ಹೊರಗೆ ಪ್ರತಿಭಟನೆ; ಒಳಗೆ ಕಲಾಪ

ಹೊರಗೆ ಪ್ರತಿಭಟನೆ, ಒಳಗೆ ಸುಗಮ ಕಲಾಪ. ಬುಧವಾರ ಸಂಸತ್ತಿನಲ್ಲಿ ತದ್ವಿರುದ್ಧ ದಶ್ಯಗಳು ಕಂಡು ಬಂದವು. ಮುಂಗಾರು ಅಧಿವೇಶನದಲ್ಲಿ ಇದೇ...
ಸಂಸತ್ತಿನ ಹೊರಗೆ ಕಾಂಗ್ರೆಸ್ ಪ್ರತಿಭಟನೆ (ಕೃಪೆ : ಪಿಟಿಐ)
ಸಂಸತ್ತಿನ ಹೊರಗೆ ಕಾಂಗ್ರೆಸ್ ಪ್ರತಿಭಟನೆ (ಕೃಪೆ : ಪಿಟಿಐ)

ನವದೆಹಲಿ: ಹೊರಗೆ ಪ್ರತಿಭಟನೆ, ಒಳಗೆ ಸುಗಮ ಕಲಾಪ. ಬುಧವಾರ ಸಂಸತ್ತಿನಲ್ಲಿ ತದ್ವಿರುದ್ಧ  ದಶ್ಯಗಳು ಕಂಡು ಬಂದವು. ಮುಂಗಾರು ಅಧಿವೇಶನದಲ್ಲಿ ಇದೇ
ಮೊದಲ ಬಾರಿಗೆ ಲೋಕಸಭಾ ಕಲಾಪಗಳು ಸುಸೂತ್ರವಾಗಿ  ನಡೆದವು. ಕಲಾಪಗಳಿಗೆ ಅಡ್ಡಿ ಮಾಡಿದ 25 ಮಂದಿ ಕಾಂಗ್ರೆಸ್ ಸದಸ್ಯರನ್ನು ಐದು ದಿನ ಲೋಕಸಭೆಯಿಂದ ಅಮಾನತು ಮಾಡಿದ್ದನ್ನು ಖಂಡಿಸಿ ಕಾಂಗ್ರೆಸ್ ಮತ್ತಿತರ ಪ್ರತಿಪಕ್ಷಗಳು ಬುಧವಾರವೂ ಕಲಾಪಗಳನ್ನು ಬಹಿಷ್ಕರಿಸಿ ಪ್ರತಿಭಟನೆ  ಮುಂದುವರಿಸಿದವು. ಆದರೆ, ಪ್ರತಿಪಕ್ಷಗಳ ಹೊರತಾಗಿಯೂ ಲೋಕಸಭಾಕಲಾಪ ಸಂಪೂರ್ಣವಾಗಿ, ಸುಸೂತ್ರವಾಗಿ ನಡೆಯಿತು. ಹೆಚ್ಚುವರಿ ಅನುದಾನ ಬೇಡಿಕೆಗೆ ಸರ್ಕಾರ ಅನುಮೋದನೆ ಪಡೆಯಿತು. ಜತೆಗೆ ದೆಹಲಿ ಹೈಕೋರ್ಟ್ ತಿದ್ದುಪಡಿ ಮಸೂದೆ ಅಂಗೀಕರಿಸಲಾಯಿತು.
ರಾಜ್ಯಸಭೆಯಲ್ಲಿ ಇದಕ್ಕೆ ತದ್ವಿರುದ್ಧವಾಗಿ ಯಾವ ಕಲಾಪವೂ ನಡೆಯಲಿಲ್ಲ. ಬುಧವಾರ ಬೆಳಗ್ಗೆ ಕಲಾಪ ಆರಂಭವಾಗುತ್ತಿದ್ದಂತೆ ಮಧ್ಯಪ್ರದೇಶದಲ್ಲಿ ನಡೆದ ಅವಳಿ ರೈಲು ಅಪಘಾತದಲ್ಲಿ ಮತಪಟ್ಟವರ ಗೌರವಾರ್ಥ ಮೌನ ಆಚರಿಸಲಾಯಿತು. ನಂತರ ಪ್ರಶ್ನೋತ್ತರ ಕಲಾಪ ಆರಂಭವಾಗುವ ಮುನ್ನವೇ ಪ್ರತಿಪಕ್ಷಗಳ ಸದಸ್ಯರು ಸದನದ ಬಾವಿಗಳಿದು ಪ್ರತಿಭಟನೆಗೆ ಇಳಿದ ಕಾರಣ ಸಭಾಪತಿ ಕಲಾಪವನ್ನು 12 ಗಂಟೆಗೆ ಮುಂದೂಡಿದರು. 2 ಗಂಟೆಗೆ ಸದನ ಸಮಾವೇಶಗೊಂಡಾಗ ಪರಿಸ್ಥಿತಿ ಸುಧಾರಿಸದೇ ಇದ್ದು ದರಿಂದ ಕಲಾಪ ಗುರುವಾರಕ್ಕೆ ಮುಂದೂಡಲಾಯಿತು. ಲೋಕಸಭೆಯಲ್ಲಿ ಪ್ರಶ್ನೋತ್ತರ ಕಲಾಪ, ಶೂನ್ಯವೇಳೆ,
ತುರ್ತು ವಿಷಯಗಳ ಪ್ರಸ್ತಾಪ ಸೇರಿದಂತೆ ಎಲ್ಲ ಕಲಾಪಗಳು ನಡೆದವು. ಆರಂಭದಲ್ಲಿ ಪ್ರತ್ಯೇಕ ಹೈಕೋರ್ಟ್‍ಗಾಗಿ ಒತ್ತಾಯಿಸಿ ತೆಲಂಗಾಣ ಸದಸ್ಯರು ಪ್ರತಿಭಟನೆ ನಡೆಸಿದರಾ
ದರೂ ಕಲಾಪಗಳಿಗೆ ಅಡ್ಡಿಯಾಗಲಿಲ್ಲ. ಹೆಚ್ಚುವರಿ ಬೇಡಿಕೆಗಳ ಕುರಿತಂತೆ ವಿವಿಧ ಪಕ್ಷಗಳ ಸದಸ್ಯರು ಮಾತನಾಡಿದರು. ಪ್ರತಿಪಕ್ಷಗಳ ಸದಸ್ಯರು ಕಲಾಪ ಬಹಿಷ್ಕರಿಸಿದ್ದರಿಂದ ಬಹುತೇಕ
ಎನ್‍ಡಿಎ ಅಂಗಪಕ್ಷಗಳ ಸದಸ್ಯರೇ ಬೇಡಿಕೆಗಳ ಕುರಿತಂತೆ ಚರ್ಚೆಯಲ್ಲಿ ಪಾಲ್ಗೊಂಡರು. ಚರ್ಚೆಗೆ ಉತ್ತರಿಸಿದ ಹಣಕಾಸು ಸಚಿವ ಅರುಣ್ ಜೇಟ್ಲಿ , ``ಸರಕು ಮತ್ತು ಸೇವಾ ತೆರಿಗೆ ಜಾರಿ ನಂತರ ರಾಜ್ಯಗಳು ತೆರಿಗೆ ಸಂಗ್ರಹ ಕಡಮೆ ಆಗುವುದಿಲ್ಲ, ಈಗಿರುವುದಕ್ಕಿಂತ ಹೆಚ್ಚಿನ ತೆರಿಗೆ ಸಂಗ್ರಹವಾಗಲಿದೆ. ಅಂತಹ ಪರಿಸ್ಥತಿ ಬಂದರೆ ಕೇಂದ್ರ ಸರ್ಕಾರ ತೆರಿಗೆ ನಷ್ಟ ಭರಿಸಲಿದೆ ಎಂಬ ಭರವಸೆ ನೀಡಿದರು. ಹೊಸ ಕಾನೂನು ಅನುಷ್ಠಾನಕ್ಕೆ ಬಂದ ನಂತರ ಆರ್ಥಿಕತೆ ಚೇತರಿಸಿಕೊಳ್ಳಲಿದೆ'' ಎಂದರು.

