

ನವದೆಹಲಿ: ವಾಯು ಸಂಪರ್ಕ ಹೆಚ್ಚಿಸಲು ರು. 740 ಕೋಟಿ ವೆಚ್ಚದಲ್ಲಿ ಸಣ್ಣ ಪ್ರಮಾಣದ ಐದು ವಿಮಾನ ನಿಲ್ದಾಣಗಳನ್ನು ನಿರ್ಮಾಣ ಮಾಡುವುದಾಗಿ ಕೇಂದ್ರ ವಿಮಾನ ಯಾನ ಖಾತೆ ಸಹಾಯಕ ಸಚಿವ ಮಹೇಶ್ ಶರ್ಮ ಹೇಳಿದ್ದಾರೆ.
ರಾಜ್ಯದ ಹುಬ್ಬಳ್ಳಿ ಮತ್ತು ಬೆಳಗಾವಿ, ರಾಜಸ್ಥಾನದ ಕಿಶನ್‍ಗರ್, ಒಡಿಶಾದ ಜಾರ್‍ಸುಗುಡ, ಅರುಣಾಚಲ ಪ್ರದೇಶದ ತೆಜುನಲ್ಲಿ ನಿರ್ಮಾಣ ಮಾಡಲಾಗುವುದು. ಹುಬ್ಬಳ್ಳಿ ವಿಮಾನ ನಿಲ್ದಾಣವನ್ನು ರು.141.44 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಿದರೆ ಬೆಳಗಾವಿ ವಿಮಾನ
ನಿಲ್ದಾಣಕ್ಕೆ ರು.141.87 ಕೋಟಿ ನೀಡಲಾಗುವುದು.