ಮ.ಪ್ರ ಅವಳಿ ರೈಲು ದುರಂತ ಹಿನ್ನೆಲೆ 9 ರೈಲು ಸಂಚಾರ ರದ್ದು

ಮಧ್ಯಪ್ರದೇಶದ ಕುದ್ವಾ ಪ್ರದೇಶದಲ್ಲಿ ನಡೆದ ಅವಳಿ ರೈಲು ದುರಂತ ಹಿನ್ನೆಲೆಯಲ್ಲಿ ಘಟನೆ ಮರುಕಳಿಸದಂತೆ ಎಚ್ಚೆತ್ತುಕೊಂಡಿರುವ ಕೇಂದ್ರ ರೈಲ್ವೆ ಇಲಾಖೆಯು ಇದೀಗ 9 ರೈಲುಗಳ ಸಂಚಾರವನ್ನು ರದ್ದು ಮಾಡಿರುವುದಾಗಿ ತಿಳಿದುಬಂದಿದೆ...
ಮಧ್ಯಪ್ರದೇಶದ ಹರ್ದಾ ಪ್ರದೇಶದಲ್ಲಿ ಹಳಿ ತಪ್ಪಿರುವ ರೈಲುಗಳು
ಮಧ್ಯಪ್ರದೇಶದ ಹರ್ದಾ ಪ್ರದೇಶದಲ್ಲಿ ಹಳಿ ತಪ್ಪಿರುವ ರೈಲುಗಳು
Updated on

ಮುಂಬೈ: ಮಧ್ಯಪ್ರದೇಶದ ಕುದ್ವಾ ಪ್ರದೇಶದಲ್ಲಿ ನಡೆದ ಅವಳಿ ರೈಲು ದುರಂತ ಹಿನ್ನೆಲೆಯಲ್ಲಿ ಘಟನೆ ಮರುಕಳಿಸದಂತೆ ಎಚ್ಚೆತ್ತುಕೊಂಡಿರುವ ಕೇಂದ್ರ ರೈಲ್ವೆ ಇಲಾಖೆಯು ಇದೀಗ 9 ರೈಲುಗಳ ಸಂಚಾರವನ್ನು ರದ್ದು ಮಾಡಿರುವುದಾಗಿ ತಿಳಿದುಬಂದಿದೆ.

ಮುಂಬೈಯಿಂದ ಉತ್ತರ ಪ್ರದೇಶದ ವಾರಣಾಸಿಗೆ ಬರುತ್ತಿದ್ದ ಕಾಮಯಾನಿ ಎಕ್ಸ್ ಪ್ರೆಸ್ ಮಂಗಳವಾರ ಮಧ್ಯರಾತ್ರಿ ಮಧ್ಯಪ್ರದೇಶದ ಪುಟ್ಟ ಸೇತುವೆಯನ್ನು ದಾಟುವಾಗ ಹಳ್ಳಿ ತಪ್ಪಿ ಅಪಘಾತ ಸಂಭವಿಸಿತ್ತು. ಈ ಘಟನೆ ನಡೆದ ಕೆಲವೇ ಕ್ಷಣಗಳಲ್ಲಿ ಪಾಟ್ನಾದಿಂದ ಮುಂಬೈಗೆ ಬರುತ್ತಿದ್ದ ಜನತಾ ಎಕ್ಸ್‌ಪ್ರೆಸ್ (13201) ರೈಲು ಅದೇ ಜಾಗದಲ್ಲಿ ಹಳಿ ತಪ್ಪಿ ಇನ್ನೊಂದು ದುರ್ಘಟನೆ ಸಂಭವಿಸಿತ್ತು. ಈ ಎರಡೂ ಅಪಘಾತಗಳಲ್ಲಿ ಒಟ್ಟು 27ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದರು. ಘಟನೆ ಸಂಭವಿಸುತ್ತಿದ್ದಂತೆ ರಕ್ಷಣೆ ಮುಂದಾದ ಸಿಬ್ಬಂದಿಗಳು 300 ಕ್ಕೂ ಹೆಚ್ಚುಮಂದಿಯ ರಕ್ಷಣೆ ಮಾಡಿತ್ತು.

ಇದೀಗ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ರೈಲ್ವೆ ಇಲಾಖೆಯು ಮುಂಬೈನಿಂದ ಬರುವ 9 ರೈಲುಗಳನ್ನು ಆಗಸ್ಟ್ 5 ಮತ್ತು 6 ಎರಡು ದಿನಗಳವರೆಗೂ ರದ್ದು ಮಾಡಿದೆ ಎಂದು ತಿಳಿದುಬಂದಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com