ಡಾ.ಅಬ್ದುಲ್ ಕಲಾಂ ಫೇಸ್ ಬುಕ್, ಟ್ವೀಟರ್ ಒಡತನಕ್ಕೆ ಕಿತ್ತಾಟ

ಮಾಜಿ ರಾಷ್ಟ್ರಪತಿ, ಮಿಸೈಲ್ ಮ್ಯಾನ್ ಡಾ.ಎಪಿಜೆ ಅಬ್ದುಲ್ ಕಲಾಂ ಸ್ವರ್ಗಸ್ಥರಾಗಿ ಒಂದು ವಾರ ಕಳೆದಿದೆ. ಆದರೆ ಅವರ ಸಹಾಯಕರ ನಡುವೆ ಫೇಸ್ ಬುಕ್, ಟ್ವೀಟರ್ ಒಡತನಕ್ಕೆ ಕಿತ್ತಾಟ ಆರಂಭವಾಗಿದೆ. ..
ಡಾ.ಎಪಿಜೆ ಅಬ್ದುಲ್ ಕಲಾಂ
ಡಾ.ಎಪಿಜೆ ಅಬ್ದುಲ್ ಕಲಾಂ

ಚೆನ್ನೈ: ಮಾಜಿ ರಾಷ್ಟ್ರಪತಿ, ಮಿಸೈಲ್ ಮ್ಯಾನ್ ಡಾ.ಎಪಿಜೆ ಅಬ್ದುಲ್ ಕಲಾಂ ಸ್ವರ್ಗಸ್ಥರಾಗಿ ಒಂದು ವಾರ ಕಳೆದಿದೆ. ಆದರೆ ಅವರ ಸಹಾಯಕರ ನಡುವೆ ಫೇಸ್ ಬುಕ್, ಟ್ವೀಟರ್ ಒಡತನಕ್ಕೆ ಕಿತ್ತಾಟ ಆರಂಭವಾಗಿದೆ.

ಶಿಲ್ಲಾಂಗ್ ನಲ್ಲಿ ಹೃದಯಾಘಾತದಿಂದ ಡಾ.ಕಲಾಂ ಅವರು ಸಾವನ್ನಪ್ಪಿದ ವೇಳೆ ಅವರ ಜೊತೆಗಿದ್ದ ಮಾಜಿ ಸಹಾಯಕ ಸೃಜನ್ ಪಾಲ್ ಸಿಂಗ್ ಈಗ ವಿವಾದದ ಕೇಂದ್ರ ಬಿಂದು.

 ಕೆಲ ವರ್ಷಗಳಿಂದ ಕಲಾಂ ಅವರ ನಿಕಟವರ್ತಿಯಾಗಿದ್ದ ಸೃಜನ್ ಪಾಲ್ ಸಿಂಗ್ ಕಲಾಂ ಅವರಿಂದ ಬೇರ್ಪಟ್ಟಿದ್ದರು ಎಂದು ಡಾ.ಅಬ್ದುಲ್ ಕಲಾಂ ಕಚೇರಿ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ದಿವಂಗತ ಡಾ. ಕಲಾಂ ಅವರ ಸಲಹೆಗಾರರಾಗಿರುವ ವಿ. ಪೂರ್ಣಾಜ್, ಸಿಂಗ್ ಕಲಾಂ ಅವರ ಅಧಿಕೃತ ಪ್ರತಿನಿಧಿಯಲ್ಲ, ಕಲಾಂ ಅವರು ಕೊನೆಯುಸಿರೆಳೆಯುವಾಗ ಅವರ ಜೊತೆ ಸಿಂಗ್ ಇದ್ದದ್ದು ಕೇವಲ ಆಕಸ್ಮಿಕ ಅಷ್ಟೇ ಎಂದು ಸ್ಪಷ್ಟನೆ ನೀಡಿದ್ದಾರೆ. ಸಡಜವ್ ಪಾಲ್ ಸಿಂಗ್ ಐಐಎಂ ಪದವೀಧರ ಹೀಗಾಗಿ ಅವರು ಅಲ್ಲಿಗೆ ಹೋಗಿದ್ದರು ಎಂದು ಹೇಳಿದ್ದಾರೆ.

ಡಾ. ಕಲಾಂ ಅವರು  ಸೋಮವಾರ ನಿಧನರಾದ ಕೆಲವೇ ಸಮಯದಲ್ಲಿ ಅವರ ಫೇಸ್ ಬುಕ್  ಹಾಗೂ ಟ್ವೀಟರ್ ಅಕೌಂಟ್ ನಿಂದ ಅಮರ ನೆನಪುಗಳು ಎಂದು ಅವರ ಫೋಟೋಗಳನ್ನು ಸೃಜನ್ ಪಾಲ್ ಸಿಂಗ್ ಅಪ್ ಲೋಡ್ ಮಾಡಿದ್ದರು.

ಇದಕ್ಕೆ ಪ್ರತಿಕ್ರಿಯಿಸಿರುವ ಪೂರ್ಣಾಜ್ ಕಲಾಂ ಅವರ ಫೇಸ್ ಬುಕ್ ಹಾಗೂ ಟ್ವೀಟರ್ ಅಕೌಂಟ್ ಗಳನ್ನು ಸೃಜನ್ ಪಾಲ್ ಸಿಂಗ್ ಅವರೇ ನಿರ್ವಹಣೇ ಮಾಡುತ್ತಿದ್ದರು. ಹೀಗಾಗಿ ಅವರು ನಿಧನದ ನಂತರ ಫೇಸ್ ಬುಕ್ ನಲ್ಲಿ ಅಪ್ ಲೋಡ್ ಮಾಡಿದ್ದಾರೆ ಎಂದು ಡಾ.ಕಲಾಂ ಅವರ ಜೊತೆ ಮೂರು ದಶಕಗಳಿಂದ ಒಡನಾಟದಲ್ಲಿದ್ದ ಅಧಿಕೃತ ಸಹಾಯಕರಾದ ಡಾ  ಪೂರ್ಣಾಜ್ ಹೇಳಿದ್ದಾರೆ. ಸೃಜನ್ ಪಾಲ್ ಸಿಂಗ್ ಕಲಾಂ ಅವರ ಅಧಿಕೃತ ಸಹಾಯಕರಲ್ಲ. ಎಂದು ಡಾ. ಕಲಾಂ ಅವರ ಕಚೇರಿ ಸ್ಪಷ್ಟ ಪಡಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com