ನಿರ್ಬಂಧಿಸಲಾದ 857 ಪೋರ್ನ್ ವೆಬ್ ಸೈಟ್ ಗಳ ಪೂರ್ಣ ಪಟ್ಟಿ ಇಲ್ಲಿದೆ

ಇಂಟರ್ನೆಟ್ ಅಂಡ್ ಸೊಸೈಟಿ ಕೇಂದ್ರ ದೂರಸಂಪರ್ಕ ಇಲಾಖೆಯಿಂದ ನಿಷೇಧಿಸಲಾಗಿರುವ 857 ಪೋರ್ನ್ ವೆಬ್ ಸೈಟ್ ಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದೆ.
ಪೋರ್ನ್ ವೀಕ್ಷಣೆ (ಸಾಂಕೇತಿಕ ಚಿತ್ರ)
ಪೋರ್ನ್ ವೀಕ್ಷಣೆ (ಸಾಂಕೇತಿಕ ಚಿತ್ರ)

ನವದೆಹಲಿ: ಇಂಟರ್ನೆಟ್ ಅಂಡ್ ಸೊಸೈಟಿ ಕೇಂದ್ರ(ಸಿಐಎಸ್) ದೂರಸಂಪರ್ಕ ಇಲಾಖೆಯಿಂದ ನಿಷೇಧಿಸಲಾಗಿರುವ 857 ಪೋರ್ನ್ ವೆಬ್ ಸೈಟ್ ಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದೆ.

ನಿರ್ಬಂಧಿಸಲಾದ 857 ಪೋರ್ನ್ ವೆಬ್ ಸೈಟ್ ಗಳ ಪೂರ್ಣ ಪಟ್ಟಿಗೆ ಇಲ್ಲಿ ಕ್ಲಿಕ್ ಮಾಡಿ

ಸಂವಿಧಾನದ ಆರ್ಟಿಕಲ್ 19 (2) ಹಾಗೂ ಐಟಿ ಕಾಯ್ದೆಯ ಸೆಕ್ಷನ್ 79 (3 )(ಬಿ) ಪ್ರಕಾರ ನೈತಿಕತೆ ಮತ್ತು ಸಭ್ಯತೆಯನ್ನು ಮೀರಿ ನಡೆಯುತ್ತಿದ್ದ 857 ಪೋರ್ನ್ ವೆಬ್ ಸೈಟ್ ಗಳನ್ನು ನಿಷೇಧಿಸುವಂತೆ ಕೆಂದ್ರ ಸರ್ಕಾರ ಇಂಟರ್ನೆಟ್ ಸೇವೆ ಪೂರೈಕೆದಾರರಾದ ಹಾತ್ ವೆ, ಬಿಎನ್ಎನ್ಎಲ್, ಎಂಟಿಎನೆಲ್, ವೊಡಾಫೋನ್ ಮತ್ತು ಎಸಿಟಿ ಗಳಿಗೆ ಆದೇಶ ನೀಡಿತ್ತು.

ಕೇಂದ್ರ ಸರ್ಕಾರದ ಈ ಕ್ರಮದ ವಿರುದ್ಧ ಇಂಟರ್ ನೆಟ್ ಬಳಕೆದಾರರು ಅಸಮಾಧಾನ ವ್ಯಕ್ತಪಡಿಸಿದ್ದರು. ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಸರ್ಕಾರದ ಕ್ರಮವನ್ನು ಖಂಡಿಸಿ ಇದು ಸ್ವಾತಂತ್ರ್ಯ ಕಿತ್ತುಕೊಳ್ಳುವ ತಾಲಿಬಾನ್ ಮಾದರಿಯಾ ಕ್ರಮ ಎಂದು ಟ್ವೀಟ್ ಮಾಡಿದ್ದರು.  ಕಳೆದ ಎರಡು ದಿನಗಳಿಂದ ಪ್ರಮುಖ ಪೋರ್ನ್ ವೆಬ್ ಸೈಟ್ ಗಳು ಸ್ಥಗಿತಗೊಂಡಿವೆ. ಸಾಮಾಜಿಕ ಜಾಲತಾಣಗಳಲ್ಲಿ ಪೋರ್ನ್ ವೆಬ್ ಸೈಟ್ ಗಳನ್ನು ನಿಷೇಧಿಸಿರುವುದರ ಬಗ್ಗೆ ಇನ್ನೂ ಚರ್ಚೆ ನಡೆಯುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com