ಡಿಎನ್ಎ ಹೇಳಿಕೆ ವಿವಾದ: ಮೋದಿಗೆ ಪತ್ರ ಬರೆದ ನಿತೀಶ್ ಕುಮಾರ್

ಡಿಎನ್ಎ ಕುರಿತಂತೆ ಹೇಳಿಕೆ ನೀಡಿದ್ದ ಪ್ರಧಾನಿ ಮೋದಿ ವಿರುದ್ಧ ಕಿಡಿಕಾಡಿರುವ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಸಾಮಾಜಿಕ ಜಾಲತಾಣದ ಮೂಲಕ ಬುಧವಾರ ಮೋದಿ ಅವರಿಗೆ ಬಹಿರಂಗ ಪತ್ರ ಬರೆದಿದ್ದು, ತಮ್ಮ ಹೇಳಿಕೆಯನ್ನು ಹಿಂಪಡೆಯುವಂತೆ ಹೇಳಿದ್ದಾರೆ...
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ (ಸಂಗ್ರಹ ಚಿತ್ರ)
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ (ಸಂಗ್ರಹ ಚಿತ್ರ)

ಪಾಟ್ನ: ಡಿಎನ್ಎ ಕುರಿತಂತೆ ಹೇಳಿಕೆ ನೀಡಿದ್ದ ಪ್ರಧಾನಿ ಮೋದಿ ವಿರುದ್ಧ ಕಿಡಿಕಾಡಿರುವ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಸಾಮಾಜಿಕ ಜಾಲತಾಣದ ಮೂಲಕ ಬುಧವಾರ ಮೋದಿ ಅವರಿಗೆ ಬಹಿರಂಗ ಪತ್ರ ಬರೆದಿದ್ದು, ತಮ್ಮ ಹೇಳಿಕೆಯನ್ನು ಹಿಂಪಡೆಯುವಂತೆ ಹೇಳಿದ್ದಾರೆ.

ಟ್ವಿಟ್ಟರ್ ನಲ್ಲಿ ತಮ್ಮ ಬಹಿರಂಗ ಪತ್ರವನ್ನು ಮೋದಿ ಅವರಿಗೆ ಬರೆದಿರುವ ನಿತೀಶ್ ಕುಮಾರ್ ಅವರು, ಪತ್ರದಲ್ಲಿ ಕೆಲವು ದಿನಗಳ ಹಿಂದೆ ಬಿಹಾರ ಚುನಾವಣೆ ಸಂಬಂಧ ರ್ಯಾಲಿ ವೇಳೆ ನನ್ನ ಡಿಎನ್ಎ ಕುರಿತಂತೆ ಹೇಳಿಕೆ ನೀಡಿದ್ದಿರಿ. ಈ ಹೇಳಿಕೆ ಕೇವಲ ಬಿಹಾರದಲ್ಲಿರುವ ಜನತೆಗಷ್ಟೇ ಅಲ್ಲದೇ ಹೊರ ರಾಜ್ಯದಲ್ಲಿರುವ ಬಿಹಾರ ಜನರಿಗೂ ನೋವುಂಟು ಮಾಡಿದೆ. ನಿಮ್ಮ ನಾಯಕತ್ವದ ಮೇಲೆ ಜನರಿಟ್ಟಿರುವ ನಂಬಿಕೆಗಳು ಈ ರೀತಿಯ ಹೇಳಿಕೆಗಳಿಂದ ಹಾಳಾಗಲಿದೆ. ಬಿಹಾರ ಜನತೆಯಲ್ಲಿರುವ ಡಿಎನ್ಎ ಯಂತೆಯೇ ನನ್ನ ಡಿಎನ್ಎ ಇರುವುದು. ಬಿಹಾರದ ಗ್ರಾಮಾಂತರ ಪ್ರದೇಶದಲ್ಲಿ ನಾನು ಬೆಳೆದದ್ದು, ಈ ರೀತಿಯ ಹೇಳಿಕೆಗಳು ನನ್ನ ಜೀವನದ ಮೇಲೆ ಪರಿಣಾಮ ಬೀರಲಿದ್ದು, ಬಿಹಾರ ಜನತೆಯಲ್ಲಿ ಹಲವು ಅನುಮಾನಗಳನ್ನು ಹುಟ್ಟುಹಾಕುತ್ತವೆ. ಕೂಡಲೇ ತಮ್ಮ ಹೇಳಿಕೆಯನ್ನು ಹಿಂಪಡೆಯಿರಿ ಎಂದು ಹೇಳಿದ್ದಾರೆ.

ಬಿಹಾರ ಚುನಾವಣೆ ಸಂಬಂಧ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ್ದ ಪ್ರಧಾನಿಮಂತ್ರಿ ನರೇಂದ್ರ ಮೋದಿ ಅವರು, ನಿತೀಶ್ ಕುಮಾರ್ ನನ್ನೊಬ್ಬನಿಗೆ ಮಾತ್ರವೇ ಅಗೌರವ ಸೂಚಿಸಿಲ್ಲ. ಮಹಾದಲಿತರಾದ ಜಿತನ್ ರಾಮ್ ಮಾಂಝಿ ಅವರಿಗೂ ಈ ಹಿಂದೆ ಅಗೌರವ ಸೂಚಿಸಿದ್ದಾರೆ. ಇಲ್ಲಿರುವ ಜನತೆಯ ಡಿಎನ್ಎಗೂ ನಿತೀಶ್ ಕುಮಾರ್ ಅವರ ಡಿಎನ್ ಎಗೂ ಸಾಕಷ್ಟು ವ್ಯತ್ಯಾಸಿವಿದ್ದು, ಅವರ ಡಿಎನ್ಎಯಲ್ಲಿ ಏನಾದರೂ ಸಮಸ್ಯೆ ಇರಬಹುದು ಎಂದು ಹೇಳಿದ್ದರು.

ಮೋದಿ ಅವರ ಈ ಹೇಳಿಕೆ ಹಲವು ವಿವಾದಕ್ಕೆ ಕಾರಣವಾಗಿತ್ತಲ್ಲದೇ, ಮೋದಿ ಅವರು ಡಿಎನ್ಎ ಪ್ರಶ್ನೆ ಎತ್ತುವ ಮೂಲಕ ಕೇವಲ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರಿಗೆ ಮಾತ್ರವೇ ಅಪಮಾನ ಮಾಡಿಲ್ಲ. ಬಿಹಾರದ 11 ಕೋಟಿ ಜನರಿಗೂ ಅಪಮಾನ ಮಾಡಿದ್ದಾರೆಂದು ಜೆಡಿಯು ನಾಯಕರು ಆರೋಪ ವ್ಯಕ್ತಪಡಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com