ಅಸಹಾಯಕತೆಯ ಲೈಂಗಿಕ ಕ್ರಿಯೆ ಒಪ್ಪಿಗೆಯದ್ದಲ್ಲ: ಸುಪ್ರೀಂ ಕೋರ್ಟ್

ಲೈಂಗಿಕ ದೌರ್ಜನ್ಯದ ಸಂದರ್ಭದಲ್ಲಿ ಭೀತಿ ಬೆದರಿಕೆಯಿಂದ ಅಸಹಾಯಕವಾಗಿ ಸಹಿಸಿಕೊಂಡ ಕಾರಣಕ್ಕೆ ಅದನ್ನು 'ಒಪ್ಪಿತ ಲೈಂಗಿಕ ಕ್ರಿಯೆ' ಎಂದು ಹೇಳಲಾಗದು: ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್
Updated on

ನವದೆಹಲಿ: ಲೈಂಗಿಕ ದೌರ್ಜನ್ಯದ ಸಂದರ್ಭದಲ್ಲಿ ಭೀತಿ ಬೆದರಿಕೆಯಿಂದ ಅಸಹಾಯಕವಾಗಿ ಸಹಿಸಿಕೊಂಡ ಕಾರಣಕ್ಕೆ ಅದನ್ನು 'ಒಪ್ಪಿತ ಲೈಂಗಿಕ ಕ್ರಿಯೆ' ಎಂದು ಹೇಳಲಾಗದು, ಅದೊಂದು ಭೀತಿ ಹುಟ್ಟಿಸಿದ ನಿಶ್ಚಲತೆ ಅಷ್ಟೇ ಎಂದು ಸುಪ್ರೀಂ ಕೋರ್ಟ್ ವ್ಯಾಖ್ಯಾನಿಸಿದೆ.

16 ವರ್ಷದ ಬಾಲಕಿಯೊಬ್ಬಳು ಆಕೆಯ ಹತ್ತಿರದ ಸಂಬಂಧಿಗಳಿಬ್ಬರಿಂದ ಅತ್ಯಾಚಾರಕ್ಕೊಳಗಾದ ಪ್ರಕರಣದಲ್ಲಿ ಅಪರಾಧಿಗಳ ಶಿಕ್ಷೆಪ್ರಮಾಣ ಕಡಿತ ಕೋರಿದ್ದ ಮೇಲ್ಮನವಿ ವಿಚಾರಣೆ ವೇಳೆ ನ್ಯಾ.ದೀಪಕ್ ಮಿಶ್ರಾ ನೇತೃತ್ವದ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ಈ ಬಗ್ಗೆ ದ ಹಿಂದೂ'' ಪತ್ರಿಕೆ ವರದಿ ಮಾಡಿದೆ. ಯಾವುದೇ ಪ್ರಕರಣಗಳಲ್ಲಿ ``ಒಪ್ಪಿತ ಲೈಂಗಿಕ ಕ್ರಿಯೆಯನ್ನು ನಿರ್ಧರಿಸುವಾಗ, ಕ್ರಿಯೆಯ ಮುಂದಿನ ಪರಿಣಾಮ ಅರ್ಥೈಸಿ-ಕೊಳ್ಳುವುದು ಮತ್ತು ಅದರ ಎಲ್ಲ ಹೊಣೆಗಾರಿಕೆಗೆ ಸಿದ್ಧವಾಗಿರುವುದರ ಜೊತೆಗೆ, ಹೆಣ್ಣಿಗೆ ಲೈಂಗಿಕ ಕ್ರಿಯೆಯನ್ನು ತಿರಸ್ಕರಿಸುವ ಅಥವಾ ಒಪ್ಪಿಕೊಳ್ಳಲು ಇರಬಹುದಾದ ಆಯ್ಕೆಯ ಸ್ವಾತಂತ್ರ್ಯ ಕೂಡ ಪರಿಗಣಿಸಬೇಕಾಗುತ್ತದೆ.

ಆ ದೃಷ್ಟಿಯಲ್ಲಿ ಪರಿಸ್ಥಿತಿಯ ಸಂಪೂರ್ಣ ಅಧ್ಯಯನದ ಬಳಿಕ ನ್ಯಾಯಾಲಯ ಮಾತ್ರ ಇದನ್ನು ನಿರ್ಧರಿಸಲು ಸಾಧ್ಯ ಎಂದು ನ್ಯಾಯಮೂರ್ತಿಗಳು ಹಿಂದಿನ ಹಲವು ಕೋರ್ಟ್ ತೀರ್ಪುಗಳನ್ನು ಪ್ರಸ್ತಾಪಿಸಿದರು. ವಾಸ್ತವಾಂಶಗಳ ತಪ್ಪುಗ್ರಹಿಕೆಯಿಂದ ಲೈಂಗಿಕ ಕ್ರಿಯೆ ಹೆಣ್ಣು ಒಪ್ಪಿಗೆ ನೀಡಿದ್ದಾಳೋ ಅಥವಾ ಸ್ವಇಚ್ಛೆಯಿಂದ ಒಪ್ಪಿದ್ದಾಳೆಯೇ ಎಂಬುದನ್ನು ನಿರ್ಧರಿಸಲು ಯಾವುದೇ ಸ್ಪಷ್ಟ ಮಾನದಂಡಗಳಿಲ್ಲ.

ಹಾಗಾಗಿ ನ್ಯಾಯಾಲಯಗಳ ಹಿಂದಿನ ಪ್ರಕರಣಗಳೇ ಇದಕ್ಕೇ ಮಾರ್ಗದರ್ಶಿ. ಸಾಕ್ಷ್ಯಗಳ ಕೂಲಂಕಷ ಪರಿಶೀಲನೆಯಿಂದ ಮಾತ್ರ ಸತ್ಯವನ್ನು ನಿರ್ಧರಿಸಲು ಸಾಧ್ಯ ಎಂದ ನ್ಯಾ. ಮಿಶ್ರಾ, ಈ ಪ್ರಕರಣದಲ್ಲಿ ಅತ್ಯಾಚಾರ ಸಂತ್ರಸ್ತೆ 16 ವರ್ಷಕ್ಕಿಂತ ಚಿಕ್ಕವಳಿರುವುದರಿಂದ ಒಪ್ಪಿತ ಲೈಂಗಿಕ ಕ್ರಿಯೆ ಎಂಬುದು ಅಪ್ರಸ್ತುತ ಮತ್ತು ಅರ್ಥಹೀನವಾದ ಎಂದರು. ಇಂತಹ ಹೀನಕೃತ್ಯದಿಂದ ವ್ಯಕ್ತಿಗತ ಘನತೆ ಮತ್ತು ದೈಹಿಕ ಸಮಗ್ರ-ತೆಯನ್ನೇ ಪುಡಿಮಾಡುತ್ತಾರೆ ಎಂಬುದನ್ನು ಅರ್ಥಮಾಡಿಕೊಂಡರೆ ಶಿಕ್ಷೆಯನ್ನು ಕಡಿತಗೊಳಿಸುವ ಪ್ರಮೇಯವೇ ಬಾರದು ಎಂದು ಅವರು ಅಭಿಪ್ರಾಯಪಟ್ಟರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com