
ದೆಹಲಿ: ದೆಹಲಿ ಮಾಜಿ ಕಾನೂನು ಸಚಿವ ಸೋಮನಾಥ್ ಭಾರ್ತಿ ಅವರ 'ಸುಂದರ ಮಹಿಳೆ' ರಕ್ಷಣೆ ನೀಡುತ್ತೇವೆ ಎಂಬ ಹೇಳಿಕೆಗೆ, ಅವರ ಪತ್ನಿ ಟಾಂಗ್ ನೀಡಿದ್ದಾರೆ.
'ನಾನು ತುಂಬಾ ಸುಂದರವಾಗಿಲ್ಲ, ರೂಪವತಿಯಲ್ಲ. ಬಹುಶಃ ಅದೇ ಕಾರಣಕ್ಕೆ ನನ್ನ ಮೇಲೆ ದೌರ್ಜನ್ಯವೆಸಗಿದರು,' ಎಂದು ಲಿಪಿಕಾ ಮಿತ್ರಾ ಟೀಕಿಸಿದ್ದಾರೆ. ಸೋಮನಾಥ್ ಭಾರ್ತಿ ನನ್ನ ರಕ್ಷಣೆ ಬಗ್ಗೆ ಯೋಚನೆಯಿಲ್ಲ. ಆದರೆ, 'ಸುಂದರ ಮಹಿಳೆ'ಯರ ರಕ್ಷಣೆ ಬಗ್ಗೆ ಮಾತ್ರ ಚಿಂತಿತರಾಗಿದ್ದಾರೆ,' ಎಂದು ಪತಿಯ ದೌರ್ಜನ್ಯದ ವಿರುದ್ಧ ದೂರು ದಾಖಲಿಸಿದ್ದ ಲಿಪಿಕಾ ಕಿಡಿಕಾರಿದ್ದಾರೆ.
'ರಾಷ್ಟ್ರ ರಾಜಧಾನಿಯ ಪೊಲೀಸ್ ವ್ಯವಸ್ಥೆಯನ್ನು ತನ್ನ ಸುಪರ್ದಿಗೆ ತೆಗೆದುಕೊಂಡರೆ, 'ಸುಂದರ ಮಹಿಳೆ'ಯರೂ (ಬ್ಯೂಟಿಫುಲ್ ವುಮೆನ್) ಮಧ್ಯರಾತ್ರಿ ನಂತರ ದಿಲ್ಲಿಯಲ್ಲಿ ಯಾವುದೇ ಭಯವಿಲ್ಲದೆ ಓಡಾಡಬಹುದು,' ಎಂದು ಹೇಳಿಕೆ ನೀಡಿದ್ದರು. ನಂತರ ತಮ್ಮ ಹೇಳಿಕಗೆ ಸೋಮನಾಥ್ ಬಾರ್ಚಿ ಸಮರ್ಥನೆ ಕೂಡ ನೀಡಿದ್ದರು. ಆದರೆ ಇದಕ್ಕೆ ಎಲ್ಲೆಡೆಯಿಂದ ತೀವ್ರ ವಿರೋಧ ವ್ಯಕ್ತವಾಗಿದ್ದು, ಮಹಿಳಾ ಪರ ಸಂಘಟನೆಗಳು ಭಾರ್ತಿ ವಿರುದ್ಧ ಪ್ರತಿಭಟನೆ ನಡೆಸಿವೆ.
Advertisement