
ಪಣಜಿ: ಲೂಯಿಸ್ ಬರ್ಜರ್‍ನ ಜೈಕಾ ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನದ ಭೀತಿಯಲ್ಲಿದ್ದ ಗೋವಾ ಮಾಜಿ ಮುಖ್ಯಮಂತ್ರಿ ದಿಗಂಬರ್ ಕಾಮತ್ ಸ್ವಲ್ಪ ಮಟ್ಟಿಗೆ ನಿರಾಳರಾಗಿದ್ದಾರೆ. ಅವರು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆಯನ್ನು ಶುಕ್ರವಾರ ಕೈಗೆತ್ತಿ ಕೊಂಡ ಪಣಜಿಯ ವಿಶೇಷ ನ್ಯಾಯಾಲಯ, ಈ ಕುರಿತ ತೀರ್ಪನ್ನು ಆ.12 ಕ್ಕೆ ಕಾಯ್ದಿರಿಸಿದೆ.
ಜತೆಗೆ, ಅಲ್ಲಿಯವರೆಗೆ ಅವರನ್ನು ಪೊಲೀಸರು ಬಂಧಿಸದಂತೆ ಸೂಚಿಸಿದೆ. ಮತ್ತೊಂದು ಬೆಳವಣಿಗೆಯಲ್ಲಿ ಪೊಲೀಸರು ದುಬೈ ಮೂಲದ ರಾಯ್ ಚಂದ್ ಸೋನಿ ಎಂಬ ಹವಾಲಾ ಆಪ ರೇಟರ್‍ನನ್ನು ಬಂಧಿಸಿದ್ದಾರೆ. ಜಾರಿ ನಿರ್ದೇಶನಾಲಯ ಹವಾಲಾ ಜಾಲ ಪ್ರಕರಣದಡಿ ಕೇಸು ದಾಖಲಿಸಿದೆ.
ಗೆಸ್ಟಪೋ ಇದ್ದಂತೆ: ಗೋವಾ ಪ್ರತಿಪಕ್ಷ ನಾಯಕ ಪ್ರತಾಪ್‍ಸಿಂಗ್ ರಾಣೆ ಅವರು ಕ್ರೈಂ ಬ್ರಾಂಚ್ ಪೋಲೀಸರನ್ನು ಗೆಸ್ಟಪೋ(ರಹಸ್ಯ ಜರ್ಮನ್ ನಾಜಿ ದಳ)ಗೆ ಹೋಲಿಸಿದ್ದಾರೆ. ಪೋಲೀಸರು
ಗೆಸ್ಟಪೋದಂತೆ ವರ್ತಿಸುತ್ತಿದ್ದಾರೆ ಎಂದಿದ್ದಾರೆ.
Advertisement