ಸೋಮನಾಥ್ ಭಾರತಿ ವಿರುದ್ಧ ಪ್ರಾಸಿಕ್ಯುಷನ್‌ಗೆ ಲೆ.ಗವರ್ನರ್ ಅನುಮತಿ

ಆಮ್ ಅದ್ಮಿ ಪಕ್ಷದ ಸರ್ಕಾರದ ವಾದವನ್ನು ಸ್ಪಷ್ಟವಾಗಿ ತಳ್ಳಿಹಾಕಿರುವ ದೆಹಲಿ ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್ ಅವರು, ದೆಹಲಿ ಮಾಜಿ ಕಾನೂನು ಸಚಿವ ಹಾಗೂ...
ಸೋಮನಾಥ್ ಭಾರತಿ
ಸೋಮನಾಥ್ ಭಾರತಿ

ನವದೆಹಲಿ: ಆಮ್ ಅದ್ಮಿ ಪಕ್ಷದ ಸರ್ಕಾರದ ವಾದವನ್ನು ಸ್ಪಷ್ಟವಾಗಿ ತಳ್ಳಿಹಾಕಿರುವ ದೆಹಲಿ ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್ ಅವರು, ದೆಹಲಿ ಮಾಜಿ ಕಾನೂನು ಸಚಿವ ಹಾಗೂ ಆಪ್ ಹಾಲಿ ಶಾಸಕ ಸೋಮನಾಥ್ ಭಾರತ ವಿರುದ್ಧ ಪ್ರಾಸಿಕ್ಯುಷನ್ ಅನುಮತಿ ನೀಡಿದ್ದಾರೆ.

2014, ಜನವರಿಯಲ್ಲಿ ದಕ್ಷಿಣ ದೆಹಲಿಯ ಮನೆಯೊಂದರ ಮೇಲೆ ಮಧ್ಯರಾತ್ರಿ ದಾಳಿ ಮಾಡಿದ್ದ ವೇಳೆ ಕಾನೂನು ಸಚಿವರಾಗಿದ್ದ ಸೋಮನಾಥ್ ಭಾರತಿ ಅವರು ವಿದೇಶಿ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಆರೋಪ ಎದುರಿಸುತ್ತಿದ್ದು, ಈ ಸಂಬಂಧ ಪ್ರಕರಣ ದಾಖಲಿಸಲು ಅನುಮತಿ ನೀಡಬಾರದು ಎಂದು ಗೃಹ ಸಚಿವ ಸತ್ಯೇಂದ್ರ ಜೈನ್ ಅವರು ಲೆಫ್ಟಿನೆಂಟ್ ಗವರ್ನರ್‌ಗೆ ಸಲಹೆ ನೀಡಿದ್ದರು. ಆದರೆ ದೆಹಲಿ ಸರ್ಕಾರದ ಸಲಹೆಯನ್ನು ತಿರಸ್ಕರಿಸಿರುವ ನಜೀಬ್ ಜಂಗ್, ಸೋಮನಾಥ್ ಭಾರತಿ ವಿರುದ್ಧ ಕೇಸ್ ದಾಖಲಿಸಲು ಪೊಲೀಸರಿಗೆ ಅನುಮತಿ ನೀಡಿದ್ದಾರೆ ಎಂದು ರಾಜಭವನದ ಮೂಲಗಳು ತಿಳಿಸಿವೆ.

ಪ್ರಕರಣದ ಗಂಭೀರತೆಯನ್ನು ಅರಿತು ಲೆಫ್ಟಿನೆಂಟ್ ಗವರ್ನರ್ ಪ್ರಾಸಿಕ್ಯುಷನ್‌ಗೆ ಅನುಮತಿ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಜನವರಿ 15 ಹಾಗೂ 16ರಂದು ದೆಹಲಿಯ ಖಿರ್ಕಿ ಪ್ರದೇಶದಲ್ಲಿನ ಆಫ್ರಿಕನ್ ಮಹಿಳೆಯರ ನಿವಾಸಗಳ ಮೇಲೆ ಭಾರತಿ ನೇತೃತ್ವದ ತಂದ ದಾಳಿ ನಡೆಸಿತ್ತು. ಈ ಸಂಬಂಧ ಸೋಮನಾಥ್ ಭಾರತಿ ವಿರುದ್ಧ ಕೇಸ್ ದಾಖಲಿಸಲು ಲೆಫ್ಟಿನೆಂಟ್ ಗವರ್ನರ್‌ರಿಂದ ಅನುಮತಿ ಪಡೆದುಕೊಳ್ಳುವಂತೆ ಕೋರ್ಟ್ ಪೊಲೀಸರಿಗೆ ಸೂಚಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com