ಐಐಟಿ, ಎನ್ಐಟಿಯಿಂದ ಮೂರು ವರ್ಷಗಳಲ್ಲಿ 4, 400 ವಿದ್ಯಾರ್ಥಿಗಳು ಡ್ರಾಪ್ ಔಟ್!

ಕಳೆದ ಮೂರು ವರ್ಷದಲ್ಲಿ ಸುಮಾರು 4 , 400 ಕ್ಕೂ ಹೆಚ್ಚು ಐಐಟಿ ಎನ್.ಐ.ಟಿ ವಿದ್ಯಾರ್ಥಿಗಳು ಅರ್ಧದಲ್ಲೇ ಕೋರ್ಸ್ ಗಳನ್ನು ಮೊಟಕುಗೊಳಿಸಿದ್ದಾರೆ ಎಂದು ಸರ್ಕಾರ ತಿಳಿಸಿದೆ.
ಐಐಟಿ
ಐಐಟಿ

ನವದೆಹಲಿ: ಕಳೆದ ಮೂರು ವರ್ಷದಲ್ಲಿ ಸುಮಾರು 4 , 400 ಕ್ಕೂ ಹೆಚ್ಚು ಐಐಟಿ, ಎನ್.ಐ.ಟಿ ವಿದ್ಯಾರ್ಥಿಗಳು ಅರ್ಧದಲ್ಲೇ ಕೋರ್ಸ್ ಗಳನ್ನು ಮೊಟಕುಗೊಳಿಸಿದ್ದಾರೆ ಎಂದು ಸರ್ಕಾರ ತಿಳಿಸಿದೆ.
ವಿದ್ಯಾರ್ಥಿಗಳು ಭಾರತೀಯ ತಂತ್ರಜ್ಞಾನ ಸಂಸ್ಥೆ, ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆಯ ಕೋರ್ಸ್ ಗಳನ್ನು ಅರ್ಧಕ್ಕೇ ಮೊಟಕುಗೊಳಿಸಲು ಶೈಕ್ಷಣಿಕ ಒತ್ತಡವೇ ಪ್ರಮುಖ ಕಾರಣ ಎಂದು ಸರ್ಕಾರ ತಿಳಿಸಿದೆ. ಲೋಕಸಭೆಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಮಾನವ ಸಂಪನ್ಮೂಲ ಇಲಾಖೆ ಸಚಿವೆ ಸ್ಮೃತಿ ಇರಾನಿ, 2012 -13 ಹಾಗೂ 2014 -15 ನೇ ಸಾಲಿನಲ್ಲಿ ವಿವಿಧ ಐಐಟಿಗಳಿಂದ ಸುಮಾರು 2,060 ವಿದ್ಯಾರ್ಥಿಗಳು ಡ್ರಾಪ್ ಔಟ್ ಆಗಿದ್ದರೆ, ಎನ್ಐಟಿ ಯಲ್ಲಿದ್ದ ಸುಮಾರು 2,352 ವಿದ್ಯಾರ್ಥಿಗಳು ಮಧ್ಯಭಾಗದಲ್ಲೇ ಕೋರ್ಸ್ ಗಳನ್ನು ಬಿಟ್ಟಿದ್ದಾರೆ ಎಂದು ತಿಳಿಸಿದ್ದಾರೆ.

4 ವರ್ಷದ ಪದವಿಪೂರ್ವ ಶಿಕ್ಷಣವನ್ನು 7ವರ್ಷಗಳಲ್ಲಿಪೂರ್ಣಗೊಳಿಸಬಹುದಾಗಿದೆಯಾದರೂ, ಡ್ರಾಪ್ ಔಟ್ ಗಳ ಸಂಖ್ಯೆ ಹೆಚ್ಚುತ್ತಿದೆ ಎಂದು ಸ್ಮೃತಿ ಇರಾನಿ ತಿಳಿಸಿದ್ದಾರೆ.2012 -13 ರಲ್ಲಿ 606 , 2013 - 14  ರಲ್ಲಿ 697 ಇದ್ದ ಡ್ರಾಪ್ ಔಟ್ ವಿದ್ಯಾರ್ಥಿಗಳ ಸಂಖ್ಯೆ ನಂತರದ ವರ್ಷದಲ್ಲಿ 757 ಕ್ಕೆ ಏರಿಕೆಯಾಗಿದೆ.  
16 ಐಐಟಿಗಳಲ್ಲಿ ರೂರ್ಕಿ ಐಐಟಿ(228 ) ಅತಿ ಹೆಚ್ಚು ವಿದ್ಯಾರ್ಥಿಗಳು ಕೋರ್ಸ್ ಗಳನ್ನು ಅರ್ಧಕ್ಕೇ ಮೊಟಕುಗೊಳಿಸಿ ವಾಪಸ್ಸಾಗಿದ್ದಾರೆ,  ನಂತರದ ಸ್ಥಾನದಲ್ಲಿರುವ ಖರಗ್ಪುರ ಐಐಟಿ, ದೆಹಲಿ ಐಐಟಿಗಳಲ್ಲಿ ಅನುಕ್ರಮವಾಗಿ 209 169  ವಿದ್ಯಾರ್ಥಿಗಳು  ಡ್ರಾಪ್ ಔಟ್ ಆಗಿದ್ದಾರೆ.

ವಿಶೇಷವೆಂದರೆ 2014 - 15 ನೇ ಸಾಲಿನ್ನಲ್ಲಿ ಮದ್ರಾಸ್ ಐಐಟಿ, ಖಾನ್ ಪುರ, ಜೋಧ್ ಪುರ, ರೋಪಾರ್ ಐಐಟಿಗಳಲ್ಲಿ ಡ್ರಾಪ್ ಔಟ್ ಪ್ರಕರಣಗಳೇ ವರದಿಯಾಗಿಲ್ಲ.  ಒಟ್ಟಾರೆ ಡ್ರಾಪ್ ಔಟ್ ಗಳ ಸಂಖ್ಯೆ ಎನ್ಐಟಿಗಳಲ್ಲಿ ಗಣನೀಯವಾಗಿ ಇಳಿಕೆಯಾಗುತ್ತಿದೆ.

ಐಐಟಿ/ ಎನ್ಐಟಿ ಶಿಕ್ಷಣವನ್ನು ಅರ್ಧದಲ್ಲೇ ಬಿಡುವುದಕ್ಕೆ ಬೇರೆ ಕಾಲೇಜು/ ಸಂಸ್ಥೆಗಳಿಗೆ ವರ್ಗಾವಣೆಯಾಗುವುದು, ವಯಕ್ತಿಕ , ವೈದ್ಯಕೀಯ, ಪಿಜಿ ಕೋರ್ಸ್ ಗಳ ವೇಳೆ ನೌಕರಿ ಸಿಗುವುದು ಶೈಕ್ಷಣಿಕ ಒತ್ತಡವನ್ನು ತಡೆಯಲಾಗದೆ ಇರುವುದು ಪ್ರಮುಖ ಕಾರಣಗಳಿರಬಹುದು ಎಂದು ಸ್ಮೃತಿ ಇರಾನಿ ಅಭಿಪ್ರಾಯಪಟ್ಟಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com