
ನವದೆಹಲಿ: ಮುಂಬೈ ದಾಳಿಯಲ್ಲಿ ಪಾಲ್ಗೊಂಡಿದ್ದ ಅಜ್ಮಲ್ ಕಸಬ್‍ಗೂ ಉಧಾಂಪುರದಲ್ಲಿ ಇತ್ತೀಚೆಗೆ ಸೆರೆ ಸಿಕ್ಕ ಉಗ್ರ ನಾವೇದ್ ಯಾಕೂಬ್‍ಗೂ ತರಬೇತಿ ನೀಡಿದ್ದು ಒಂದೇ ಕ್ಯಾಂಪ್‍ನಲ್ಲಿ! ಹೌದು, ಈ ವಿಚಾರವನ್ನು ಸ್ವತಃ ನಾವೇದ್‍ನೇ ಬಹಿರಂಗಪಡಿಸಿದ್ದಾನೆ. ಮುಂಬೈ ದಾಳಿ ಬಳಿಕ ಲಷ್ಕರ್-ಎ- ತೊಯ್ಬಾ ಸಂಘಟನೆಯ ಉಗ್ರರ ಕ್ಯಾಂಪ್ ಮೇಲೆ ಪಾಕ್ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎನ್ನುವುದಕ್ಕೆ ಇದು ಮತ್ತೊಂದು
ಉದಾಹರಣೆ. ಕಸಬ್‍ಗೆ ತರಬೇತಿ ನೀಡಲಾಗಿದ್ದ ಲಷ್ಕರ್-ಎ- ತೊಯ್ಬಾದ ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಮನ್ಸ್‍ಹೆರ್ರಾದಲ್ಲಿರುವ ಮರ್ಕಜ್ ತೈಬಾ ಕ್ಯಾಂಪ್ ಈಗಲೂ ಅಸ್ತಿತ್ವದಲ್ಲಿದೆ ಎನ್ನುವುದು ಈ ಮೂಲಕ ಬಹಿರಂಗವಾಗಿದೆ ಎಂದು ``ಇಂಡಿಯನ್ ಎಕ್ಸ್‍ಪ್ರೆಸ್'' ವರದಿ ಮಾಡಿದೆ ಖ್ವಾಸಿಂ ಖಾನ್ ಎನ್ನುವ ಕೋಡ್‍ನೇಮ್ ನಲ್ಲಿ ಕಾರ್ಯಾಚರಿಸುತ್ತಿರುವ ಲಷ್ಕರ್‍ನ ದಕ್ಷಿಣ ಕಾಶ್ಮೀರದ ಕಮಾಂಡರ್ ಕೈಕೆಳಗೆ ಕೆಲಸ ಮಾಡುವಂತೆ ನಾವೇದ್‍ಗೆ ಸೂಚಿಸಲಾಗಿತ್ತು. ನಾವೇದ್ ಈ ಹಿಂದೆ ಯಾವುದೇ ಉಗ್ರ ದಾಳಿಯಲ್ಲಿ ಪಾಲ್ಗೊಂಡಿರಲಿಕ್ಕಿಲ್ಲ. ಆತ ಈ ಹಿಂದೆ ದಾಳಿಯಲ್ಲಿ ಪಾಲ್ಗೊಂಡಿದ್ದ ಎನ್ನುವುದಕ್ಕೆ ನಮ್ಮ ಬಳಿ ಯಾವುದೇ ಸಾಕ್ಷ್ಯಗಳಿಲ್ಲ ಎಂದು ಜಮ್ಮು ಮತ್ತು ಕಾಶ್ಮೀರದ ಡಿಜಿಪಿ ಕೆ. ರಾಜೇಂದ್ರ ಹೇಳಿದ್ದಾರೆ. ಗುಂಡು ಹಾರಾಟ: ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಶುಕ್ರವಾರ ಬೆಳಗ್ಗೆ ಮತ್ತೆ ಪಾಕಿಸ್ತಾನ ಸೇನೆ ಬಿಎಸ್‍ಎಫ್ ಯೋಧರು ಹಾಗೂ ಜನವಸತಿ ಪ್ರದೇಶಗಳನ್ನು ಗುರಿಯಾಗಿರಿಸಿಕೊಂಡು ದಾಳಿ ನಡೆಸಿದೆ. ಇದೇ ವೇಳೆ ಪುಲ್ವಾಮಾದಲ್ಲಿ ಗುರುವಾರ ರಾತ್ರಿ ನಡೆದ ಎನ್‍ಕೌಂಟರ್ ಬಳಿಕ ಬದುಕುಳಿದಿದ್ದ ಒಬ್ಬ ಲಷ್ಕರ್-ಎ- ತೊಯ್ಬಾ ಪರಾರಿಯಾಗಿದ್ದಾನೆ.
Advertisement