ಅಂಬಾಲ ರೈಲು ನಿಲ್ದಾಣದಲ್ಲಿ ಆತಂಕ ಸೃಷ್ಟಿಸಿದ ಹುಸಿ ಬಾಂಬ್ ಬೆದರಿಕೆ ಕರೆ

ಅಂಬಾಲದ ಕಂಟೋನ್ಮೆಂಟ್ ರೈಲು ನಿಲ್ದಾಣದಲ್ಲಿ ಬಾಂಬ್ ಇಟ್ಟಿರುವುದಾಗಿ ಬುಧವಾರ ಬೆಳಗ್ಗೆ ಬಂದ ಅನಾಮಧೇಯ ಹುಸಿ ಕರೆಯೊಂದು ಕೆಲ ಕಾಲ ನಿಲ್ದಾಣದಾದ್ಯಂತ ಆತಂಕ ವಾತಾವನ್ನು ಸೃಷ್ಟಿ ಮಾಡಿತ್ತು...
ಅಂಬಾಲದ ಕಂಟೋನ್ಮೆಂಟ್ ರೈಲು ನಿಲ್ದಾಣ (ಸಂಗ್ರಹ ಚಿತ್ರ)
ಅಂಬಾಲದ ಕಂಟೋನ್ಮೆಂಟ್ ರೈಲು ನಿಲ್ದಾಣ (ಸಂಗ್ರಹ ಚಿತ್ರ)

ಅಂಬಾಲ: ಅಂಬಾಲದ ಕಂಟೋನ್ಮೆಂಟ್ ರೈಲು ನಿಲ್ದಾಣದಲ್ಲಿ ಬಾಂಬ್ ಇಟ್ಟಿರುವುದಾಗಿ ಬುಧವಾರ ಬೆಳಗ್ಗೆ ಬಂದ ಅನಾಮಧೇಯ ಹುಸಿ ಕರೆಯೊಂದು ಕೆಲ ಕಾಲ ನಿಲ್ದಾಣದಾದ್ಯಂತ ಆತಂಕ ವಾತಾವನ್ನು ಸೃಷ್ಟಿ ಮಾಡಿತ್ತು.

ಬಾಂಬ್ ಬೆದರಿಕೆ ಕರೆ ಹಿನ್ನೆಲೆಯಲ್ಲಿ ಬಾಂಬ್ ನಿಷ್ಕ್ರಿಯ ದಳ, ರೈಲ್ನೆ ಸಂರಕ್ಷಣಾ ಪಡೆ ಹಾಗೂ ಶ್ವಾನ ದಳಗಳು ಹಲವು ತಾಸುಗಳ ಕಾಲ ರೈಲ್ವೆ ನಿಲ್ದಾಣ ಹಾಗೂ ಸುತ್ತ ಮುತ್ತ ಪರಿಶೀಲನೆ ನಡೆಸಿದವು. ಇಂದು ಪೊಲೀಸ್ ಠಾಣೆಗೆ ಕರೆ ಮಾಡಿದ ವ್ಯಕ್ತಿಯೊಬ್ಬ ಅಧಿಕಾರಿಗಳ ಬಳಿ ಇಬ್ಬರು ವ್ಯಕ್ತಿಗಳು ಬಂದು ಬ್ಯಾಗ್ ಒಂದನ್ನು ಕೊಟ್ಟು ತಮ್ಮ ಮನೆಯಲ್ಲಿ ಇಟ್ಟುಕೊಳ್ಳುವಂತೆ ಹೇಳಿದ್ದರು. ಇದಕ್ಕೆ ಸಾಕಷ್ಟು ಹಣ ನೀಡುವುದಾಗಿ ಹೇಳಿದ್ದರು. ಹೀಗಾಗಿ ಬ್ಯಾಗ್ ನ್ನು ನನ್ನ ಮನೆಗೆ ತೆಗೆದುಕೊಂಡು ಹೋಗಿ ಇಟ್ಟುಕೊಂಡಿದ್ದೆ. ಎರಡು ದಿನಗಳ ಬಳಿಕೆ ಬಂದ ಆವ್ಯಕ್ತಿಗಳು ಬ್ಯಾಗ್ ನ್ನು ಹಿಂಪೆಡೆದುಕೊಂಡು ಹೋದರು. ನಂತರ ಇಬ್ಬರು ಪಿಸುಮಾತನಲ್ಲಿ ಮಾತನಾಡಿಕೊಳ್ಳುತ್ತಿದ್ದರು. ಬ್ಯಾಗ್ ನಲ್ಲಿ ಸ್ಫೋಟಕ ವಸ್ತುವಿರುವುದಾಗಿ ಕಂಡುಬಂದಿತು. ಅಲ್ಲದೆ ಈ ವಸ್ತುವನ್ನು ಅಂಬಾಲ ರೈಲ್ವೆ ನಿಲ್ದಾಣದಲ್ಲಿ ಇರಿಸುವುದಾಗಿ ಮಾತನಾಡಿಕೊಳ್ಳುತ್ತದ್ದರು ಎಂದು ಹೇಳಿದ್ದಾನೆ.

ವ್ಯಕ್ತಿಯ ಮಾಹಿಯನ್ವಯ ಎಚ್ಚೆತ್ತ ಪೊಲೀಸರು ಬಾಂಬಾ ನಿಷ್ಕ್ರಿಯ ದಳ, ಶ್ವಾನದಳದೊಂದಿಗೆ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ. ಆದರೆ, ಎಲ್ಲಿಯೂ ಯಾವುದೇ ಸ್ಫೋಟಕ ವಸ್ತುಗಳು ಪತ್ತೆಯಾಗಿಲ್ಲ. ಈ ಹಿನ್ನೆಲೆಯಲ್ಲಿ ಇದೊಂದು ಹುಸಿ ಬಾಂಬ್ ಕರೆ ಎಂದು ನಿರ್ಧರಿಸಿದ್ದಾರೆ.

ಬೆದರಿಕೆ ಕರೆ ಹಿನ್ನೆಲೆಯಲ್ಲಿ ರೈಲ್ವೆ ನಿಲ್ದಾಣದಾದ್ಯಂತ ತಪಾಸಣೆ ನಡೆಸಲಾಯಿತು. ಆದರೆ, ಎಲ್ಲಿಯೂ ಯಾವುದೇ ಸ್ಪೋಟ ವಸ್ತವಗಳು ಪತ್ತೆಯಾಗಿಲ್ಲ .ಇದೊಂದು ಹುಸಿ ಬಾಂಬ್ ಬೆದರಿಕೆ ಕರೆ.ಪೊಲೀಸರಿಗೆ ಮಾಹಿತಿ ನೀಡಿದ ವ್ಯಕ್ತಿಯನ್ನು ಯಮುನಾನಗರ ನಿವಾಸಿ ರಿಂಕು ಎಂದು ಗುರ್ತಿಸಲಾಗಿದ್ದು, ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಡಿಸಿಪಿ ಸುರೇಂದರ್ ಪಾಲ್ ಸಿಂಗ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com