಕನಸಿನ ಕೂಸಾಗಿದ್ದು, ಹಾಗೂ ಹಾಗು ನಾತಕಗಳನ್ನೊಳಗೊಂದ ಯೋಜನೆಯ ಪ್ರಚಾರವನ್ನು ಆಲ್ ಇಂಡಿಯಾ ರೇಡಿಯೋಗಳಲ್ಲಿ ಪ್ರಕಟಿಸಲಾಗುತ್ತದೆ ಎಂದು ವರದಿ ಹೇಳಿದೆ. ಭಿಕ್ಷುಕರಿಂದ ಯೋಜನೆಯ ಪ್ರಚಾರ ನಡೆಸುವ ಕಾರ್ಯಕ್ರಮವನ್ನು ಮುಂಬೈ ನ ಉಪನಗರಗಳಲ್ಲಿ ಪ್ರಾಯೋಗಿಕವಾಗಿ ಪ್ರಸಾರ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ. ಈ ವಿನೂತನ ಕಾರ್ಯಕ್ರಮ ಭಾರತ ಸರ್ಕಾರದ ಯೋಜನೆಯ ಪ್ರಚಾರದ ಜೊತೆ ಜೊತೆಯಲ್ಲೇ ಭಿಕ್ಷುಕರ ಜೀವನ ಬದಲಾಗಲಿದೆ ಎಂಬುದು ವಿಶೇಷವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com