ಸಂಸತ್ ಗದ್ದಲದಿಂದ ಆರ್ಥಿಕ ಪ್ರಗತಿ ಕುಂಠಿತ: ಸಿಐಐ ಆತಂಕ

ಸಂಸತ್‍ನಲ್ಲಾಗುತ್ತಿರುವ ನಿರಂತರ ಗದ್ದಲವು ಜಿಎಸ್‍ಟಿ, ಭೂಸ್ವಾಧಿನದಂತಹ ಪ್ರಮುಖ ವಿಧೇಯಕಗಳ ಅಂಗೀಕಾರವನ್ನು ವಿಳಂಬ ಮಾಡುತ್ತಿದೆ ಸಿಐಐ ಆರೋಪಿಸಿದೆ.
ಸಂಸತ್ ನಲ್ಲಿ ಕಾಂಗ್ರೆಸ್ ಪ್ರತಿಭಟನೆ(ಸಂಗ್ರಹ ಚಿತ್ರ)
ಸಂಸತ್ ನಲ್ಲಿ ಕಾಂಗ್ರೆಸ್ ಪ್ರತಿಭಟನೆ(ಸಂಗ್ರಹ ಚಿತ್ರ)
Updated on

ನವದೆಹಲಿ: ಸಂಸತ್‍ನಲ್ಲಾಗುತ್ತಿರುವ ನಿರಂತರ ಗದ್ದಲವು ಜಿಎಸ್‍ಟಿ, ಭೂಸ್ವಾಧಿನದಂತಹ ಪ್ರಮುಖ ವಿಧೇಯಕಗಳ ಅಂಗೀಕಾರವನ್ನು ವಿಳಂಬ ಮಾಡುತ್ತಿದೆ ಎಂದು ಭಾರತೀಯ ಕೈಗಾರಿಕೆಗಳ ಒಕ್ಕೂಟ(ಸಿಐಐ) ಆರೋಪಿಸಿದೆ.

ಜಿಎಸ್‍ಟಿ, ಭೂಸ್ವಾಧೀನದಂತಹ ಪ್ರಮುಖ ವಿಧೇಯಕಗಳು ಆರ್ಥಿಕ ಪ್ರಗತಿಗೆ ಅಗತ್ಯ. ಈ ವಿಧೇಯಕಗಳು ಅಂಗೀಕಾರಕ್ಕೆ ಬಾಕಿ ಉಳಿದಿ- ರುವ ಕಾರಣ ಕೈಗಾರಿಕಾ ವಲಯದ ಪ್ರಗತಿಯು ಕುಂಠಿತವಾಗುತ್ತಿದೆ, ಕೈಗಾರಿಕಾ ಉತ್ಪಾದನೆ ಸೂಚ್ಯಂಕ ಚಂಚಲವಾಗುತ್ತಿದೆ, ಬ್ಯಾಂಕು ಸಾಲಗಳು ಲಾಕ್ ಆಗಿಬಿಟ್ಟಿವೆ. ಹೂಡಿಕೆಯ ಪೈಪ್  ಲೈನ್ ನ್ನು ತೆರೆಯುವ ಕೀಲಿಕೈಇರುವುದು ಸಂಸತ್‍ನಲ್ಲಿ. ಕಲಾಪ ಸುಗಮವಾಗಿ ಸಾಗಿದರಷ್ಟೇ ಪ್ರಮುಖ ವಿಧೇಯಕಗಳ ಅಂಗೀ- ಕಾರ ಸಾಧ್ಯ. ಒಮ್ಮೆ ಸುಧಾರಣೆ ಪ್ರಕ್ರಿಯೆ ಆರಂಭವಾದರೆ ಹೂಡಿಕೆಯ ಮುಂದಿನ ಹಂತದತ್ತ ಮುಂದುವರಿಯಬಹುದು ಎಂದಿದ್ದಾರೆ ಸಿಐಐ ಪ್ರಧಾನ ನಿರ್ದೇಶಕ ಚಂದ್ರಜಿತ್ ಬ್ಯಾನರ್ಜಿ.

ಇದೇ ವೇಳೆ ಮಾತನಾಡಿದ ಸಿಐಐ ಅಧ್ಯಕ್ಷ ಸುಮಿತ್ ಮಜೂಮ್ದಾರ್ ವಿಧೇಯಕಗಳು ಹಾಗೂ ಇತರೆ ಆರ್ಥಿಕ ವಿಚಾರಗಳ ಮೇಲೆ ಜನನಾಯಕರು ಗಮನ ಹರಿಸಬೇಕು ಎನ್ನುವುದು
ನಮ್ಮ ಪ್ರಾಮಾಣಿಕ ಕೋರಿಕೆ. ಸಂಸತ್‍ನ ಕಳೆದೆರಡು ಅಧಿವೇಶನಗಳಲ್ಲಿ ನಾವು ಕಂಡ ಸುಧಾರಣಾ ಪ್ರಕ್ರಿಯೆ ಈ ಅಧಿವೇಶನದಲ್ಲೂ ಮುಂದುವರಿಯಬೇಕೆಂದು ನಾವು ಬಯಸು ತ್ತೇವೆ'' ಎಂದಿದ್ದಾರೆ. ನಮ್ಮ ಜನಪ್ರತಿನಿಧಿಗಳು ದೇಶದ ಅವಕಾಶಗಳ ಬಾಗಿಲನ್ನು ತೆರೆಯಬೇಕು ಎನ್ನುವುದು ನಮ್ಮ ಒಕ್ಕೂಟದ ಬಯಕೆ. ಏಕೆಂದರೆ, ಭಾರತದ ಅಬಿವೃದ್ಧಿಯಲ್ಲಿ ಈ ಹೆಜ್ಜೆ ಅಗತ್ಯ ಎಂದಿದ್ದಾರೆ ಸಿಐಐ ಮಾಜಿ ಅಧ್ಯಕ್ಷ ಅಜಯ್ ಶ್ರೀರಾಮ್.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com