ಮುಂದುವರಿದ ಪ್ರತಿಭಟನೆ: ಸಂಸತ್ ಆವರಣ ದಲ್ಲಿರುವ ಗಾಂ„ ಪ್ರತಿಮೆ ಮುಂದೆ ಬುಧವಾರವೂಕಾಂಗ್ರೆಸ್ ಮತ್ತು ಇತರ ಪ್ರತಿಪಕ್ಷಗಳು ಪ್ರತಿಭಟನೆ ಮುಂದುವರಿಸಿದವು. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿಉಪಾಧ್ಯಕ್ಷ ರಾಹುಲ್  ಗಾಂಧಿ, ಮಾಜಿ ಪ್ರಧಾನಿ ಮನಸಿಂಗ್   ಮನಮೋಹನ್ ಸಿಂಗ್, ಮಲ್ಲಿಕಾರ್ಜುನ ಖರ್ಗೆ ಇದ್ದರು.``ಸ್ಪೀಕರ್ ಸುಮಿತ್ರಾ ಮಹಾಜನ್ ಸ್ಥಾನದ ಬಗ್ಗೆ ನಮಗೆ ಗೌರವ ಇದೆ. ಆದರೆ, ಅವರ ನಿರ್ಣಯ ನ್ಯಾಯಸಮ್ಮತವಾಗಿಲ್ಲ'' ಎಂದು ರಾಹುಲ್ ಗಾಂ„ ಹೇಳಿದರು.25 ಸದಸ್ಯರ ಅಮಾನತು ಆದೇಶ ಹಿಂದಕ್ಕೆ ಪಡೆಯುವಬಗ್ಗೆ ಚರ್ಚಿಸಲಾಗುತ್ತಿದೆ ಎಂಬ ವರದಿಗಳ ಬಗ್ಗೆ ಪ್ರತಿಕ್ರಿಯೆ ನೀಡಿದ ರಾಹುಲ್‍ಗಾಂಧಿ``ನಮಗೆ ಇಂಥ ಪ್ರಸ್ತಾಪಬಂದಿಲ್ಲ. ಶುಕ್ರವಾರವೂ ಗಾಂಧಿ ಪ್ರತಿಮೆ ಮುಂದೆ ಪ್ರತಿಭಟನೆ ನಡೆಸಲಿದ್ದೇವೆ ಎಂದಿದ್ದಾರೆ.  ಈ ಮಧ್ಯೆ ಕಾಂಗ್ರೆಸ್ ಕಾರ್ಯಕರ್ತರು ಸ್ಪೀಕರ್ ಸುಮಿತ್ರಾ ಮಹಾಜನ್ ನಿವಾಸಕ್ಕೆಮುತ್ತಿಗೆ ಹಾಕಲು ಪ್ರಯತ್ನಿಸಿದರು. ಅವರನ್ನು ಚದುರಿಸಲು
ಜಲಫಿರಂಗಿ, ಲಾಠಿ ಪ್ರಯೋಗ ಮಾಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com